Advertisements

ಒಂದು ವೇಳೆ ನಿಖಿಲ್ ಮುಖ್ಯಮಂತ್ರಿ ಆದ್ರೆ ಕನ್ನಡದ ನಟರಿಗೆ ಯಾವ್ಯಾವ ಸಚಿವ ಸ್ಥಾನ ಕೊಡ್ತಾರಂತೆ ಗೊತ್ತಾ?

Cinema

ಕನ್ನಡ ವಾಹಿನಿಗಳಲ್ಲಿ ಹೊಸ ವರ್ಷದ ಪ್ರಯುಕ್ತ ಅನೇಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಇದೇರೀತಿ ಕಲರ್ಸ್ ಕನ್ನಡದಲ್ಲಿ ಹೊಸ ವರ್ಷದ ಪ್ರಯುಕ್ತ ರಂಗು ರಂಗೋಲಿ ಕಾರ್ಯಕ್ರಮ ಪ್ರಸಾರವಾಗಿತ್ತು. ಇದರ ಬಂದ ಬಿಗಿಯಾಗಿದೆ ಬಣ್ಣ ಹೊಸದಾಗಿದೆ ಎನ್ನುವ ಟೈಟಲ್ ಹೊಂದಿರುವ ಈ ರಂಗು ರಂಗೋಲಿ ಕಾರ್ಯಕ್ರಮವನ್ನು ಅಕುಲ್ ಬಾಲಾಜಿ ಸೇರಿದಂತೆ ಅನುಪಮ ನಿರಂಜನ್ ದೇಶಪಾಂಡೆ ನಿರೂಪಣೆ ಮಾಡಿದ್ದಾರೆ. ಅದೆ ರೀತಿ ವೇದಿಕೆಗೆ ನಿಖಿಲ್ ಕುಮಾರಸ್ವಾಮಿ ಅವರನ್ನು ಕರೆದು ಅಕುಲ್ ಬಾಲಾಜಿ ನಿಖಿಲ್ ಒಂದು ವೇಳೆ ಮುಖ್ಯಮಂತ್ರಿಯಾದರೆ ಕನ್ನಡ ಸಿನಿಮಾ ನಟರಲ್ಲಿ ಯಾರ್ ಯಾರಿಗೆ ಯಾವ ಯಾವ ಖಾತೆ ಸಿಕ್ಕಬಹುದು ಅನ್ನುವ ಪ್ರಶ್ನೆ ಕೇಳಿದರು. ಮನೋರಂಜನೆಗಾಗಿ ಕೇಳಿದ ಈ ಪ್ರಶ್ನೆಗೆ ನಿಖಿಲ್ ಕುಮಾರಸ್ವಾಮಿ ಸಖತ್ ಆಗಿ ಉತ್ತರಿಸಿದ್ದಾರೆ.

[widget id=”custom_html-3″]

Advertisements

ಅಕುಲ್ ಬಾಲಾಜಿ ಅವರು ಮೊದಲು ಗೃಹಮಂತ್ರಿ ಖಾತೆ ಯಾರಿಗೆ ಎನ್ನುವ ಪ್ರಶ್ನೆ ಕೇಳಿದರು ಅದಕ್ಕೆ ನಿಖಿಲ್ ಕುಮಾರಸ್ವಾಮಿ ಅಪ್ಪು ಸರ್ ಗೆ ಕೊಡಲು ನಾನು ಇಷ್ಟಪಡ್ತೀನಿ ಇದೀಗ ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಅಪ್ಪು ಸರ್ ನ ನೆನಪಿಸಿ ಕೊಳ್ಳಬೇಕು. ಅದು ನಮ್ಮ ಕರ್ತವ್ಯ ಜವಾಬ್ದಾರಿ. ಅಪ್ಪು ಸರ್ ಒಳ್ಳೆಯ ಫ್ಯಾಮಿಲಿ ಮ್ಯಾನ್ ಹಾಗಾಗಿ ಗೃಹಮಂತ್ರಿ ಖಾತೆ ಅವರಿಗೆ ಕೊಡುತ್ತೇನೆಂದು ನಿಖಿಲ್ ಅವರು ಹೇಳಿದ್ದಾರೆ. ಇನ್ನು ಕೃಷಿ ಮಂತ್ರಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ಹಾಗೂ ಕಂದಾಯ ಮಂತ್ರಿಯಾಗಿ ಯಶ್ ಅವರನ್ನು ನೇಮಕ ಮಾಡ್ತೀನಿ ಅಂತ ಹೇಳಿದ್ದಾರೆ.

[widget id=”custom_html-3″]

ಯಾಕೆಂದರೆ ಕೆಜಿಎಫ್ ಮ್ಯಾಸೀವ್ ಹಿಟ್ ಆಗಿದೆ ಸಾಕಷ್ಟು ರೆವಿನ್ಯೂ ಬಂದಿದೆ ಅದಕ್ಕಾಗಿಯೇ ಎಂದು ಕಾರಣ ಕೊಟ್ಟಿದ್ದಾರೆ. ಅದೇ ರೀತಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮನೆ ಚೆನ್ನಾಗಿದೆ ಅಂತ ಕೇಳಿದ್ದೇನೆ. ಅದಕ್ಕಾಗಿ ಅವರಿಗೆ ವಸತಿ ಖಾತೆ ಅಬಕಾರಿ ಮಂತ್ರಿಯಾಗಿ ಶ್ರೀಮುರಳಿ ಇನ್ನು ಡೆ.ಪಿ.ಟಿ ಚೀಫ್ ಮಿನಿಸ್ಟರ್ ಆಗಿ ಶಿವಣ್ಣ ಹಾಗೂ ಸುದೀಪ್ ರವರಿಗೆ, ರವಿಚಂದ್ರನ್ ಸರ್ ಗೆ ಮಹಿಳೆಯರೆ ಜಾಸ್ತಿ ಫ್ಯಾನ್ಸ್ ಇರೋದ್ರಿಂದ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಕೊಡುತ್ತೇನೆ ಅಂತ ನಿಖಿಲ್ ಕುಮಾರಸ್ವಾಮಿ ಹೇಳಿ ಎಲ್ಲರನ್ನೂ ನಗಿಸಿದ್ದಾರೆ..

[widget id=”custom_html-3″]