Advertisements

ಚೀನಾ ಬೆದರಿಕೆಗೆ ಸಡ್ಡು ಹೊಡೆದ ಭಾರತ : ಡ್ರ್ಯಾಗನ್ ರಾಷ್ಟ್ರ ತತ್ತರ

News

ಡ್ರ್ಯಾಗನ್ ರಾಷ್ಟ್ರ ಚೀನಾ ಏನಾದರೂ ಕುಂಟು ನೆಪ ಇಟ್ಟುಕೊಂಡು ಭಾರತದ ಗಡಿ ಭಾಗದಲ್ಲಿ ಖ್ಯಾತೆ ತೆಗೆಯುತ್ತಲೇ ಇರುತ್ತದೆ. ಈಗ ಭಾರತ ತನ್ನ ಭೂಭಾಗದ ಒಳಗಡೆ ಮಾಡುತ್ತಿರುವ ರಸ್ತೆ ಕಾಮಗಾರಿ ಬಗ್ಗೆ ಖ್ಯಾತೆ ತೆಗೆದಿರುವ ಚೀನಾ ಗಡಿಭಾಗದಲ್ಲಿ ಭಾರೀ ಸಂಖ್ಯೆಯ ತನ್ನ ಸೇನೆಯನ್ನ ಜಮಾವಣೆ ಮಾಡುತ್ತಿದ್ದೆ. ಈ ಮೂಲಕ ಭಾರತಕ್ಕೆ ಬೆದರಿಕೆಯೊಡ್ಡಲು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಂತಿದೆ ಕುತಂತ್ರಿ ಚೀನಾ.

Advertisements

ಆದರೆ ಭಾರತ ಮಾತ್ರ ಚೀನಾ ಬೆದರಿಕೆಗೆ ಬಗ್ಗದೆ, ಗಡಿಭಾಗದಲ್ಲಿ ಎಲ್ಲೆಲ್ಲಿ ಚೀನಾ ಯೋಧರನ್ನ ಹೆಚ್ಚಾಗಿ ನಿಲ್ಲಿಸಲಾಗಿದೆಯೋ ಅಲ್ಲಲ್ಲಿ ನಮ್ಮ ಭಾರತದ ಯೋಧರನ್ನು ಸಮಬಲದಲ್ಲಿ ನಿಲ್ಲಿಸಿ ಚೀನಾಗೆ ಸೆಡ್ಡು ಹೊಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಇಷ್ಟೇ ಅಲ್ಲದೆ ಚೀನಾ ಖ್ಯಾತೆ ತೆಗೆಯುತ್ತಿರುವ ರಸ್ತೆ ಕಾಮಗಾರಿಯನ್ನ ಮುಂದುವರಿಸಲು ನಿರ್ಧಾರ ಮಾಡಿದೆ. ಇನ್ನು ಚೀನಾ ಯೋಧರ ಮೇಲೆ ಕಣ್ಣಿಡಲು ಡ್ರೋನ್ ಪಹರೆ ಕೂಡ ಆರಂಭಿದಲಾಗಿದ್ದು, ಗಡಿಯ ಹಲವು ಭಾಗಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನ ಕಳುಹಿಸಲಾಗುತ್ತಿದೆ.

ಇನ್ನು ಅತೀ ಎತ್ತರ ಪ್ರದೇಶಗಳಿಂದ ದಾಳಿ ಮಾಡುವ ನಿಗಾ ವಹಿಸುವ ಸಾಮಥ್ಯದ ಡ್ರೋನ್ ನ್ನ ಚೀನಾ ನೋಯೋಜನೆ ಮಾಡಿದ್ದು, ಇದಕ್ಕೆ ಸಡ್ಡು ಹೊಡೆದಿರುವ ಭಾರತ ಕೂಡ ಅದೇ ರೀತಿಯಾದ ಡ್ರೋನ್ ನ್ನ ಗಡಿಯಲ್ಲಿ ನಿಯೋಜನೆ ಮಾಡಿದೆ. ಒಟ್ಟಿನಲ್ಲಿ ಯುದ್ಧದ ಉನ್ಮಾದಲ್ಲಿರುವ ಕುತಂತ್ರಿ ಚೀನಾ ದೇಶಕ್ಕೆ ತಕ್ಕ ಪಾಠ ಕಲಿಸಲು ಭಾರತ ಕೂಡ ಎಲ್ಲಾ ರೀತಿಯಿಂದಲೂ ರೆಡಿಯಾಗಿದೆ.