ತಮ್ಮ ವಿಶಿಷ್ಟ ಗಾಯನದ ಮೂಲಕ ಭಾರತೀಯ ಸಿನಿಮಾ ರಂಗದಲ್ಲಿ ಕೋಟ್ಯಾಂತರ ಅಭಿಮಾನಿಗವನ್ನ ಹೊಂದಿರುವ ಗಾನ ಗಂಧರ್ವ, SP ಬಾಲಸುಬ್ರಹ್ಮಣ್ಯಂ ರವರ ಹುಟ್ಟಿದಹಬ್ಬ ಇಂದು. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಹಾಗೂ ಹಿಂದಿಯಲ್ಲೂ ಕೂಡ ಸಾವಿರಾರು ಹಾಡುಗಳನ್ನ ಹಾಡಿ ಅಭಿಮಾನಿಗಳ ಮನ ತಣಿಸಿದ್ದಾರೆ ಖ್ಯಾತ ಗಾಯಕ ಎಸ್ಪಿಬಿಯವರು. ಮೂಲತಃ ಆಂಧ್ರ ಮೂಲದವರಾದ ಇವರು 16 ಭಾರತೀಯ ಭಾಷೆಗಳಲ್ಲಿ 4 ಸಾವಿರ ಹಾಡುಗಳನ್ನ ಹಾಡಿದ ರೆಕಾರ್ಡ್ ಹೊಂದಿದ್ದಾರೆ.

ಇನ್ನು ಕನ್ನಡದಲ್ಲಿ ಡಾ.ರಾಜ್ ಕುಮಾರ್ ಸೇರಿದಂತೆ ಅನೇಕ ಸ್ಟಾರ್ ನಟರಿಗೆ ಹಿನ್ನಲೆ ಗಾಯಕರಾಗಿ ಹಾಡಿರುವ ಬಾಲಸುಬ್ರಹ್ಮಣ್ಯಂರವರಿಗೆ ಕನ್ನಡ ಕನ್ನಡಿಗರ ಮೇಲೆ ವಿಶೇಷ ಕಾಳಜಿ ಇದೆ. ಆಂಧ್ರದ ನೆಲ್ಲೂರಿನಲ್ಲಿ ಹುಟ್ಟಿ ಬೆಳೆದರೂ ಕನ್ನಡಿಗರು ನೀಡಿದ ಪ್ರೀತಿ ವಾತ್ಸಲ್ಯ ಎಲ್ಲಿಯೂ ಸಿಕ್ಕಿಲ್ಲ ಎಂದು ಸ್ವತಃ ಎಸ್ಪಿಬಿಯವರೇ ಹೇಳಿಕೊಂಡಿದ್ದಾರೆ. ನನಗೆ ಮುಂದಿನ ಜನ್ಮ ಅಂತ ಇದ್ದರೆ ಕನ್ನಡಿಗನಾಗಿ ಕರ್ನಾಟಕದಲ್ಲೇ ಹುಟ್ಟಬೇಕು ಎಂಬ ತಮ್ಮ ಇಚ್ಛೆಯನ್ನ ವ್ಯಕ್ತಪಡಿಸಿದ್ದಾರೆ.
ಗಾಯನದ ಜೊತೆಗೆ ಹಲವಾರು ಸಿನಿಮಾಗಳಲ್ಲೂ ಕೂಡ ನಟಿಸಿದ್ದಾರೆ ಗಾಯಕ ಬಾಲಸುಬ್ರಹ್ಮಣ್ಯಂರವರು. ಇನ್ನು ಕನ್ನಡದ ಖಾಸಗಿ ಕಿರುತೆರೆ ವಾಹಿನಿಯಲ್ಲಿ ಮೂಡಿಬರುತ್ತಿದ್ದ ‘ಎದೆ ತುಂಬಿ ಹಾಡುವೆನು’ ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ. ಇಂಜಿನಿಯರಿಂಗ್ ಓದುತ್ತಿದ್ದ ಹುಡುಗ ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕನಾಗಿ ಬೆಳೆದಿದ್ದೆ ಒಂದು ರೋಚಕ. ವಿಶೇಷ ಎನೆಂದರೆ SP ಬಾಲಸುಬ್ರಹ್ಮಣ್ಯಂ ಹಿನ್ನಲೆ ಗಾಯಕರಾದ ಮೇಲೆ ಹಾಡಿದ ಎರಡನೇ ಹಾಡೇ ಕನ್ನಡ ಎಂದು ಹೇಳಿದ್ದಾರೆ. ಕನ್ನಡಿಗರ ಬಗ್ಗೆ ಇರುವ ನಿಮ್ಮ ಕಾಳಜಿಗೆ ಹ್ಯಾಟ್ಸಾಪ್ ಸಾರ್..ನಿಮಗೆ ಹುಟ್ಟಿದ ಹಬ್ಬದ ಶುಭಾಶಯಗಳು ಸಾರ್..