Advertisements

ಕೃಷ್ಣನೇಕೆ ರಾಜನಾಗಲಿಲ್ಲ ಗೊತ್ತಾ? ಇದರ ಹಿಂದಿದೆ ನೀವು ತಿಳಿಯದ ರಹಸ್ಯ.

Adyathma

ಶುಕ್ರಾಚಾರ್ಯರ ಬಳಿ ಶಿಷ್ಯನಾಗಿ ಬಂದಿದ್ದ ಬೃಹಸ್ಪತಿಯ ಮಗ ಕಚನ ಶಾಪದ ನಿಮಿತ್ತ ದೇವಯಾನಿಗೆ ಬ್ರಾಹ್ಮಣರನ್ನು ಮದುವೆಯಾಗುವುದು ಸಾಧ್ಯವಿರಲಿಲ್ಲ . ಆದಕಾರಣ ಯಯಾತಿ ಮಹಾರಾಜನನ್ನು ಮದುವೆಯಾದಳು. ಅವಳು ಗಂಡನ ಮನೆಗೆ ಹೊರಟಾಗ ಅವಳ ಜೊತೆ ವೃಷಪರ್ವ ರಾಜನ ಮಗಳಾದ ಶರ್ಮಿಷ್ಟ ಅವಳ ದಾಸಿಯಾಗಿ ಬಂದಳ. ಮದುವೆಯ ಸಮಯದಲ್ಲೇ ದೇವಯಾನಿಯ ತಂದೆ ಶುಕ್ರಾಚಾರ್ಯ ಯಯಾತಿಗೆ ಶರ್ಮಿಷ್ಠೆಯನ್ನು ಗೌರವದಿಂದ ನೋಡಿಕೋ ಆದರೆ ಅವಳೊಡನೆ ಯಾವ ಸಂಬಂಧವನ್ನೂ ಹೊಂದಬೇಡ ಎಂದು ಎಚ್ಚರಿಸಿದರು.

Advertisements

ಆದರೆ ಅಪ್ರತಿಮ ಸುಂದರಿಯಾದ ಶರ್ಮಿಷ್ಠೆಯ ಆಕರ್ಷಣೆಯಿಂದ ಯಯಾತಿಗೆ ದೂರವಿರಲಾಗಲಿಲ್ಲ . ಶುಕ್ರಾಚಾರ್ಯರ ಆದೇಶವನ್ನು ಮರೆತು ಶರ್ಮಿಷ್ಠೆಯನ್ನು ಗಾಂಧರ್ವ ರೀತಿ ವಿವಾಹವಾದ. ಅನು. ದ್ರುಹ್ಯು, ಪುರು ಎಂಬ ಮೂರು ಮಕ್ಕಳನ್ನು ಪಡೆದ. ದೇವಯಾನಿಯಲ್ಲಿ ಯಯಾತಿಗೆ ಯದು ಮತ್ತು ತುರ್ವಸು ಎಂಬ ಇಬ್ಬರು ಮಕ್ಕಳಾದರು. ಮೊದಲು ದೇವಯಾನಿಗೆ ಶರ್ಮಿಷ್ಠೆಯ ಮಕ್ಕಳ ತಂದೆ ಯಾರೆಂದು ತಿಳಿದಿರಲಿಲ್ಲ. ತಿಳಿದೊಡನೆ ಕೋಪದಿಂದ ಉರಿದೆದ್ದಳು. ತನಗೆ ಅನ್ಯಾಯ ಮಾಡಿರುವುದಲ್ಲದೆ ಶುಕ್ರಾಚಾರ್ಯರ ಆದೇಶವನ್ನು ಯಯಾತಿ ಧಿಕ್ಕರಿಸಿರುವನೆಂದು ತಂದೆಯ ಬಳಿ ದೂರಿತ್ತಳು. ಕೋಪಗೊಂಡ ಶುಕ್ರಾಚಾರ್ಯ ಯಯಾತಿಗೆ ವೃದ್ಧನಾಗುವಂತೆ ಶಪಿಸಿದ.

ಯಯಾತಿ ತಪ್ಪಾಯಿತೆಂದು ಕ್ಷಮಾಪಣೆ ಕೇಳಿಕೊಂಡ. ಆಗ ಶುಕ್ರಾಚಾರ್ಯ ವೃದ್ಧಾಪ್ಯ ಬರುವುದರಲ್ಲಿ ಸಂದೇಹವೇ ಇಲ್ಲ. ಆದರೆ ಯಾರಾದರೂ ಯುವಕರು ತಮ್ಮ ಯೌವನವನ್ನು ನಿನಗೆ ದಾನ ಮಾಡಿ ನಿನ್ನ ವೃದ್ಧಾಪ್ಯವನ್ನು ತಾವು ಪಡೆಯಬಹುದು ಎಂದು ವಿಶಾಪ ನೀಡಿದರು. ಆಗ ಯಯಾತಿ ತನ್ನ ಐವರು ಮಕ್ಕಳನ್ನು ಕರೆದು ಕೆಲವು ಕಾಲ ತನಗೆ ಅವರ ಯೌವ್ವನವನ್ನು ನೀಡಬೇಕೆಂದು ಕೇಳಿಕೊಂಡ.

ಯದು ಮುಂತಾದ ಹಿರಿಯ ನಾಲ್ವರು ಮಕ್ಕಳು ಖಡಾಖಂಡಿತವಾಗಿ ಸಾಧ್ಯವಿಲ್ಲವೆಂದು ತಿಳಿಸಿಬಿಟ್ಟರು. ಕಡೆಯವನಾದ ಪುರು ತನ್ನ ಯೌವ್ವನವನ್ನು ಯಯಾತಿಗೆ ನೀಡಿ ತಾನು ವೃದ್ಧನಾದ. ಕೆಲವು ಕಾಲ ಸುಖ ಸಂತೋಷದಿಂದ ಕಳೆದ ಯಯಾತಿ ನಂತರ ಯೌವ್ವನವನ್ನು ಪುರುವಿಗೆ ಮರಳಿಸಿದ. ಮಾತ್ರವಲ್ಲದೆ ಅವನನ್ನೇ ರಾಜನನ್ನಾಗಿ ಮಾಡಿದ. ಯದು ಮತ್ತು ಇತರ ಮೂರು ಮಕ್ಕಳಿಗೆ ಅವರ ವಂಶದವರಿಗೆ ರಾಜ್ಯಾಧಿಕಾರವಿಲ್ಲದಂತೆ ಶಪಿಸಿದ. ಅದೇ ಕಾರಣ ಯದು ವಂಶೀಯನಾದ ಶ್ರೀಕೃಷ್ಣ ಕಂಸನನ್ನು ಕೊಂದು ತಾನು ರಾಜನಾಗುವ ಅವಕಾಶವಿದ್ದರೂ ಆಗದೆ ದೇವಕಿಯ ತಂದೆಯಾದ ಉಗ್ರಸೇನನನ್ನು ರಾಜನನ್ನಾಗಿ ಮಾಡಿದ.