Advertisements

ಒಬ್ಬ ಮನುಷ್ಯ ಡಿಪ್ರೆಷನ್ ಅಥವಾ ಖಿನ್ನತೆಗೆ ಒಳಗಾಗುವುದು ಯಾಕೆ ಗೊತ್ತಾ ? ಇದು ಬರೋದಾದ್ರು ಏಕೆ ಗೊತ್ತಾ ?

Kannada Mahiti

ಸ್ನೇಹಿತರೆ, ಮೊನ್ನೆ ತಾನೇ ಖಿನ್ನತೆ (ಡಿಪ್ರೆಶನ್)ಗೆ ಒಳಗಾಗಿದ್ದ ಬಾಲಿವುಡ್ ಫೇಮಸ್ ನಟ ಇಹಲೋಕ ತ್ಯಜಿಸಿದ್ರು. ಆದರೆ ಆ ನಟನಿಗೆ ಒಳ್ಳೆಯ ಹೆಸರಿತ್ತು. ಸುಮಾರು 60 ಕೋಟಿಯವರೆಗೆ ಹಣ ಇತ್ತು. ಮುಂಬೈನಲ್ಲಿ ಸ್ವಂತ ಮನೆಯಿತ್ತು. ಒಂದು ಸಿನಿಮಾ ಮಾಡಿದ್ರೆ 7 ಕೋಟಿಯವರೆಗೆ ಸಂಭಾವನೆ ಇತ್ತು. ಇನ್ನು ಜಾಹಿರಾತಿನಲ್ಲೂ ಈ ನಟನಿಗೆ ಒಳ್ಳೆಯ ಹೆಸರಿದ್ದು, ಒಂದು ಜಾಹಿರಾತು ಮಾಡಿದ್ರೆ ಮೂಲಕ ಒಂದು ಕೋಟಿಯವರೆಗೆ ಸಂಭಾವನೆ ಬರುತಿತ್ತು ಎಂದು ಹೇಳಲಾಗಿದೆ. ಇದೆಲ್ಲಾದರೆ ಜೊತೆಗೆ ಮೂರು ಜನ ಗರ್ಲ್ ಫ್ರೆಂಡ್ಸ್ ಇದ್ದರು ಎಂದು ಹೇಳಲಾಗಿದೆ. ಇನ್ನು ಕೇವಲ 34 ವರ್ಷದ ಈ ಯುವ ನಟನಿಗೆ ಬೆಳೆಯಲು ಸಾವಿರಾರು ಅವಕಾಶಗಳಿದ್ದವು. ಒಬ್ಬ ಮನುಷ್ಯನಿಗೆ ಇದಕ್ಕಿಂತ ಬೇರೆ ಏನು ಬೇಕು ನೀವೇ ಹೇಳಿ. ಬಂಗಾರದಂತ ಜೀವನ ಮಾಡಬಹುದಿತ್ತು. ಆದರೆ ಆ ನಟ ಖಿನ್ನತೆಗೆ ಒಳಗಾಗಿದ್ದ ಎಂದು ಹೇಳಲಾಗಿದ್ದು, ಸಮಸ್ಯೆಗಳನ್ನ ಫೇಸ್ ಮಾಡಲಾರದೆ ಡಿಪ್ರೆಶನ್ ಗೆ ಒಳಗಾಗಿದ್ದು ಕೊನೆಗೆ ಈ ಭೂಮಿಯನ್ನ ಬಿಟ್ಟು ಮತ್ತೆ ಬರದಂತಹ ಲೋಕಕ್ಕೆ ಹೊರತು ಹೋದ. ಸ್ನೇಹಿತರೆ ನಾವು ಇಲ್ಲಿ ಹೇಳಲು ಹೊರಟಿರುವುದು ಖಿನ್ನತೆ ಎನ್ನುವುದು ಒಬ್ಬ ವ್ಯಕ್ತಿಯಲ್ಲಿ ಏಕೆ ಉಂಟಾಗುತ್ತೆ..ಎಲ್ಲವೂ ಸರಿ ಇದ್ದರೂ ಕೂಡ ಡಿಪ್ರೆಶನ್ ಗೆ ಒಳಗಾಗುವುದೇಕೆ? ಖಿನ್ನತೆಯನ್ನ ಜಯಿಸಲಿಕ್ಕೆ ಆಗುವುದೇ ಇಲ್ಲವಾ..ತಿಳಿಯಲು ಈ ವಿಡಿಯೋ ನೋಡಿ..ಇಷ್ಟ ಆದಲ್ಲಿ ಕಾಮೆಂಟ್ ಮಾಡಿ ತಿಳಿಸಿ..