Advertisements

ಕೋಟ್ಯಾಧಿಪತಿ ಶೋನಲ್ಲಿ 5 ಕೋಟಿ ಗೆದ್ದಮೇಲೆ ಇತನ ಬದುಕು ಏನಾಯ್ತು ಗೊತ್ತಾ?

Kannada Mahiti

ಸುಶೀಲ್ ಕುಮಾರ್ 5 ಕೋಟಿ 2011 ಕೌನ್ ಬನೇಗಾ ಕರೋಡ್‌ಪತಿ.. ಈ ಶೋ ಎಷ್ಟೊಂದು ಜನಮಾಸದಲ್ಲಿದೆ ಅಲ್ವಾ..? ಹೇಳಿ ಕೇಳಿ ಬಿಗ್‌ಬಿ ನಿರೂಪಣೆಯಲ್ಲಿ ಮೂಡಿ ಬರೋ ಸಿನಿಮಾ ಅಂದ್ರೆ ಕೇಳಬೇಕಾ ಹೇಳಿ. ಖಂಡಿತ ಆ ಶೋ ಚೆನ್ನಾಗೇಯಿರುತ್ತೆ. ಬಹುಶಃ ನಿಮಗೆಲ್ಲರಿಗೂ ಇದೇ ಶೋನಲ್ಲಿ ಸುಶೀಲ್ ಕುಮಾರ್ ಎನ್ನುವ ಯುವಕ ನೋಡ ನೋಡುತ್ತಿದ್ದಂತೆ 5 ಕೋಟಿ ಗೆದ್ದ ಬಗ್ಗೆ ಗೊತ್ತೊ ಇರಬೇಕು. ಸುಶೀಲ್ ಆನ್ರ‍್ಸ್ಗೆ ಬಿಗ್‌ಬಿಯೇ ಮರುಳಾಗಿಹೋಗಿದ್ರು. ಆದ್ರೆ ಹಣ ಮನುಷ್ಯನ ಜೀವನ ಹೇಗೆ ಬದಲಿಸುತ್ತೆ ಅನ್ನೋದಕ್ಕೆ ಈ ಸುಶೀಲ್ ಕುಮಾರ್ ಒಂದು ಉದಾಹರಣೆ. ಹೌದುತನ್ನ ಬದುಕು ಹಣದಿಂದ ಹೇಗೆ ರ‍್ಬಾತ್ ಆಯ್ತು ಅಂತ ಖುದ್ದು ಸುಶೀಲ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

[widget id=”custom_html-3″]

Advertisements


ಶೋ ಗೆದ್ದ ಮೂರು ನಾಲ್ಕು ವರ್ಷ ಆ ಗೆಲುವಿನ ಹ್ಯಾಂಗ್ ಓವರ್‌ನಲ್ಲಿಯೇ ಸುಶೀಲ್ ಬದುಕುತ್ತಿದ್ದರಂತೆ. ಪ್ರತೀ ದಿನ ಒಂದಲ್ಲ ಒಂದು ಇವೆಂಟ್ಸ್ ಅಲ್ಲಿ ಭಾಗಿಯಾಗುತ್ತಿದ್ರಂತೆ. ಮಾಡಲು ಏನು ಕೆಲಸ ಇಲ್ಲದ ಸುಶೀಲ್‌ಗೆ ಗೆಳೆಯರು ದೆಹಲಿಯಲ್ಲಿ ಕಾರು ಖರೀದಿಸಿ ಬಾಡಿಗೆಗೆ ಬಿಡುವಂತೆ ಸಲಹೆ ಕೊಡುತ್ತಾರೆ. ಅದರಂತೆ ಸುಶೀಲ್ ಕೂಡ ಬಾಡಿಗೆ ಬಿಡುತ್ತಾರೆ. ಮೂಲತಃ ಬಿಹಾರದವರಾದ ಸುಶೀಲ್ ದೆಹಲಿಯಲ್ಲಿಯೇ ಬಾಡಿಗೆ ಮನೆ ಮಾಡ್ತಾರೆ. ಅಲ್ಲಿ ಕೆಲ ವಿದ್ಯಾರ್ಥಿಗಳ ಸಹವಾಸ ಮಾಡಿ ದು’ಶ್ಚ’ಟಗಳ ದಾಸನಾಗ್ತಾರೆ. ಅಪಡೇಟ್ ಅನ್ನೋ ಹೆಸರಲ್ಲಿ ಸ್ಮೋಕಿಂಗ್, ಡ್ರಿಂ’ಕ್ಸ್ ಶುರು ಮಾಡ್ತಾರೆ.ಇತ್ತ ವೈವಾಹಿಕ ಜೀವನದಲ್ಲಿಯೂ ಸಹ ಸುಶೀಲ್‌ಗೆ ಹೆಂಡತಿ ಜೊತೆ ಕೋ’ಲ್ಡ್ ವಾ’ರ್ ಆಗ್ತಾಯಿರುತ್ತೆ.

[widget id=”custom_html-3″]

ಈ ಸಂದರ್ಭದಲ್ಲಿ ಓರ್ವ ಫ್ರೆಂಡ್ ಒಂದು ಸಲಹೆ ಕೊಡ್ತಾನೆ. ಯಾಕೆ ನೀನು ಸಿನಿಮಾ ನಿರ್ಮಾಣ ಮಾಡಬಾರದು ಅಂತ.
ಈ ಸಲಹೆಯನ್ನು ಸ್ವೀಕರಿಸಿ ದಿನವೀಡೀ ಸುಶೀಲ್ ಸಿನಿಮಾ ನೋಡೋದಕ್ಕೆ ಶುರು ಮಾಡ್ತಾನೆ, ಇದ್ರಿಂದ ಕುಪಿತಳಾದ ಸುಶೀಲ್ ಹೆಂಡತಿ ಲ್ಯಾಪ್‌ಟಾಪ್ ಮುಚ್ಚಿಟ್ಟು ಮನೆ ಬಿಟ್ಟು ಹೋಗ್ತಾಳೆ, ಆ ಸಂದರ್ಭದಲ್ಲಿ ಓರ್ವ ಪತ್ರಕರ್ತ ಕರೆ ಮಾಡಿ ಇಲ್ಲ ಸಲ್ಲದ ಪ್ರಶ್ನೆಗಳನ್ನು ಕೇಳ್ತಾನಂತೆ. ಇದರಿಂದ ಸಿಟ್ಟಿಗೆದ್ದ ಸುಶೀಲ್ ನನ್ನ ಬಳಿಯಿದ್ದ ದುಡ್ಡೆಲ್ಲ ಖಾಲಿ ಈಗ ಎರಡು ಹಸು ತಗೊಂಡು ಹಾಲು ಕರೆದುಕೊಂಡಿದ್ದೀನಿ ಅಂತ ಗರಂ ಆಗಿ ಉತ್ತರಿಸುತ್ತಾರೆ.

[widget id=”custom_html-3″]

ಆದ್ರೆ ಆ ಪತ್ರಕರ್ತ ಸುಶೀಲ್ ಉತ್ತರವನ್ನು ಹಾಗೇ ಪತ್ರಿಕೆಯಲ್ಲಿ ಮುದ್ರಿಸುತ್ತಾರೆ. ಇದರಿಂದ ಸುಶೀಲ್ ಕುಮಾರ್‌ಗೆ ಯಾರೊಬ್ಬರು ಸಹ ಕಾರ್ಯಕ್ರಮಗಳಿಗೆ ಬರುವಂತೆ ಬುಲಾವ್ ಕೊಡೋದಿಲ್ಲ. ಇತ್ತ ಸಿನಿಮಾಗೋಸ್ಕರ ಟಿವಿ ಇಂಡಸ್ಟ್ರಿಯಲ್ಲಿ ಸಹ ಕೆಲಸ ಮಾಡಿದ್ರೂಸುಶೀಲ್‌ಗೆ ಆತ್ಮ ತೃಪ್ತಿ ಇರೋದಿಲ್ಲ, ನಂತರ ತನ್ನೆಲ್ಲ ದುಶ್ಚಟಗಳಿಗೆ ಗುಡ್‌ಬೈ ಹೇಳಿ ತನ್ನ ಮನಸ್ಸು ಹೇಳಿದಂತೆ ಕೇಳುವ ಸುಶೀಲ್ ಶಿಕ್ಷಕನಾಗಿ ಕೆಲಸ ಮಾಡ್ತಾಯಿದ್ದಾರಂತೆ ಸುಶೀಲ್ ಈಗ ಹೇಳೋದು ಒಂದೇ ಯಾವ ಕೋಟಿಯೂ ನಮಗೆ ಮನಸ್ ತೃಪ್ತಿ ಕೊಡೋದಿಲ್ಲ. ನಮ್ಮ ಹೃದಯ ಬಯಸಿದ ಕೆಲಸವನ್ನು ನಾವು ಮಾಡಬೇಕು ಆಗ ಮಾತ್ರ ಬದುಕು ಸುಂದರವಾಗಿರುತ್ತೆ ಅಂತ ಸುಶೀಲ್ ತಿಳಿಸುತ್ತಾರೆ.