Advertisements

ತಮ್ಮ ಹಾಡುಗಾರಿಕೆ ಶೈಲಿಯಿಂದ ಸಖತ್ ಫೇಮಸ್ ಆಗಿರುವ ವಾಸುಕಿ ವೈಭವ್ ಅವರು ಒಂದು ಸಿನಿಮಾ ಹಾಡಿಗೆ ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಗೊತ್ತಾ?

Cinema

ಕನ್ನಡದಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ಶೋನಲ್ಲಿ ಮಿಂಚಿದವರು ಎಷ್ಟೋ? ಮಿಂಚಿ ಮರೆಯಾದವರೆಷ್ಟೋ? ಹಾಗೆ ಹೊರಗೆ ಬಂದು ಮೆರೆದವರು ಎಷ್ಟು? ಇವರೆಲ್ಲರಲ್ಲಿ ಶೋನಿಂದ ಹೊರಗೆ ಬಂದು ಮಿಂಚಿದವರಲ್ಲಿ ಪ್ರಮುಖರಾದವರು ವಾಸುಕಿ ವೈಭವ ಕೂಡ ಒಬ್ಬರು.. ಇವರು ಈ ಶೋನ 7ನೇ ಸೀಸನ್ ನಲ್ಲಿ ರನ್ನರ್ ಆಫ್ ಪಡೆದು ಸಂತಸಗೊಂಡವರು. ಇದೀಗ ಬಿಗ್ ಬಾಸ್ ಶೋ ನಂತರ ಇವರು ಪಡೆಯುವ ಸಂಭಾವನೆ ಕೇಳಿದರೆ ಶಾ’ಕ್ ಆಗ್ತೀರಾ ಅದು ಯಾಕೆ? ಬಿಗ್ ಬಾಸ್ ಶೋ ನಲ್ಲಿ ವಾಸುಕಿ ವೈಭವ್ ಒಬ್ಬ ಒಳ್ಳೆಯ ಹಾಡುಗಾರ, ಬರಹಗಾರ, ಹಾಗೂ ಸಂಗೀತ ಸಂಯೋಜಕರಾಗಿ ಹೆಸರು ಪಡೆದಿದ್ದರು. ನಟ ಸುದೀಪ್ ಕೂಡಾ ಇವರೊಂದಿಗೆ ಹಾಡಿದ್ದು ಉಂ’ಟು.

[widget id=”custom_html-3″]

Advertisements

ಇದೀಗ ಈ ಶೋ ನಂತರ ಇವರು ಸಿನಿಮಾಗೆ ಸಂಗೀತ ಮಾಡುತ್ತಿದ್ದಾರೆ. ಹೌದು ಈ ಶೋದಿಂದ ಹೊರಗೆ ಬಂದ ನಂತರ ವಾಸುಕಿ ವೈಭವ ಅವರಿಗೆ ಸಾಲುಸಾಲಾಗಿ ಸಿನಿಮಾಗಳಲ್ಲಿ ಸಂಗೀತ ನಿರ್ದೇಶನ ಮಾಡುವ,ಹಾಡು ಬರೆಯಲು, ಹಾಡು ಹಾಡಲು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಇವುಗಳಲ್ಲಿ ಪ್ರೇಂಚ್ ಬಿರಿಯಾನಿ, ಗರುಡಗಮನ ವೈಭವ ವಾಹನ, ಮುಂದಿನ ನಿಲ್ದಾಣ, ‘ಮುಗಿಲ್ ಪೇಟೆ’ ಸಿನಿಮಾಗಳಲ್ಲಿ ಕೆಲಸ ಮಾಡಿ ಕೀರ್ತಿ ಮತ್ತು ಹೆಸರು ಪಡೆದರು. ಅಷ್ಟೇ ಅಲ್ಲ ಡಾಲಿ ಧನಂಜಯ್ ಅವರ ಬಡವ ರಾಸ್ಕಲ್ ಸಿನಿಮಾದ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದು ಅವರನ್ನು ಎತ್ತರಕ್ಕೆ ಏರಿಸಿ ಅದರೊಂದಿಗೆ ಹೆಸರು ಮತ್ತು ಯಶಸ್ಸನ್ನು ತಂದುಕೊಟ್ಟಿದೆ.

[widget id=”custom_html-3″]

ಹೀಗಾಗಿ ಇದೀಗ ಹಾಡುಗಾರ ಬರಹಗಾರ ಉತ್ತಮ ಸಂಗೀತ ಸಂಯೋಜಕರಾದ ವಾಸುಕಿ ವೈಭವ್ ಅವರು ಒಂದು ಸಿನಿಮಾಗೆ ಸಂಗೀತ ನೀಡಲು ಸುಮಾರು 10 ಲಕ್ಷ ರೂಪಾಯಿ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇವರು ಸಂಗೀತ ನೀಡಿದ ಬಡವ ರಾಸ್ಕಲ್ ಸಿನಿಮಾ ಸಂಗೀತ ಸಂಯೋಜನೆ ಹಿಟ್ ಆಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶಗಳು ಲಭಿಸುವ ಭರವಸೆ ಇದೆ. ಆಗ ಇವರ ಇವರ ಸಂಭಾವನೆ ಸುಮಾರು ಹದಿನೈದು ಲಕ್ಷದವರೆಗೂ ಆಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಆ’ತ್ಮ ಬಲವೊಂದಿದ್ದರೆ ಅಸಾಧ್ಯವಾದದ್ದನ್ನು ಸಾಧ್ಯ ಎಂದು ತೋರಿಸಿದ್ದಾರೆ ವಾಸುಕಿ ವೈಭವ್ ಅವರು. ಅವರ ಎಲ್ಲ ಕಾರ್ಯಗಳಿಗೂ, ನಮ್ಮ ಕಡೆಯಿಂದ ಶುಭ ಹಾರೈಕೆಗಳು.

[widget id=”custom_html-3″]