Advertisements

ಈ ಊರಲ್ಲಿರೋ ಎಲ್ಲರಿಗೂ ಒಂದೇ ಕಿಡ್ನಿ! ಉಳಿದ ಇನ್ನೊಂದು ಕಿಡ್ನಿಯನ್ನು ಇವ್ರು ಏನ್ ಮಾಡ್ತಿದ್ದಾರೆ ಗೊತ್ತಾ?

Kannada Mahiti

ಪ್ರಿಯ ಓದುಗರೆ ಮನುಷ್ಯ ಬದುಕಲು ಎರಡು ಕಿ’ಡ್ನಿಗಳು ಕಾರ್ಯ ಮಾಡುತ್ತಿರುತ್ತವೆ. ಇದರಲ್ಲಿ ಒಂದೇ ಇದ್ರು ನಡೆಯುತ್ತದೆ. ಇದೇ ಕಾರಣಕ್ಕೆ ಈ ಗ್ರಾಮದ ಜನರು ಒಂದೇ ಕಿ’ಡ್ನಿ ಇಂದ ಜೀವನ ನಡೆಸುತ್ತಿದ್ದಾರೆ. ಈ ಗ್ರಾಮಕ್ಕೆ ‘ಕಿಡ್ನಿ ವಿಲೇಜ್ ‘ಎಂತಲೂ ಕರೆಯುತ್ತಾರೆ. ಹಾಗಾದರೆ ಆ ಗ್ರಾಮ ಇರುವುದು ಎಲ್ಲಿ?ಯಾಕೆ ಇಲ್ಲಿಯ ಜನರು ಒಂದೇ ಕಿಡ್ನಿಯನ್ನು ಹೊಂದಿದ್ದಾರೆ?
ಕಿಡ್ನಿ ವ್ಯಾಲಿ ಎಂದು ಕರೆಸಿಕೊಳ್ಳುವ ಈ ಗ್ರಾಮ ಇರುವುದು ನೇಪಾಳದ ದೇಶದಲ್ಲಿ.ಇದು ಸೆಂಟ್ರಲ್ ನೇಪಾಳದ ‘ ಕಬ್ರೆ ಪಾಲನ್ ಚೌಕ್ ಜಿಲ್ಲೆಯ ಭಾಗಮತಿ ಪ್ರದೇಶದಲ್ಲಿರುವ ಪುಟ್ಟಗ್ರಾಮ ಹೊಗಸೆ. ಇದನ್ನು ಕಿ’ಡ್ನಿ ಬಜಾರ್ ಎಂತಲೂ ಕರೆಯುತ್ತಾರೆ. ಇಲ್ಲಿ ಎಲ್ಲರಿಗೂ ಇರುವುದು ಕಂಡುಬರುತ್ತದೆ. ಹೌದು ಇಲ್ಲಿ ಬಡತನ ತಾಂಡವಾಡುತ್ತಿದೆ. ಜೊತೆಗೆ ಅನಕ್ಷರತೆ ಕೂಡ ಹೆಚ್ಚಿದೆ. ಇದೇ ಕಾರಣದಿಂದ ಇಲ್ಲಿಯ ಬಡಜನರು ತಮ್ಮ ಒಂದು ಕಿ’ಡ್ನಿಯನ್ನು ಮಾರಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಹೀಗೆ ಒಂದು ಕಿ’ಡ್ನಿ ಮಾರಿಕೊಂಡ ಗೀತಾಳ ಕಥೆ ಹೃದಯ ಹಿಂಡುವಂತಿದೆ. ನಾಲ್ಕು ಜನ ಹೆಣ್ಣು ಮಕ್ಕಳನ್ನು ಹೆತ್ತ ಗೀತಾ ಬಹಳ ಬಡವರಾಗಿದ್ದರು. ಸ್ವಂತ ಸೂರು ಇರಲಿಲ್ಲ. ದುಡಿಯಲು ಕೃಷಿಭೂಮಿ ಕೂಡ ಇರಲಿಲ್ಲ.

Advertisements

ನಾದಿನಿ ನೀನು ವಂದು ಕಿ’ಡ್ನಿ ಮಾರಿದರೆ ನಿನಗೆ ಕೈತುಂಬಾ ಹಣ ಸಿಗುತ್ತದೆ. ಆಗ ನೀನು ನಿನ್ನ ಕಷ್ಟವನ್ನು ನೀವಾರಿಸಿಕೊಳ್ಳಬಹುದು ಎಂದು ಹೇಳುತ್ತಾಳೆ. ನಾದಿನಿ ಮಾತು ಕೇಳಿ ಕಿ’ಡ್ನಿ ಮಾರಿ ಬಂದ ಹಣದಿಂದ ಮನೆ ಕಟ್ಟಿಕೊಂಡಿದ್ದಳು ಗೀತಾ. ಉಳಿದ ದುಡ್ಡಿಂದ ಸ್ವಲ್ಪ ಕೃಷಿಭೂಮಿಯನ್ನು ಖರೀದಿಸಿದ್ದಳು ಆದರೆ ದುರಾದೃಷ್ಟವೆಂಬಂತೆ ನೇಪಾಳದಲ್ಲಿ ಆದ ಭೂಕಂಪದಲ್ಲಿ ಅವರು ಕಟ್ಟಿಸಿದ ಮನೆ ಸಂಪೂರ್ಣವಾಗಿ ಬಿದ್ದುಹೋಯಿತು. ಗೀತಾಳಿಗೆ ಮತ್ತೆ ಬಡತನ ಎದುರಾಯಿತು. ಇದು ಗೀತಾಳ ಕಥೆ ಮಾತ್ರವಲ್ಲ ಈ ಗ್ರಾಮದ ಪ್ರತಿಯೊಬ್ಬರ ಕಥೆಯೂ ಆಗಿದೆ. ಇಲ್ಲಿ ವರ್ಷಕ್ಕೆ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನ ತಮ್ಮ ಕಿ’ಡ್ನಿಯನ್ನು ಮಾರಿಕೊಳ್ಳುತ್ತಿದ್ದಾರೆ. ಹೀಗೆ ಕಿ’ಡ್ನಿಯನ್ನು ಮಾರುವವರು ಮತ್ತು ಕೊಳ್ಳುವವರು ಭಾರತಕ್ಕೆ ಬಂದು ಆಪರೇಷನ್ಗೆ ಒಳಗಾಗಿ, ಮೂರು ವಾರದ ಬಳಿಕ ಹಣದ ಜೊತೆಗೆ ತಮ್ಮ ದೇಶಕ್ಕೆ ಮರಳುತ್ತಿದ್ದಾರೆ ಎನ್ನುವುದು ದುರಂತದ ಸಂಗತಿ. ಇವರು ಮೊದಲೇ ಪ್ಲಾನ್ ಮಾಡಿಕೊಂಡಂತೆ ಎಲ್ಲವೂ ರಡಿ ಇರುತ್ತದೆ ಆದರೆ ಇವರು ಹೇಗೆ ಬರುತ್ತಾರೆ?ಎಲ್ಲಿ ಆಪರೇಷನ್ ಮಾಡಿಸಿಕೊಳ್ಳುತ್ತಾರೆ?ಯಾರು i ಆರ್ಗನ್ ಸಪ್ಲೈಯರ್? ಎಂದು ಇಲ್ಲಿಯವರೆಗೂ ರ’ಹ’ಸ್ಯವಾಗಿ ಉಳಿದಿದೆ.


ಈ ಗ್ರಾಮಕ್ಕೆ ದೇಶ ವಿದೇಶದಿಂದ ಕಿ’ಡ್ನಿ ಆ’ರ್ಗನ್ಸ, ಪಾ’ರ್ಟ್ಸ್ ಸಪ್ಲೈಯರ್ ಗಳು ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರಂತೆ. ಅವರು ಅಲ್ಲಿಯ ಸರ್ಕಾರದ ಕಣ್ಣು ತಪ್ಪಿಸಿ ಮಾಡುತ್ತಿರುವ ಈ ಕಾರ್ಯ ಇದೀಗ ಲೀಲಾಜಾಲವಾಗಿ ನಡೆದಿದೆ. ಇವರು ಟಾರಗೆಟ್ ಮಾಡುವುದು ಬಡ ಮತ್ತು ಅನಕ್ಷರಸ್ಥರನ್ನು. ಇವರ ಮನವೊಲಿಸಿ ಕಿ’ಡ್ನಿ ಪಡೆಯಲಾಗುತ್ತಿದೆಯಂತೆ. ಇನ್ನೂ ಕೆಲ ಜನರಿಗೆ ಇದೇ ಜಾಗದಲ್ಲಿ ಸ್ವಲ್ಪ ದಿನಗಳ ನಂತರ ಮತ್ತೊಂದು ಹೊಸ ಕಿ’ಡ್ನಿ ಬೆ’ಳೆಯುತ್ತದೆ ಎಂದು ಸುಳ್ಳು ಹೇಳಿ, ಅವರಿಂದ ಕಿಡ್ನಿ ಪಡೆಯುತ್ತಿದ್ದಾರೆ ಎಂದು ಈಗ ಬೆಳಕಿಗೆ ಬಂದಿದೆ. ಈ ಘ’ಟ’ನೆಯಿಂದ ಭಾರತ ಸರ್ಕಾರಗಳು ಎಚ್ಚೆತ್ತುಕೊಂಡಿದ್ದು, ಬಿಗಿ ಕಾನೂನನ್ನು ರೂಪಿಸಿದ್ದಾರೆ. ಆದರೆ ಬೇರೆ ದೇಶದಿಂದ ಒಳನುಸುಳುವ ಜನರಿಗೆ ಇರುವ ನಿರ್ಬಂಧಗಳು ಸಡಿಲವಾಗಿದೆ ಎನ್ನಲಾಗಿದೆ. ಈ ನಿಯಮಗಳನ್ನು ಬಿಗಿಗೊಳಿಸು ಬಹುದೇ? ಇಂತಹ ಅ’ರ್ಗನ್ಸ್ ಸಪ್ಲೇಯರ್ ಗಳಿಂದ ಬಡಜನರನ್ನು ಕಾಪಾಡುವುದೇ ಎಂದು ಕಾದು ನೋಡಬೇಕಿದೆ.