Advertisements

ಎಲ್ಲಿಂದಲೋ ಬಂದು ಬಿದ್ದ ಕಲ್ಲಿನಿಂದ ರಾತ್ರೋ ರಾತ್ರಿ ಕೋಟ್ಯಾ ಧಿಪತಿಯಾದ ಶ’ವಪೆಟ್ಟಿಗೆ ಮಾಡುತ್ತಿದ್ದ ವ್ಯಕ್ತಿ !

Kannada Mahiti

ಅದೃಷ್ಟನೇ ಹಾಗೆ..ಯಾವಾಗ ಯಾವ ರೂಪದಲ್ಲಿ ಹುಡುಕಿಕೊಂಡು ಬರುತ್ತದೆ ಅಂತ ಹೇಳೋದಕ್ಕೆ ಆಗೋದಿಲ್ಲ. ಹೌದು, ತನ್ನ ಮನೆಯಂಗಳದಲ್ಲೇ ಬಂದು ಬಿದ್ದ ಉಲ್ಕಾ ಶಿಲೆಯಿಂದ ವ್ಯಕ್ತಿಯೊಬ್ಬ ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ಶ’ವ ಪೆಟ್ಟಿಗೆಗಳನ್ನ ಮಾಡಿಕೊಂಡು ಅದರಿಂದ ಬರುತ್ತಿದ್ದ ಹಣದಿಂದ ಜೀವನ ನಡೆಸುತ್ತಿದ್ದವ ಈಗ ಎಲ್ಲಿಂದಲೋ ಬಂದು ಬಿದ್ದ ಉಲ್ಕಾ ಶಿಲೆಯಿಂದ ಕೋಟ್ಯಧಿಪತಿಯಾಗಿದ್ದಾನೆ. ಇನ್ನು ಈ ಅಪರೂಪದ ಘಟನೆ ಇಂಡೋನೇಷ್ಯಾದ ಸುಮಾತ್ರಾದಲ್ಲಿ ನಡೆದಿದ್ದು ಅಲ್ಲಿ ವಾಸ ಮಾಡುತ್ತಿದ್ದ ೩೩ ವರ್ಷದ ಜೊಸುವಾ ಎಂಬ ವ್ಯಕ್ತಿಯೇ ಆ ಅದೃಷ್ಟವಂತನಾಗಿದ್ದಾನೆ.

ಇನ್ನು ಕೆಲವು ದಿನಗಳ ಹಿಂದಷ್ಟೇ ಈತ ತನ್ನ ಮನೆಯ ಅಂಗಳದಲ್ಲಿ ಕೆಲಸ ಮಾಡುತ್ತಿರುವ ವೇಳೆ ಆಕಾಶದಿಂದ ಬಂದ ಉಲ್ಕಾ ಶಿಲೆ ಅವರ ಮನೆಯ ಚಾವಣಿಗೆ ಅ,ಪ್ಪಳಿಸಿ, ಮನೆಯ ಅಂಗಳದಲ್ಲಿ ಬಿದ್ದಿದೆ. ಈ ಉಲ್ಕಾ ಶಿಲೆ ಬಂದು ತನ್ನ ಮನೆಯ ಮೇಲೆ ಅ’ಪ್ಪಳಿಸಿದಾಗ ಜೋರಾದ ಶಬ್ದ ಕೇಳಿ ಬಂದಿದ್ದು, ಮನೆಯ ಗೋಡೆಗಳೆಲ್ಲಾ ಅಲುಗಾಡುತ್ತಿದ್ದವು. ಇನ್ನು ಇದೆ ವೇಳೆ ಏನಾಯಿತು ಎಂದು ಗಾಬರಿಯಿಂದ ನೋಡಿದಾಗ ಉಲ್ಕಾ ಶಿಲೆ ಬಿದ್ದಿರುವುದು ಕಂಡುಬಂತು. ಅದನ್ನ ಎತ್ತಿಕೊಂಡು ನೋಡಿದಾಗ ಆ ವೇಳೆ ಆ ಉಲ್ಕಾ ಶಿಲೆ ಬಿಸಿಯಾಗಿಯೇ ಇತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಉಲ್ಕಾ ಶಿಲೆಯ ಫೋಟೋಗಳ ಜೊತೆಗೆ ನಡೆದ ಘಟನೆಯ ಬಗ್ಗೆಯೂ ಕೂಡ ಮಾಹಿತಿಯನ್ನ ಜೊಸುವಾ ಹಂಚಿಕೊಂಡಿದ್ದಾನೆ.

Advertisements

ಇನ್ನು ಈ ಉಲ್ಕಾ ಶಿಲೆ ೪೫೦ ಕೋಟಿ ವರ್ಷಗಳ ಹಿಂದಿನದು ಎಂದು ಹೇಳಲಾಗಿದ್ದು ಇದರ ಅಂದಾಜು ಬೆಲೆ ಭಾರತೀಯ ರೂಪಾಯಿಯಲ್ಲಿ ಒಂದು ಗ್ರಾಮ್ ಗೆ ೬೩ ಸಾವಿರ ರೂಪಾಯಿ ಎಂದು ಹೇಳಲಾಗಿದೆ. ಇನ್ನು ಭಾರತೀಯ ಕರೆನ್ಸಿಯ ಪ್ರಕಾರ ಆತ ಈ ಉಲ್ಕಾ ಶಿಲೆಯನ್ನ ಬರೋಬ್ಬರಿ ೧೦ ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾನೆ ಎಂದು ಹೇಳಲಾಗಿದೆ. ಆ ವ್ಯಕ್ತಿ ಈ ಶಿಲೆಯನ್ನ ಅಮೇರಿಕಾದ ಕಾಲಿನ್ಸ್ ಎಂಬ ವ್ಯಕ್ತಿಗೆ ಮಾರಾಟ ಮಾಡಿದ್ದು, ಬಳಿಕ ಕಾಲಿನ್ಸ್ ಈ ಉಲ್ಕಾ ಶಿಲೆಯನ್ನ ಜೇ ಪಿಯಾಟಿಕ್ ಎಂಬುವರಿಗೆ ಮಾರಿದ್ದು ಅವರು ಇದರ ಬಗ್ಗೆ ಅಧ್ಯಯನ ಮಾಡುವ ಸಲುವಾಗಿ ಅರಿಜೋನಾ ಸ್ಟೇಟ್ ಯುನಿವರ್ಸಿಟಿಯಲ್ಲಿ ಲಿಕ್ವಿಡ್ ನೈಟ್ರೋಜೆನ್ ನಲ್ಲಿ ಉಲ್ಕಾ ಶಿಲೆಯನ್ನ ಇಟ್ಟಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ಶ’ವಪೆಟ್ಟಿಗೆಗಳಿಂದ ಜೀವನ ನಡೆಸುತ್ತಿದ್ದ ಜೊಸುವಾ ಈಗ ಕೋಟ್ಯಧಿಪತಿಯಾಗಿದ್ದು, ತಾನು ಮಾಡುತ್ತಿದ್ದ ಕೆಲಸವನ್ನು ಬಿಟ್ಟು ತನ್ನ ಹಳ್ಳಿಯಲ್ಲಿ ಚರ್ಚ್ ನಿರ್ಮಾಣ ಮಾಡುವುದಾಗಿ ಹೇಳಿದ್ದಾನೆ. ಆದರೆ ಜೊಸುವಾಗೆ ಇದಕ್ಕಿಂತ ಹೆಚ್ಚಾಗಿ ಹಣ ಸಿಕ್ಕಿದ್ದು ನಿರ್ಧಿಷ್ಟವಾಗಿ ಎಷ್ಟು ಹಣ ಸಿಕ್ಕಿದೆ ಎಂಬುದರ ಬಗ್ಗೆ ಬಹಿರಂಗ ಮಾಡಿಲ್ಲ ಎಂದು ಹೇಳಲಾಗಿದೆ. ರಾತ್ರಿ ಕಳೆದು ಬೆಳಿಗ್ಗೆ ಹಾಗೋ ಒಳಗಡೆ ಕೋಟ್ಯಾಧಿಪತಿ ಹಾಗೋದು ಅಂದ್ರೆ ಇದೆ ಅಲ್ಲವಾ..