Advertisements

ಈಡೇರಿತು ಮೇಘನಾರವರ ಬಯಕೆ..ಕೈ ಹಿಡಿದು ಹೆಜ್ಜೆ ಹಾಕಿದ ಚಿರು ! ಈ ಫೋಟೋಗ್ಯಾಲರಿ ನೋಡಿ..

Cinema

ನಟ ಚಿರಂಜೀವಿ ಸರ್ಜಾ ಅವರ ಅಗಲಿಕೆಯ ನೋವಿನ ನಡುವೆಯೇ ಕೆಲ ದಿನಗಳ ಹಿಂದಷ್ಟೇ ತುಂಬು ಗರ್ಭಿಣಿಯಾಗಿರುವ ಮೇಘನಾ ರಾಜ್ ರವರ ಸೀಮಂತ ಕಾರ್ಯಕ್ರಮ ನಡೆದಿದೆ. ತುಂಬಾ ಸರಳವಾಗಿ ನಡೆದ ಈ ಸಂಭ್ರಮದಲ್ಲಿ ಕುಟುಂಬ ವರ್ಗದವರು ಹಾಗೂ ಕೇವಲ ಆಪ್ತರಷ್ಟೇ ಪಾಲ್ಗೊಂಡಿದ್ದು ಆಶೀರ್ವಾದ ಜೊತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ನು ಇಂತಹ ಸಂಭ್ರಮದಲ್ಲಿ ಗಂಡನಾದವನು ತನ್ನ ಪಕ್ಕದಲ್ಲಿರಬೇಕೆಂಬುದು ಎಲ್ಲಾ ಮಹಿಳೆಯರು ಬಯಕೆಯಾಗಿರುತ್ತದೆ. ಆದರೆ ಮೇಘನಾರಾಜ್ ಅವರ ವಿಷಯದಲ್ಲಿ ಹಾಗಾಗಲು ಸಾಧ್ಯವಿಲ್ಲ. ಹಾಗಾಗಿಯೇ ಚಿರು ಇಲ್ಲದ ನೋವನ್ನ ಮರೆಯಲು ಚಿರು ಸರ್ಜಾ ಅವರ ಕಟೌಟ್ ಫೋಟೋವೊಂದನ್ನ ಈ ಕಾರ್ಯಕ್ರಮದಲ್ಲಿ ಇಡಲಾಗಿತ್ತು.

Advertisements

ಚಿರು ಫೋಟೋ ಮುಂದೆಯೇ ಕುಳಿತಿದ್ದ ಮೇಘನಾರವರಿಗೆ ಸೀಮಂತ ಕಾರ್ಯಕ್ರಮದ ಶಾಸ್ತ್ರಗಳನ್ನ ಮಾಡಲಾಗಿತ್ತು. ಇದೀಗ ಸೀಮಂತ ಸಂಭ್ರಮದಲ್ಲಿ ಮೇಘನಾ ರಾಜ್ ರವರ ಜೊತೆಯಾಗಿ ಚಿರು ಸರ್ಜಾ ಇರುವ ಮತ್ತೊಂದು ಫೋಟೋ ಸಖತ್ ವೈರಲ್ ಆಗಿದೆ. ಮೇಘನಾ ಅವರು ನಿಂತು ಒಬ್ಬರೇ ಇಡಿಸಿಕೊಂಡಿದ್ದ ಫೋಟೋವೊಂದಕ್ಕೆ ಕರಣ್ ಆಚಾರ್ಯ ಎಂಬ ಕಲಾವಿದರೊಬ್ಬರು ಎಡಿಟ್ ಮಾಡಿ ಜೀವ ತುಂಬಿದ್ದಾರೆ. ಆ ಫೋಟೋ ಹೇಗಿದೆಯೆಂದರೆ ಚಿರಂಜೀವಿ ಸರ್ಜಾ ಅವರು ಮೇಘನಾ ಅವರ ಕೈ ಹಿಡಿದು ಹೆಜ್ಜೆ ಹಾಕುತ್ತಿದ್ದು ಇದೆ ರಿಯಲ್ ಫೋಟೋ ಎನ್ನುವಷ್ಟರ ಮಟ್ಟಿಗೆ ಇದೆ.

ಚಿರು ಹಾಗೂ ಮೇಘನಾರವರ ವಿವಾಹದ ಸಂದರ್ಭದಲ್ಲಿ ಹಿಡಿದ್ದಿದ್ದ ಚಿರು ಅವರ ಫೋಟೋವೊಂದನ್ನ ತೆಗೆದುಕೊಂಡು ಈಗಿನ ಮೇಘನಾರವರ ಫೋಟೋ ಜೊತೆ ಸೇರಿಸಿ ಎಡಿಟ್ ಮಾಡಿದ್ದಾರೆ. ನಿಜವಾಗಲೂ ಚಿರು ಮೇಘನಾ ಜೊತೆಯಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ ಎನ್ನುವಷ್ಟರ ಮಟ್ಟಿಗೆ ಜೀವಂತಿಕೆಯಾಗಿದೆ ಆ ಫೋಟೋ. ಇನ್ನು ಹಲವಾರು ಫೋಟೋಗಳನ್ನ ಇದೆ ರೀತಿ ಎಡಿಟ್ ಮಾಡಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.

ಒಂದು ರೀತಿ ಮೇಘನಾರಾಜ್ ರವರಿಗೆ ತನ್ನ ಪತಿ ನನ್ನ ಜೊತೆಯಲ್ಲ ಇಲ್ಲವಲ್ಲಾ ಎಂಬ ನೋವನ್ನ ಸ್ವಲ್ಪವಾದರೂ ಕಡಿಮೆಯಾಗುವಂತೆ ಮಾಡಿದ ಕಲಾವಿದ ಕರಣ್ ಆಚಾರ್ಯರವರ ಅಭೂತಪೂರ್ವ ಕಲೆಗೆ ಸರ್ಜಾ ಕುಟುಂಬದವರು, ಅಭಿಮಾನಿಗಳು ಫಿದಾ ಆಗಿದ್ದು, ಧನ್ಯವಾದಗಳನ್ನ ತಿಳಿಸಿದ್ದಾರೆ.