Advertisements

ಅಣ್ಣನ ಆಸೆಯನ್ನ ಪೂರ್ತಿ ಮಾಡೋ ಕೆಲಸಕ್ಕೆ ಮುಂದಾಗಿರುವ ಧ್ರುವ ಸರ್ಜಾ..

Cinema

ಸ್ಯಾಂಡಲ್ವುಡ್ ಯುವನಟ ಚಿರಂಜೀವಿ ಸರ್ಜಾ ಅವರು ನಿಧನರಾಗಿ ೨೦ ದಿನಗಳು ಕಳೆದೆ ಹೋಗಿವೆ. ಧಿಡೀರನೆ ಬಂದ ಚಿರು ಸರ್ಜಾ ಅವರ ಸಾವು ಅಷ್ಟು ಬೇಗ ಮರೆಯವಂತದ್ದೇನು ಅಲ್ಲ. ಅಭಿಮಾನಿಗಳೇ ಚಿರುವನ್ನ ಮರೆಯಲಾಗದೆ ಇರುವಾಗ ಇನ್ನು ಅವರ ಕುಟುಂಬದವರ ಪಾಡೇನು. ಸಹೋದರ ಧ್ರುವ ಸರ್ಜಾ, ಮಾವ ಅರ್ಜುನ್ ಸರ್ಜಾ ಹಾಗೂ ಪತ್ನಿ ಮೇಘನಾ ರಾಜ್ ಸೇರಿದಂತೆ ಕುಟುಂಬದವರು ಅನುಭವಿಸುತ್ತಿರುವ ನೋವು ಇಷ್ಟು ಬೇಗೆ ಕಡಿಮೆಯಾಗುವಂತದ್ದಲ್ಲ.

Advertisements

ಇನ್ನು ಇದರ ನಡುವೆ ಚಿರಂಜೀವಿ ಸರ್ಜಾ ನಟಿಸುತ್ತಿದ್ದ ಚಿತ್ರಗಳು ಈಗ ಅರ್ಧಕ್ಕೆ ನಿಂತು ಹೋಗಿವೆ. ಆದರೆ ಅಣ್ಣನನ್ನ ಅತಿಯಾಗಿ ಪ್ರೀತಿಸುವ ಧ್ರುವ ಸರ್ಜಾ ಅಣ್ಣ ನಟಿಸಿ ಅರ್ಧಕ್ಕೆ ನಿಂತಿರುವ ಚಿತ್ರಗಳು ಪೂರ್ತಿಯಾಗಲೇಬೇಕು, ಯಾವುದೇ ಕಾರಣಕ್ಕೂ ಅರ್ಧಕ್ಕೆ ನಿಲ್ಲಬಾರದು ಎಂದು ನಿರ್ಧಾರವೊಂದನ್ನ ತೆಗೆದುಕೊಂಡಿರುವ ಧ್ರವ ಸರ್ಜಾ, ಅಣ್ಣನ ಆಸೆಗಳನಂ ಒಂದೊಂದಾಗಿ ಪೂರೈಸೋದಕ್ಕೆ ಮುಂದಾಗಿದ್ದಾರೆ. ಚಿರು ಸರ್ಜಾ ಅವರು ‘ರಾಜಾ ಮಾರ್ತಾಂಡ’ ಚಿತ್ರದಲ್ಲಿ ನಟಿಸಿದ್ದು ಈಗ ಅದು ಅರ್ಧಕ್ಕೆ ನಿಂತು ಹೋಗಿದೆ.

ಆದರೆ ಧ್ರುವ ಸರ್ಜಾ ಆ ಸಿನಿಮಾದ ನಿಂತು ಹೋಗಿದ್ದ ಕೆಲಸಗಳನ್ನ ಪೂರ್ತಿ ಮಾಡೋ ಕೆಲಸಕ್ಕೆ ಮುಂದಾಗಿದ್ದು, ಚಿರಂಜೀವಿ ಸರ್ಜಾ ನಟಿಸಿದ್ದ ಪಾತ್ರಕ್ಕೆ ಡಬ್ಬಿಂಗ್ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ಸಿನಿಮಾ ಚಿರು ಸರ್ಜಾ ಅವರ ಕೊನೆಯ ಚಿತ್ರವಾಗಿದ್ದು, ಬಹುನಿರೀಕ್ಷಿತ ಸಿನಿಮಾ ಕೂಡ ಆಗಿದೆ. ಸಿನಿಮಾದ ಕೆಲಸಗಳೇನೋ ಪೂರ್ತಿಗೊಂಡಿವೆ. ಆದರೆ ಡಬ್ಬಿಂಗ್ ಮಾಡುವ ಕೆಲಸ ಬಾಕಿ ಇದ್ದು, ಚಿರು ನಿಧನದ ಬಳಿಕ ಅದು ಅರ್ಧಕ್ಕೆ ನಿಂತು ಹೋಗಿತ್ತು. ಈಗ ಪ್ರೀತಿಯ ಅಣ್ಣನ ಪಾತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್ ಮಾಡಲಿದ್ದಾರೆ.