Advertisements

ಹೆಂಡತಿ ಸ್ನಾ’ನಾ’ನೇ ಮಾಡೋದಿಲ್ಲ ಅಂಥ ಪತಿರಾಯ ಎಂಥ ಕೆ’ಲ’ಸ ಮಾಡಿದ್ದಾನೆ ಗೊತ್ತಾ? ಇಂತವ್ರು ಇರ್ತಾರಾ..

Uncategorized

ಎಂತೆಂತಹ ಜನರೋ.. ಎಂತೆಂತಹ ಮನಸ್ಥಿತಿಯೋ ದೇವರೇ ಬಲ್ಲ.. ಒಬ್ಬೊಬ್ಬರು ಒಂದೊಂದು ಕಾರಣಕ್ಕೆ ಬೇರೆಯಾಗ್ತಾರೆ, ಆದ್ರೆ ಬೇರೆಯಾಗುವ ಕಾರಣ ಕೆಲವೊಂದು ತುಂಬಾ ಸೂಕ್ಷ್ಮವಾಗಿರುತ್ತೆ, ಇನ್ನು ಕೆಲವೊಂದು ಹಾಸ್ಯಾಸ್ಪದವಾಗಿರುತ್ತೆ. ಆದ್ರೆ ಈಗ ನಾವು ಹೇಳೋ ವಿಚಾರ ಹಾಸ್ಯಮಯವೋ.. ಟ್ರಾಜಿಡಿಯೋ ನೀವೆ ನಿರ್ಧಾರ ಮಾಡಬೇಕು.. ಅಂದಹಾಗೇ ತನ್ನ ಹೆಂಡತಿ ದಿನವೂ ಸ್ನಾನ ಮಾಡುವುದಿಲ್ಲ. ಸ್ವಚ್ಛತೆಯ ಬಗ್ಗೆ ಜ್ಞಾನವಿಲ್ಲದ ಆಕೆಯೊಂದಿಗೆ ಸಂಸಾರ ನಡೆಸಲು ಸಾಧ್ಯವಿಲ್ಲ ಎಂದು ತ್ರಿವಳಿ ತಲಾಖ್ ನೀಡಿರುವ ಈ ಅಪರೂಪದ ವಿಭಿನ್ನವಾಗಿ ಘಟನೆ ನಡೆದಿರೋದು ಉತ್ತರ ಪ್ರದೇಶದ ಅಲಿಘಡದಲ್ಲಿ.

2 ವರ್ಷಗಳ ಹಿಂದೆ ಕ್ವಾರ್ಸಿ ಗ್ರಾಮದ ಆ ಮಹಿಳೆ ಚಂದೌಸ್ ಗ್ರಾಮದ ಪುರುಷನೊಂದಿಗೆ ಮದುವೆಯಾಗಿದ್ದಳು. ಸಣ್ಣ ಪುಟ್ಟ ವಿಷಯಕ್ಕೆ ಇಬ್ಬರ ನಡುವೆ ಜ’ಗ’ಳ ನಡೆಯುತ್ತಿತ್ತು. ಅವರಿಬ್ಬರಿಗೂ ಮಗು ಕೂಡ ಇದ್ದು, ವಿಚ್ಛೇದನವಾದರೆ ಆ ಮಗುವಿನ ಭವಿಷ್ಯ ಹಾಳಾಗಲಿದೆ. ತೀರ ಮನಸ್ಸಿಗೆ ನೋ’ವುಂ’ಟು ಮಾಡು ವಿಚಾರವಿದ್ರೆ,, ಇಲ್ಲ ಅ’ನೈ’ತಿಕ ಸಂಬಂಧವನ್ನು ದಂಪತಿಗಳಲ್ಲಿ ಯಾರಾದ್ರೂ ಹೊಂದಿದ್ರೆ, ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ರೆ, ಇನ್ನು ನನಗೆ ಸಂಸಾರ ನಡೆಸಲು ಸಾಧ್ಯವೇಯಿಲ್ಲ ಅಂತಾದ್ರೆ ಮಾತ್ರ ವಿಚ್ಚೇದನ ಪಡೆದುಕೊಳ್ಳುವಂತಹ ನಿರ್ಧಾರಕ್ಕೆ ಬಂದ್ರೆ ಆ ನಿರ್ಧಾರಕ್ಕೆ ಒಂದು ತೂಕ ಇರುತ್ತೆ, ಆದ್ರೆ ಇತ್ತೀಚಿಗೆ ಗೊರಕೆ ಹೊಡೀತಾರೆ, ಕ್ಲೀನ್ ಇಲ್ಲ, ಸ್ನಾನ ಮಾಡಲ್ಲ, ಈ ತರಹ ವಿಭಿನ್ನ ರೀಸನ್ಸ್ ಕೊಟ್ಟು ಡೈವೋರ್ಸ್ ಪಡೆದುಕೊಳ್ತಾಯಿರೋದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಲ್ಲ. ಇನ್ನು ಈ ಇಬ್ಬರನ್ನು ಕೌನ್ಸೆಲಿಂಗ್ ನಡೆಸಲಾಗ್ತಿದೆ.


ಯಾಕಂದ್ರೆ ತ್ರಿವಳಿ ತಲಾಕ್​ಗೆ ದೇಶದಲ್ಲಿ ನಿಷೇಧ ಹೇರಿರೋದ್ರಿಂದ ತಲಾಕ್​ನ್ನು ಪ್ರಶ್ನಸಿ ಹೆಂಡತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ದಿನವೂ ಸ್ನಾನ ಮಾಡುತ್ತಿಲ್ಲ ಎಂಬ ನೆಪವೊಡ್ಡಿ ಗಂಡ ತಲಾಖ್ ನೀಡಿರುವುದಾಗಿ ಮಹಿಳೆ ದೂರು ನೀಡಿದ್ದಾಳೆ. ಆ ದಂಪತಿಗೆ ನಾವೇ ಕೌನ್ಸಿಲಿಂಗ್ ಕೊಡಿಸುತ್ತಿದ್ದೇವೆ. ಅವರ ಪೋಷಕರ ಜೊತೆಯೂ ಈ ಬಗ್ಗೆ ಮಾತನಾಡಿದ್ದೇವೆ. ಆ ಮಹಿಳೆಗೆ ತನ್ನ ಗಂಡನ ಜೊತೆ ಬದುಕಬೇಕೆಂಬ ಆಸೆಯಿದೆ. ಹೀಗಾಗಿ ಅವರ ಮದುವೆಯನ್ನು ಉಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದಂಪತಿಗಳ ಮಧ್ಯೆ ಮಾತುಕತೆ ನಡೆಸಿ ಇತ್ಯರ್ಥ ಮಾಡುವ ಪ್ರಯತ್ನವನ್ನು ಪೊಲೀಸರು ಮಾಡ್ತಾಯಿದ್ದಾರೆ. ಒಟ್ಟಿನಲ್ಲಿ ಎಲ್ಲ ಒಳ್ಳೆದಾಗಿ ದಾಂಪತ್ಯ ಮತ್ತೆ ಸರಿ ಹೋದ್ರೆ ಅಷ್ಟೇ ಸಾಕು.