Advertisements

ಅಪ್ಪು ಸತ್ತಾಗ ನೋಡಲು ಬರದೇ ನಂತರ ಯಾವ ಕಾರ್ಯಕ್ರಮಕ್ಕು ಭಾಗಿಯಾಗದ ರಾಧಿಕಾ ಪಂಡಿತ್ 15 ದಿನಗಳ ಬಳಿಕ ಪುನಿತ್ ಫೋಟೋ ಹಂಚಿಕೊಂಡು ಏನ್ ಹೇಳಿದ್ದಾರೆ ಗೊತ್ತಾ?

Uncategorized

ಪುನೀತ್ ರಾಜಕುಮಾರ್ ನಿ’ಧ’ನ ಹೊಂದಿದ ನಂತರ ಸ್ಯಾಂಡಲ್ ವುಡ್ ನ ಬಹುತೇಕ ಸೆಲೆಬ್ರಿಟಿಗಳು ರಾಜಕಾರಣಿಗಳು ಅವರ ಅಂ’ತ್ಯ’ಕ್ರಿಯೆ ಅಂ’ತಿ’ಮ ದರ್ಶನ ಪಡೆದು ಬಂದಿದ್ದರು. ಆದರೆ ರಾಧಿಕಾ ಪಂಡಿತ್ ಎಲ್ಲೂ ಕಾಣಿಸಲಿಲ್ಲ ಆದರೆ ಇದರ ಬಗ್ಗೆ ಯಾವ ಪೋಸ್ಟ್ ಕೂಡ ಹಾಕಲಿಲ್ಲ. ಪುನೀತ್ ನಿ’ಧ’ನ ಹೊಂದಿ ಹದಿನೈದು ದಿನಗಳಾದ ನಂತರ ಅವರ ಜೊತೆ ಇರುವ ಫೋಟೋವನ್ನ ರಾಧಿಕಾ ಅವರ ಅಂಚಿ ಕೊಳ್ಳುವ ಮೂಲಕ ಅವರನ್ನ ನೆನಪಿಸಿಕೊಂಡಿದ್ದಾರೆ. ಈ ಪೋಸ್ಟ್ ಗೆ ಸಾಕಷ್ಟು ಜನರು ನೀವು ಅಪ್ಪು ಸರ್ ನ ಕೊನೆಯ ಬಾರಿ ನೋಡಕ್ಕೆ ಬರ್ಲಿಲ್ಲ ತುಂಬಾ ಬೇಸರವಾಯಿತು ಎಂಬ ಇತ್ಯಾದಿ ಕಾಮೆಂಟ್ ಹಾಕಿದ್ರು ಇದು ರಾಧಿಕಾ ಅವರಿಗೆ ಬೇಸರ ಮೂಡಿಸಿದೆ ಇದಕ್ಕೆ ಉತ್ತರವನ್ನ ನೀಡಿದ್ದಾರೆ.. ಪುನೀತ್ ರಾಜ್ ಕುಮಾರ್ ಹಾಗೂ ರಾಧಿಕಾ ಪಂಡಿತ್ ದೊಡ್ಮನೆ ಹುಡುಗ ಹುಡುಗರು ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು..

[widget id=”custom_html-3″]

Advertisements

ಹೀಗಾಗಿ ಇಬ್ಬರ ನಡುವೆ ಒಳ್ಳೆಯ ಬಾಂಧವ್ಯವಿತ್ತು. ಪುನೀತ್ ನಿ’ಧ’ನ ಹೊಂದಿರುವ ವಿಚಾರ ರಾಧಿಕಾಗೆ ತೀವ್ರ ನೋ’ವ’ನ್ನು ತಂದಿದೆ. ಆದರೆ ಈ ಬಗ್ಗೆ ಅವರು ಯಾವುದೇ ಪೋಸ್ಟ್ ಹಾಕಿರಲಿಲ್ಲ. ಈಗ ರಾಧಿಕಾ ಅವರು ಪುನೀತ್ ಬಗ್ಗೆ ಬರೆದುಕೊಂಡಿದ್ದಾರೆ. ನೀವಿಲ್ಲ ಎಂಬುದನ್ನ ಒಪ್ಪಿಕೊಳ್ಳೋಕೆ ಆಗುತ್ತಿಲ್ಲ ನಿಮ್ಮ ಜಾಗವನ್ನ ಕನ್ನಡ ಚಿತ್ರರಂಗದಲ್ಲಿ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ನೀವಿಲ್ಲದೆ ಚಿತ್ರರಂಗ ಎಂದಿನಂತೆ ಇರೋದಿಲ್ಲ. ನಿಮ್ಮ ಜೊತೆ ಕೆಲಸ ಮಾಡಲು ಸಿಕ್ಕಿದ್ದು ನಮ್ಮ ಅದೃಷ್ಟ. ನಮಗೆಲ್ಲ ನೆನಪಿನಲ್ಲಿ ನೀವೀಗ ಎಂದಿಗಿಂತ ಸನಿಹ ಎಂದು ಬರೆದುಕೊಂಡಿದ್ದರು. ಇದಕ್ಕೆ ಸಾಕಷ್ಟು ಜನರು ಬೇಸರ ಹೊರಹಾಕಿದರು. ಅವರ ಬಗ್ಗೆ ಪೋಸ್ಟ್ ಮಾಡೋಕೆ ಇಷ್ಟು ದಿನ ಬೇಕಾಗಿತ್ತಾ ಅಂತ ಪ್ರಶ್ನೆ ಕೇಳಿದ್ರು. ಅಂತಿಮ ದರ್ಶನ ಯಾಕೆ ಪಡೆದಿಲ್ಲ ಅಂತ ಪ್ರಶ್ನೆ ಮಾಡಿದ್ರು.

[widget id=”custom_html-3″]

ಇದಕ್ಕೆ ರಾಧಿಕಾ ರವರು ಉತ್ತರಿಸಿದ್ದಾರೆ. ಜೀವನದಲ್ಲಿ ಒಬ್ಬರ ಮೇಲೆ ಕೋಪ ಇದ್ರು ಪ್ರೀತಿ ಹಂಚಿ ತಾಳ್ಮೆ ಇರಲಿ. ನಾನು ಅಂತಿಮ ದರ್ಶನ ಪಡೆದೆನೋ ಇಲ್ವೋ ಎಂಬುದು ಅವರ ಕುಟುಂಬಕ್ಕೆ ತಿಳಿದಿದೆ. ಕ್ಯಾಮೆರಾ ಮುಂದೆ ಬಂದು ಮಾತನಾಡುವ ಶಕ್ತಿ ನನಗಿರಲಿಲ್ಲ. ಕ್ಯಾಮೆರಾ ಮುಂದೆ ಬಂದು ಮಾತನಾಡದೆ ಇರುವುದು ದೊಡ್ಡ ತಪ್ಪು ಎಂದು ನಾನು ಭಾವಿಸಿರಲಿಲ್ಲ.ಅವರ ಮೇಲಿರುವ ಪ್ರೀತಿಗೆ ನೀವು ಹೀಗೆ ಮಾತನಾಡುತ್ತಿರುವುದು ಸಹಜ. ಅಪ್ಪು ಸರ್ ಅಗಲಿಕೆ ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಾದ ನಿಮಗೆ ಎಷ್ಟು ನೋವು ನೀಡುತ್ತಿದೆಯೋ. ಅಷ್ಟೇ ನೋವು ನನಗೂ ನನ್ನ ಕುಟುಂಬಕ್ಕೂ ಆಗಿದೆ. ನಮ್ಮೆಲ್ಲರ ನೆಚ್ಚಿನ ಅಪ್ಪು ಸರ್ ಅಗಲಿಕೆ ಎಂದೆಂದಿಗೂ ನಮ್ಮನ್ನು ಕಾಡುತ್ತಲೇ ಇರುತ್ತದೆ ಎಂದು ರಾಧಿಕಾ ಹೇಳಿಕೊಂಡಿದ್ದಾರೆ