Advertisements

ಇಲ್ಲಿರುವ ಜಗತ್ತಿನ ಏಕೈಕ ಧ್ಯಾನ ಲಿಂಗ ನಿಮ್ಮನ್ನ ಬದಲಾಯಿಸಿಬಿಡುತ್ತದೆ !

Adyathma

ಅದು ಪ್ರಪಂದಲ್ಲಿ ಇರುವ ಏಕೈಕ ಧ್ಯಾನ ಲಿಂಗ. ಅದರ ಎದುರು ಕುಳಿತರೆ ಎಂತಹವರಾದರೂ ಧ್ಯಾನದಲ್ಲಿ ಮುಳುಗುತ್ತಾರೆ. ಅದೊಂದು ಸುಂದರ ಪ್ರಕೃತಿ ತಾಣ. ಪ್ರಪಂಚದಲ್ಲೇ ಅತಿ ಎತ್ತರದ ಶಿವನ ಮೂರ್ತಿ ಇರುವ ಸ್ಥಳ. ಅದೇ ಕೊಯಮತ್ತೂರಿನಲ್ಲಿ ಇರುವ ಈಶ ಯೋಗ ಕೇಂದ್ರ. ಇದು ನಮ್ಮ ದೇಶದ ಹೆಮ್ಮೆ ಎನ್ನಬಹುದು.

Advertisements

ಏಕೆಂದರೆ ಇಡೀ ಪ್ರಪಂಚವನ್ನೇ ಆಧ್ಯಾತ್ಮ, ಯೋಗದ ಕಡೆ ಸೆಳೆಯುತ್ತಿರುವ ಈ ಮೂಲಕ ಭಾರತದ ಸನಾತನ ಸಂಕೃತಿಯನ್ನು ವಿಶ್ವಕ್ಕೆ ಸಾರುತ್ತಿರುವ ಒಂದು ಸ್ಥಳ. ಇಲ್ಲಿ ಧ್ಯಾನಲಿಂಗವನ್ನು ಸ್ಥಾಪಿಸಲಾಗಿದೆ. ಇದರ ಎದುರು ಕುಳಿತರೆ ಜನರು ಸಹಜ ಮಾತು ಸುಲಭವಾಗಿ ಧ್ಯಾನಕ್ಕೆ ಜಾರುತ್ತಾರೆ. ಈ ದೇವಾಲಯವನ್ನು ತುಂಬಾ ವೈಜ್ಞಾನಿಕವಾಗಿ ಸ್ಥಾಪಿಸಲಾಗಿದೆ.

ಇಲ್ಲಿ ಮಹಿಳೆಯರಿಗಾಗಿ ವಿಶೇಷವಾಗಿ ಲಿಂಗ ಭೈರವಿ ದೇವಿಯ ಲಿಂಗವೂ ಕೂಡ ಇದೆ. ಇಲ್ಲಿಗೆ ಒಮ್ಮೆ ಭೇಟಿ ನೀಡಿದರೆ ನಿಮ್ಮ ನೀವು ಜಗತನ್ನು ನೋಡುವ ರೀತಿಯೇ ಬದಲಾಗುತ್ತದೆ. ಎಲ್ಲವೂ ಸುಂದರ ಎನಿಸುತ್ತದೆ. ಈ ಮೂಲಕ ನಿಮ್ಮ ಜೀವನದ ಆಯಾಮವೇ ಬದಲಾಗುತ್ತದೆ. ಧ್ಯಾನ ಎಂದರೆ ಏನು ಎಂಬುದನ್ನು ತಿಳಿಯದವರು ಕೂಡ ಧ್ಯಾನ ಮಾಡುತ್ತಾರೆ.

ಇಲ್ಲಿ ಯೋಗದ ಶಿಕ್ಷಣ ಕೂಡ ಕೊಡಲಾಗುತ್ತದೆ. ಇಲ್ಲಿಯ ಮತ್ತೊಂದು ವಿಶೇಷ ಎಂದರೆ ಇಲ್ಲಿ ಜಗತ್ತಿನ ಎತ್ತರದ ಶಿವನ ಮೂರ್ತಿಯಿದೆ. ಇಲ್ಲಿ ಪ್ರತೀವರ್ಷ ಶಿವರಾತ್ರಿಯಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ದೇಶದ ಅತ್ಯುತ್ತಮ ಕಲಾವಿದರು ಇದರಲ್ಲಿ ಭಾಗವಹಿಸುತ್ತಾರೆ. ಹೀಗೆ ಇದು ನಮ್ಮ ದೇಶದ ಸಂಸ್ಕೃತಿಯ ಕೇಂದ್ರವಾಗಿದೆ. ನೀವು ಆದಿಯೋಗಿ ಶಿವನ ದರ್ಶನ ಪಡೆದು ಬಂದಿದ್ದರೆ ನಿಮ್ಮ ಅನಿಸಿಕೆ ತಿಳಿಸಿ..