ಕರೋನಾ ಹಿನ್ನಲೆ ಲಾಕ್ ಲಾಕ್ ಡೌನ್ ಆಗಿದ್ದು, ಬಡವರು,ಮಧ್ಯಮವರ್ಗದವರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಇನ್ನು ಭಾರತ ಕೂಡ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದೆ. ಇನ್ನು ಆರ್ಥಿಕತೆಗೆ ಹಾಗೂ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಒಂದನ್ನ ಘೋಷಣೆ ಮಾಡಿದೆ.

ಇನ್ನು ಈ ವಿಶೇಷ ಪ್ಯಾಕೇಜ್ ನ ಅಡಿಯಲ್ಲಿ ನಗರದ ಬಡವರಿಗೆ, ವಲಸಿಗರಿಗೆ,ಕಾರ್ಮಿಕರಿಗೆ ಹಲವಾರು ಕೊಡುಗೆಗಳನ್ನ ನೀಡಲಾಗಿದ್ದು, ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಮನೆಗಳನ್ನ ನಿರ್ಮಾಣ ಮಾಡಲಿದ್ದು,ಕಡಿಮೆ ದರದಲ್ಲಿ ಬಾಡಿಗೆ ನೀಡಲಾಗುವುದು ಎಂದು ಹೇಳಲಾಗದ್ದು, ಇದರಿಂದ ಕಾರ್ಮಿಕರಿಗೆ, ಬಡವರಿಗೆ ಉಪಯೋಗವಾಗುವುದು ಎಂದು ಹೇಳಲಾಗಿದೆ.

ಇನ್ನು ಇದರ ಬಗ್ಗೆ ಕೇಂದ್ರ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರೇ ಮಾಹಿತಿ ನೀಡಿದ್ದು, ಇದೆಲ್ಲದರ ಜೊತೆಗೆ ಮಾಧ್ಯಮ ವರ್ಗದವರಿಗೆ ಕುರಿತಂತೆ ಮನೆ ಸಾಲದ ಬಡ್ಡಿ ಮೇಲಿನ ಸಬ್ಸಿಡಿಯನ್ನ ಮುಂದಿನ ವರ್ಷ ಮಾರ್ಚ್ ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಇನ್ನು ಈ ಯೋಜನೆಗಾಗಿ ೭೦ಸಾವಿರ ಕೋಟಿ ಮೀಸಲಿಡಲಾಗಿದೆ ಎಂದು ಹೇಳಲಾಗಿದೆ.