Advertisements

ಟ್ರಾಫಿಕ್ ರಸ್ತೆಗಳಲ್ಲಿ ವಸ್ತುಗಳನ್ನ ಮಾರುತ್ತಿದ್ದ ಮುಗ್ದ ಯುವತಿ ಮಾಡೆಲ್ ಆಗಿದ್ದೇಗೆ ಗೊತ್ತಾ !

Kannada Mahiti

ನಮಸ್ತೇ ಸ್ನೇಹಿತರೇ, ಅದೃಷ್ಟವೆನ್ನುವುದೇ ಹಾಗೇ ಯಾವಾಗ ಯಾವ ರೂಪದಲ್ಲಿ ಹುಡುಕಿಕೊಂಡು ಬರುತ್ತೇವೆಯೋ ಹೇಳೋದಕ್ಕೆ ಸಾಧ್ಯವಿಲ್ಲ. ಅದಕ್ಕೆ ನಿದರ್ಶನ ಎಂಬಂತಿದೆ ಈ ಸ್ಟೋರಿ. ಟ್ರಾಫಿಕ್ ತುಂಬಿರುವ ರಸ್ತೆಗಳಲ್ಲಿ ವಾಹನ ಸವಾರರಿಗೆ ಅಗತ್ಯ ವಸ್ತುಗಳನ್ನ ಮಾರಿ ಜೀವನ ನಡೆಸುತ್ತಿದ್ದ ಮುಗ್ದ ಯುವತಿಯೊಬ್ಬಳು ಮಾಡೆಲಿಂಗ್ ಆದ ರಿಯಲ್ ಸ್ಟೋರಿ ಇದು. ಹಾಗಾದ್ರೆ, ಹೊಟ್ಟೆ ಹೊರೆಯುವುದಕ್ಕಾಗಿ ರಸ್ತೆ ಹಾಗೂ ಪುಟ್ ಪಾತ್ ಗಳಲ್ಲಿ ವ್ಯಾಪಾರ ಮಾಡುತ್ತಿದ್ದ ಆ ಯುವತಿ ಮಾಡೆಲಿಂಗ್ ಆಗಿದ್ದು ಹೇಗೆ ಗೊತ್ತಾ.? ಸ್ನೇಹಿತರೆ, ಮಾಡೆಲಿಂಗ್ ಮಾಡಬೇಕೆಂದರೆ ನೋಡಲು ಸುಂದರವಾಗಿರಬೇಕು, ಎತ್ತರ ಇರಬೇಕು, ಇಂಗ್ಲಿಷ್ ಮಾತನಾಡಬೇಕು ಹೀಗೆ ಇನ್ನು ಹಲವಾರು ನಿಯಮಗಳಿರುತ್ತವೆ.

Advertisements

ಆದರೆ ಮಾಡೆಲಿಂಗ್ ಎಂದರೆ ಏನೂ ಅಂತಲೂ ಗೊತ್ತಿಲ್ಲದ ಬೀದಿ ಬದಿ ವ್ಯಾಪಾರ ಮಾಡುವ ಮುಗ್ದ ಹುಡುಗಿಯೊಬ್ಬಳು ಮಾಡೆಲಿಂಗ್ ಆಗಲು ಸಾಧ್ಯವೇ..ಆದರೆ ಇದನ್ನೇ ಸವಾಲಾಗಿ ಸ್ವೀಕರಿಸಿದ ಮಹಾದೇವನ್ ತಂಬಿ ಎಂಬ ಫೋಟೋಗ್ರಾಫರ್ ಒಬ್ಬರು ತನ್ನ ಕ್ಯಾಮೆರಾದ ಕೈಚಳಕದ ಮೂಲಕ ಕೊಚ್ಚಿಯ ಟ್ರಾಫಿಕ್ ರಸ್ತೆಗಳಲ್ಲಿ ವಾಹನ ಸವಾರರಿಗೆ ವಸ್ತುಗಳನ್ನ ಮಾರುತ್ತಿದ್ದ ಯುವತಿಯನ್ನ ಕರೆತಂದು ವಿಭಿನ್ನವಾಗಿ ಫೋಟೋಶೂಟ್ ಮಾಡಿ ತೋರಿಸಿದ್ದಾರೆ. ಇನ್ನು ಬೀದಿ, ರಸ್ತೆಗಳಲ್ಲಿ ವಸ್ತುಗಳನ್ನ ಮಾರಿ ಬದುಕುತ್ತಿದ್ದ ಯುವತಿಯ ಹೆಸರು ಅಸ್ಮಾನ್ ಎಂದು.

ಎನಾದ್ರೂ ವಿಭಿನ್ನವಾಗಿ ಫೋಟೋಶೂಟ್ ಮಾಡಬೇಕು ಎಂದು ಯೋಚಿಸುತ್ತಿದ್ದ ಫೋಟೋಗ್ರಾಫರ್ ಮಹಾದೇವನ್ ತಂಬಿ ಸ್ಟ್ರೀಟ್‌ ಟು ಸ್ಟುಡಿಯೋ ಕಾನ್ಸೆಪ್ಟ್ ಎಂಬ ಹೊಸ ಐಡಿಯಾವೊಂದು ಹೊಳೆಯುತ್ತದೆ. ಆಗ ಈ ಫೋಟೋಗ್ರಾಫರ್ ಗೆ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ಯುವತಿಯೊಬ್ಬಳನ್ನ ನೋಡುತ್ತಾರೆ. ಬಳಿಕ ಆಕೆಯನ್ನ ಕರೆತಂದು, ಆಕೆಯ ಚಂದದ ಫೋಟೋಗಳನ್ನ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು ಈಗ ಆ ಫೋಟೋಗಳು ಸಾಮಾಜಿಕ ಜಾಲತಾಣಗಲ್ಲಿ ಸಖತ್ ವೈರಲ್ ಆಗಿವೆ. ಯುವತಿ ಅಸ್ಮಾನ್ ಕೂಡ ಈಗ ಸಿಕ್ಕಾ ಪಟ್ಟೆ ವೈರಲ್ ಆಗಿದ್ದಾಳೆ. ನೆಟ್ಟಿಗರು ಕೂಡ ಫೋಟೋಗ್ರಾಫರ್ ನ ಈ ಹೋದ ಪ್ರಯತ್ನಕ್ಕೆ ಫಿದಾ ಆಗಿದ್ದಾರೆ.

ಇನ್ನು ಮಹಾದೇವನ್ ಹೇಳುವ ಪ್ರಕಾರ ಯುವತಿ ಅಸ್ಮಾನ್‌ ಳನ್ನ ಕರೆತರಲು ಅವರ ಕುಟುಂಬದವರನ್ನ ಒಪ್ಪಿಸಲು ಅಷ್ಟು ಸುಲಭವಿರಲಿಲ್ಲವಂತೆ. ಹೇಗೋ ಅವರನ್ನ ಒಪ್ಪಿಸಿ ಆ ಯುವತಿಯನ್ನ ಕರೆತಂದೆ ಎಂದು ಅವರು ಹೇಳಿದ್ದಾರೆ. ಇನ್ನು ಮೇಕಪ್ ಮ್ಯಾನ್ ಕೂಡ ಯುವತಿ ಅಸ್ಮಾನ್‌ ಳನ್ನ ನೋಡಿ ನಗಾಡಿದರಂತೆ. ಆದರೆ ಕಾನ್ಸೆಪ್ಟ್ ಬಗ್ಗೆ ಫೋಟೋಗ್ರಾಫರ್ ವಿವರಣೆ ಕೊಟ್ಟಾಗ ಆ ಯುವತಿಗೆ ತಕ್ಕ ಕಾಸ್ಟ್ಯೂಮ್ ಗಳನ್ನ ಹಾಕಿ ಚಂದವಾಗಿ ಮೇಕಪ್ ಮಾಡಿ ಫೋಟೋಶೂಟ್ ಮಾಡಲಾಗಿದೆ. ಮಹಾದೇವನ್ ಹೇಳುವ ಹಾಗೆ ತಾವು ನಿರೀಕ್ಷೆ ಮಾಡಿದಕ್ಕಿಂತಲು ಹೆಚ್ಚು ಅಸ್ಮಾನ್ ಫೋಟೋಗಳು ಸೊಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದು ನನ್ನ ಜೀವನದಲ್ಲಿ ನನಗೆ ಅತ್ಯಂತ ಹೆಚ್ಚು ತೃಪ್ತಿ ಕೊಟ್ಟ ಫೋಟೋ ಎಂದು ಹೇಳಿದ್ದಾರೆ. ಸ್ನೇಹಿತರೇ, ಬೀದಿ ಬದಿ ಜೀವನ ನಡೆಸುತ್ತಿದ್ದ ಯುವತಿಯನ್ನ ಮಾಡೆಲ್ ಆಗಿ ಬದಲಾಯಿಸಿರುವ ಫೋಟೋಗ್ರಾಫರ್ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನ ತಿಳಿಸಿ..