Advertisements

ಕಾರ್ಮಿಕರ ಖಾತೆಗೆ ಜಮಾ ಆಗಲಿದೆ 5 ಸಾವಿರ ! ಈ ಸಹಾಯ ಧನ ಪಡೆಯಲು ಏನು ಮಾಡಬೇಕು ಗೊತ್ತಾ?

News

ಕರೋನಾ ಹಿನ್ನಲೆ ಲಾಕ್ ಡೌನ್ ಆದ ಪರಿಣಾಮ ಬಡವರು, ಕಾರ್ಮಿಕರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಇನ್ನು ಇದನ್ನ  ಗಮನದಲ್ಲಿಟ್ಟುಕೊಂಡು ಕಾರ್ಮಿಕರ ನೆರವಿಗೆ ಬಂದಿರುವ ರಾಜ್ಯ ಸರ್ಕಾರ ಸಹಾಯ ಧನವಾಗಿ 5 ಸಾವಿರ ರುಗಳನ್ನ ನೀಡುವುದಾಗಿ ಘೋಷಣೆ ಮಾಡಿದೆ. ರಾಜ್ಯದಲ್ಲಿ ವಿವಿಧ ಭಾಗಗಳಲ್ಲಿ ದುಡಿಯುತ್ತಿರುವಾ ಲಕ್ಷಾಂತರ ಕಾರ್ಮಿಕರಿದ್ದಾರೆ. ಹಾಗಾದ್ರೆ ಸರ್ಕಾರ ನೀಡುವ ಸಹಾಯ ಧನ ತೆಗೆದುಕೊಳ್ಳುವುದು ಹೇಗೆಂದು ನೋಡೋಣ ಬನ್ನಿ..

Advertisements

ಇನ್ನು ಸರ್ಕಾರದ ಯೋಜನೆಯ ಪ್ರಕಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಳಲ್ಲಿ ದುಡಿಯುತ್ತಿರುವ ಎಲ್ಲಾ ಕಾರ್ಮಿಕರು ಈ ಯೋಜನೆಗೆ ಅರ್ಹ ಫಲಾನುಭವಿಗಳಾಗಿರುತ್ತಾರೆ. ಇನ್ನು ಇವರು ಆಯಾ ತಾಲ್ಲೂಕಿನ ಹಿರಿಯ ನಿರೀಕ್ಷಕರು ಇಲ್ಲವೇ ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸರ್ಕಾರ ಸೂಚಿಸಿರುವ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಬಹುದು ಎಂದು ಹೇಳಲಾಗಿದೆ.

ಇನ್ನು ರಾಜ್ಯ ಸರ್ಕಾರದ ಆದೇಶದಂತೆ ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತರಾಗಿರುವ ಕಟ್ಟಡ ಕಾರ್ಮಿಕರಿಗೆ ನೇರವಾಗಿ ಅವರ ಬ್ಯಾಂಕಿನ ಖಾತೆಗೆ 5ಸಾವಿರ ರೂಪಾಯಿಗಳನ್ನ ಜಮಾ ಮಾಡಲಾಗುವುದು ಎಂದು ಹೇಳಲಾಗಿದೆ. ಇನ್ನು ಈ ಸಹಾಯ ಧನ ಪಡೆಯಲು, ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ಪಾಸ್ ಬುಕ್, ಇದ್ರ ಜೊತೆಗೆ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿರುವ ಗುರುತಿನ ಚೀಟಿಗಳ ಪ್ರತಿಗಳನ್ನ ಅರ್ಜಿಯೊಂದಿಗೆ ಸಲ್ಲಿಸಬೇಕೆಂದು ಹೇಳಲಾಗಿದೆ.

ಹೋಟೆಲ್ ನಲ್ಲಿ ಇಡ್ಲಿ ತಿಂದರೆ ಏನಾಗುತ್ತೆ ಗೊತ್ತಾ.?ತಿಳಿಯಲು ಈ ವಿಡಿಯೋ ನೋಡಿ, ತಪ್ಪದೆ ನಮ್ಮ ಚಾನೆಲ್ ಸಬ್ ಸ್ಕ್ರೈಬ್ ಮಾಡಿ..