Advertisements

ತಿರುಪತಿಯಲ್ಲಿ ಪ್ರತಿ ದಿನ ಮೊಟ್ಟ ಮೊದಲ ದೇವರ ದರ್ಶನ ಯಾರು ಮಾಡುತ್ತಾರೆ ಗೊತ್ತಾ? ಯಾರಿಗೂ ತಿಳಿಯದ ದೊಡ್ಡ ರಹಸ್ಯ..

Temples

ಪ್ರಿಯ ಓದುಗರೆ ಏಳು ಮಲೆಗಳಲ್ಲಿ ವಾಸವಾಗಿರುವ ತಿರುಪತಿ, ವೆಂಕಟರಮಣ, ಶ್ರೀನಿವಾಸ, ಗೋವಿಂದ ಎಂದು ಹಲವಾರು ಹೆಸರುಗಳಿಂದ ಕರೆಸಿಕೊಳ್ಳುವ ಈ ದೇವರ ದರ್ಶನ ಮೊದಲು ಪಡೆಯುವವರು ಯಾರು? ಯಾಕೆ ಅವರಿಗೆ ಮೊದಲು ದರ್ಶನ ಸಿಗುತ್ತದೆ? ಈ ಪ್ರಶ್ನೆಗಳಿಗೆ ಈ ಲೇಖನದ ಮೂಲಕ ಉತ್ತರ ತಿಳಿಯೋಣ ಬನ್ನಿ. ತಿರುಪತಿ ವೆಂಕಟರಮಣ ನಿಗೆ ಕೆಲವು ಕಟ್ಟುನಿಟ್ಟಿನ ಪದ್ಧತಿಗಳಿವೆ. ಈ ಪದ್ಧತಿಗಳನ್ನು ಆಯಾ ಜನಾಂಗದವರೇ ಮಾಡಬೇಕು.

[widget id=”custom_html-3″]

ಅವರ ಬದಲಾಗಿ ಬೇರೆಯವರು ಮಾಡುವಂತಿಲ್ಲ. ಕೆಲವರು ಪೂಜೆ ಪೂಜಾರಿಗಳ ಆದರೆ, ಇನ್ನೂ ಕೆಲವರು ಪ್ರಸಾದ ಮಾಡುತ್ತಾರೆ. ಮತ್ತೆ ಕೆಲವರು ಲಡ್ಡು ಮಾಡುತ್ತಾರೆ. ಹೀಗೆ ಒಂದೊಂದು ಜನಾಂಗದವರು ಒಂದೊಂದು ಕಾರ್ಯದಲ್ಲಿ ತೊಡಗಿದ್ದಾರೆ. ಹಾಗಾದರೆ ಇವರಲ್ಲಿ ಮೊದಲು ದರ್ಶನ ಪಡೆಯುವರು ಯಾರು?

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಇವರಲ್ಲಿ ಮೊದಲು ದರ್ಶನ ಪಡೆಯುವುದು ಪೂಜಾರಿ ಎಂದುಕೊಂಡಿರಾ? ಇಲ್ಲ ವೆಂಕಟರಮಣನ ಮೊಟ್ಟಮೊದಲ ದರ್ಶನವನ್ನು ಪೂಜಾರಿಗಳು ಪಡೆಯುವುದಿಲ್ಲ. ಅವರಿಗಿಂತ ಮೊದಲು ಬೇರೆಯವರು ದರ್ಶನ ಪಡೆಯುತ್ತಾರೆ. ಯಾರವರು ಎಂದು ಅಚ್ಚರಿಯೇ? ಮೊಟ್ಟ ಮೊದಲ ಮತ್ತು ಕೊನೆಯ ದರ್ಶನ ಕೂಡ ಇವರಿಗೆ ಲಭಿಸುತ್ತದೆ. ಹಾಗಾದರೆ ಅವರು ಯಾರು.. ವೆಂಕಟರಮಣನ ಮೊಟ್ಟಮೊದಲ ದರ್ಶನ ಪಡೆಯುವರು ಸನ್ನಿಧಿ ಗೊಲ್ಲರು. ಹೌದು ಸನ್ನಿಧಿ ಗೊಲ್ಲರ ಕುಟುಂಬಸ್ಥರು ಮೊದಲ ವೆಂಕಟರಮಣನ ದರ್ಶನವನ್ನು ಪಡೆಯುತ್ತಾರೆ. ಇದಕ್ಕೂ ಒಂದು ಪದ್ಧತಿಯಿದೆ. ಅದೇನೆಂದರೆ, ಗರ್ಭಗುಡಿ ಪೂಜಾರಿ ಹೋಗಿ ಗೊಲ್ಲರ ಮನೆ ಮುಂದೆ ಬಂದು ನಿಲ್ಲುತ್ತಾರೆ. ಆಗ ಗೊಲ್ಲರ ಕುಟುಂಬದ ಓರ್ವ ಮಡಿಯಿಂದ ಬಂದು ಗರ್ಭಗುಡಿ ಮುಂದೆ ನಿಲ್ಲುತ್ತಾನೆ.

[widget id=”custom_html-3″]

ಆಗ ಪೂಜಾರಿಗಳು ಬಾಗಿಲ ಎರಡು ಬದಿ ನಿಂತು ಸುಪ್ರಭಾತ ಹೇಳುತ್ತಾರೆ. ಆಗ ಗರ್ಭಗುಡಿಯ ಬಾಗಿಲು ತೆರೆದು ಮೊದಲ ದರ್ಶನ ಪಡೆಯುತ್ತಾನೆ ಗೊಲ್ಲ. ಆಮೇಲೆ ಅರ್ಚಕರನ್ನು ಕರೆದು ದರ್ಶನ ಪಡೆಯಲು ತಿಳಿಸುತ್ತಾನೆ. ಹಾಗೆ ಪದ್ಧತಿಯ ಪ್ರಕಾರ ಹಾಗೂ ಸಂಪ್ರದಾಯದಂತೆ ರಾತ್ರಿ ಮಂಗಳಾರತಿ ನಂತರ ಬಾಗಿಲು ಮುಚ್ಚುವುದು ಕೂಡ ಈ ಗೊಲ್ಲರ ಕುಟುಂಬಸ್ಥರೇ. ಮೊಟ್ಟ ಮೊದಲ ಮತ್ತು ಕೊನೆಯ ದರ್ಶನ ಪಡೆಯುವ ಪುಣ್ಯ ಇದೀಗ ಕುಟುಂಬಸ್ಥರಿಗೆ ಇದೆ. ಇವರೇ ಪುಣ್ಯವಂತರು. ಇವರ ನಂತರ ಪ್ರತಿದಿನ 70ರಿಂದ 80 ಸಾವಿರ ಜನ ಭಕ್ತರು ದರ್ಶನವನ್ನು ಪಡೆದು ಪುನೀತರಾಗುತ್ತಾರೆ. ಬ್ರಹ್ಮ ಮಹೋತ್ಸವದ ಅಂತಹ ಸಮಯದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನ ಭಕ್ತರು ಆಗಮಿಸಿ ವೆಂಕಟರಮಣ ಹಾಗೂ ಲಕ್ಷ್ಮಿ ದೇವಿಯ ದರ್ಶನವನ್ನು ಪಡೆದು ಪುನೀತರಾಗುತ್ತಾರೆ.

[widget id=”custom_html-3″]