Advertisements

ಒಂದು ಸಾರಿ ಹೇರ್ ಕಟ್ ಗೆ 15 ಲಕ್ಷ ! ಜಗತ್ತಿನಲ್ಲಿ ಇವನ ಹಾಗೆ ಯಾರೂ ಬದುಕೋದಕ್ಕೆ ಆಗೋಲ್ಲ-ಈತ ಯಾರು ಗೊತ್ತಾ?

Uncategorized

ಸ್ನೇಹಿತರೆ, ಜಗತ್ತಿನ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಪ್ರಮುಖ ವ್ಯಕ್ತಿಯೆಂದೇ ಹೇಳಲಾಗುವ ಉಲ್ತಾನ್ ಹಸ್ಸನಲ್ ಬೊಲ್ಕಿಯಾ ಬಗ್ಗೆ ನಿಮಗೆ ಗೊತ್ತಾ? ಈ ಸಿರಿವಂತ ವ್ಯಕ್ತಿಯ ಎಲ್ಲಾ ಮೂಲಗಳಿಂದ ಬರುವ ವಾರ್ಷಿಕ ಆದಾಯ ಬರೋಬ್ಬರಿ 28 ಬಿಲಿಯನ್ ಎಂದರೆ ನೀವು ನಂಬೋದಿಲ್ಲ. ತೈಲ ಸಂಪದ್ಭರಿತ ದೇಶವಾದ ಬ್ರೂನಿ ದೇಶದ 29ನೇ ಸುಲ್ತಾನ್ ಹಾಗೂ ಅಲ್ಲಿನ ಪ್ರಧಾನಮಂತ್ರಿಯೂ ಕೂಡ ಆಗಿದ್ದಾನೆ. ಈ ದೇಶ ಮಲೇಷ್ಯಾ ದೇಶದ ಮೇಲೆ ಹಾಗೂ ದಕ್ಷಿಣ ಚೀನಾ ನಡುವೆ ಇರುವ ಒಂದು ಸಣ್ಣ ದೀಪ ರಾಷ್ಟ್ರ. ತೈಲ ಸಂಪದ್ಭರಿತವಾಗಿರುವ ಈ ದೇಶ ತನ್ನ ತೈಲದ ರಪ್ತಿನಿಂದಲೇ ಜಗತ್ತಿನ ಟಾಪ್ ಐದನೇ ಸಿರಿವಂತ ರಾಷ್ಟ್ರವಾಗಿದೆ. ಒಂದೇ ಒಂದು ಪೈಸೆಯಷ್ಟೂ ಸಹ ಸಾರ್ವಜನಿಕ ಸಾಲ ಇಲ್ಲದಿರೋ ಜಗತ್ತಿನ ಎರಡೇ ದೇಶಗಳಲ್ಲಿ ಇದು ಒಂದು.ಒಂದೂವರೆ ಸಾವಿರ ವರ್ಷಗಳ ಇತಿಹಾಸವಿರುವ ಈ ದೇಶ ಅನೇಕ ಹೊರಗಿನ ದೇಶಗಳ ಆಕ್ರಮಣಕ್ಕೆ ವಶವಾಗಿತ್ತು. ಹಲವಾರು ದೇಶಗಳು ಈ ದೇಶದ ಮೇಲೆ ತಮ್ಮ ಚಕ್ರಾಧಿಪತ್ಯ ಸಾಧಿಸಿದ್ದರು. ಇನ್ನು 1958ರ ಸಮಯಕ್ಕೆ ಈ ದೇಶಕ್ಕೆ ಪೂರ್ಣ ಪ್ರಮಾಣದ ಸಂವಿಧಾನ ರಚನೆಯಾಗುತ್ತೆ. ಉಮರ್ ಅಲಿ 1972ರಲ್ಲಿ ಪದತ್ಯಾಗ ಮಾಡಿದಾಗ ಪಟ್ಟಕ್ಕೇರಿದವನೇ ಆತನ ಮಗ ಹಸ್ಸನಲ್ ಬೊಲ್ಕಿಯಾ. ಆಗ ಇವನಿಗೆ ಕೇವಲ 21 ವರ್ಷ ವಯಸ್ಸಾಗಿತ್ತು.

ಇನ್ನು 1984 ರಲ್ಲಿ ಈ ದೇಶ ಬ್ರಿಟೀಷರ ಆಡಳಿತದಿಂದ ಸ್ವತಂತ್ರವಾದ ಮೇಲೆ ಈತನೇ ಎಲ್ಲಾ ವರ್ಗದಲ್ಲೂ ಸರ್ವಾಧಿಕಾರಿಯಾಗುತ್ತಾನೆ. ಇನ್ನು 1929ರಲ್ಲೇ ಈ ದೇಶದಲ್ಲಿ ತೈಲ ನಿಕ್ಷೇಪ ಇರುವುದು ಪತ್ತೆಯಾಗುತ್ತೆ. ಆದರೆ ಆಗಿದ್ದ ಬ್ರಿಟಿಷರ ಜೋಬಿಗೆ ಇದರ ಲಾಭಂಶವೆಲ್ಲಾ ಸೇರುತಿತ್ತು. ಈಗ ತೈಲ ರಪ್ತಿನ ಮೂಲಕ ಹಸ್ಸನಲ್ ಬೊಲ್ಕಿಯಾ ಬ್ರೂನಿ ದೇಶವನ್ನ ಭೂಲೋಕದ ಸ್ವರ್ಗವಾಗಿ ಮಾಡಿದ್ದಾನೆ. ಇನ್ನು ಮಾಹಿತಿಗಳ ಪ್ರಕಾರ ಬ್ರೂನಿ ದೇಶದಂತಹ ಶ್ರೀಮಂತ ರಾಷ್ಟ್ರ ಇಡೀ ಜಗತ್ತಿನಲ್ಲೇ ಇಲ್ಲ ಅಂತ ಹೇಳಲಾಗುತ್ತೆ.ಇಂಗ್ಲೆಂಡ್ ರಾಣಿ ಎಲಿಜಬತ್ ಬಳಿಕ ದೀರ್ಘಕಾಲ ಅರಸೊತ್ತಿಗೆಯ ಅಧಿಕಾರ ಅನುಭವಿಸುತ್ತಿರುವ ಎರಡನೇ ವ್ಯಕ್ತಿ ಹಸ್ಸನಲ್ ಬೊಲ್ಕಿಯಾ. ಮೂರು ಜನ ಪತ್ನಿಯರು ಇರುವ ಈತನಿಗೆ ಏಳು ಮಂದಿ ಹೆಣ್ಣು ಮಕ್ಕಳು, ಐದು ಮಂದಿ ಗಂಡು ಮಕ್ಕಳು ಇದ್ದಾರೆ. ಎಷ್ಟೋ ಕಾರು ಕಂಪನಿಗಳು ಈತನಿಗೋಸ್ಕರವೇ ಹೊಚ್ಚ ಹೊಸ ಕಾರುಗಳನ್ನ ಉತ್ಪಾದನೆ ಮಾಡುತ್ತಾರೆ. ಇನ್ನು ಈ ಸುಲ್ತಾನ 24 ಕ್ಯಾರೆಟ್ ಕೋಟೆಡ್ ಹೊಂದಿರುವ ಅದ್ದೂರಿಯಾದ ರೋಲ್ಸ್ ರಾಯ್ ಕಾರನ್ನ ಇಟ್ಟುಕೊಂಡಿದ್ದಾನೆ. ಇನ್ನು ಈತನ ಬಳಿ ಇರುವ ಕಾರುಗಳ ಸಂಖ್ಯೆ ಎಷ್ಟು, ಈತ ಒಂದು ವಾರದಲ್ಲಿ ತನ್ನ ತಲೆ ಕೂದಲ ಕಟಿಂಗ್ ಗಾಗಿ ಖಾರುಚ ಮಾಡುವ ಹಣ ಎಷ್ಟು ಗೊತ್ತಾ.?ಸ್ನೇಹಿತರೆ ಈ ಮಾಹಿತಿಗಳಿಗಾಗಿ ಮೇಲೆ ಇರುವ ವಿಡಿಯೋ ನೋಡಿ..