Advertisements

ದಿಢೀರ್ ಅಂಥ ಫೇಸ್ಬುಕ್, ವಾಟ್ಸಪ್ ಇನ್ಸ್ಟಾಗ್ರಾಮ್ ಗೆ ಏನಾಯ್ತು! ಶಾ’ಕ್ ​ಆದ ಬಳಕೆದಾರರು..

Kannada Mahiti

ಹೌದು.. ನಿನ್ನೆ ದಿಢೀರ್ ಅಂತಾ ಈ ಶಾ’ಕ್ ​ನ ನೀವೆಲ್ಲಾ ಅನುಭವಿಸಿರಬಹುದು.. ನಿನ್ನೆ ಸಂಜೆ ಇದ್ದಕ್ಕಿದ್ದ ಹಾಗೇ ನಿಮ್ಮ ವಾಟ್ಸ್ಯಾಪ್​ನಿಂದ ಮೆಸೇಜ್​​ಗಳು ಹೋಗೋದು, ಬರೋದು ಎರಡೂ ಬಂದ್ ಆಯ್ತು. ಫೇಸ್​ಬುಕ್​, ಇನ್ಸಸ್ಟಾದಲ್ಲೂ ನೋ ಅಪ್​ಡೇಟ್ಸ್​.. ಡೇಟಾ ಲೋಡ್​ ಆಗೋದ್​ ಇರ್ಲಿ.. ಥಟ್ ಅಂತಾ ಎಲ್ಲವೂ ಬಂದ್ ಬಂದ್ ಬಂದ್.. ಬರೀ ಭಾರತ ಮಾತ್ರವಲ್ಲ ಇಡೀ ವಿಶ್ವಕ್ಕೆ ನಿನ್ನೆ ಕೆಲವು ಗಂಟೆಗಳು ಈ ರೀತಿಯ ಅನುಭವವಾಗಿದೆ. ಭಾರತ ಕಾಲಮಾನ ಪ್ರಕಾರ ರಾತ್ರಿ 9 ಗಂಟೆ ಸುಮಾರಿಗೆ ಡೇಟಾ ವ್ಯತ್ಯಯವಾಗಿತ್ತು. ಎಲ್ಲರ ಮೊಬೈಲ್​ ವಾಟ್ಸಾಪ್​ನಿಂದ ಮೆಸೇಜ್​ ಹೋಗುವುದು ಸ್ಥಗಿತವಾಗಿತ್ತು. ಅದಾಗಿ ಕೇವಲ ಮೂರು ನಿಮಿಷಗಳಲ್ಲಿ ವಾಟ್ಸಾಪ್​ ಟ್ವಿಟರ್​ ಪೇಜ್​ನಲ್ಲಿ ಅಡಚಣೆಯ ಬಗ್ಗೆ ಟ್ವಿಟ್​ ಬಂದಿದ್ದವು. ರಾತ್ರಿಯಾದರೂ ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ಗಳು ಹಾಗೂ ಸ್ಟೋರಿಗಳು ಲೋಡ್​ ಆಗುತ್ತಿರಲಿಲ್ಲ.

Advertisements

ಮರುದಿನ ಬೆಳಗ್ಗೆ ಎಲ್ಲವೂ ಸರಿಯಾದ ಬಳಿಕ ಸುಮಾರು 5 ಗಂಟೆಯ ಸುಮಾರಿಗೆ ಮಾಲೀಕ ಮಾರ್ಕ್​ ಝಕರ್​​ಬರ್ಗ್​ ಸೇರಿ ಸಂಸ್ಥೆಯ ಎಲ್ಲಾ ಮುಖ್ಯಸ್ಥರು ಅಡಚಣೆಗೆ ಕ್ಷಮೆಯಾಚಿಸಿದರು. ಇದಿಷ್ಟು ನಿನ್ನೆ ಎಲ್ಲರಿಗೂ ಆದ ಅನುಭವ. ಇದರಿಂದ ಜಾಗತಿಕ ಮಟ್ಟದಲ್ಲಿ ಆರ್ಥಿಕ ಏರುಪೇರು ಉಂಟಾಗಿರೋದು ಸತ್ಯ.. ಫೇಸ್‌ಬುಕ್‌ ಮತ್ತು ಅದರ ಆ್ಯಪ್‌ಗಳನ್ನು ಬಳಸಿ ಸಂವಹನ ಹಾಗೂ ವ್ಯಾಪಾರ ವಹಿವಾಟು ನಡೆಸುತ್ತಿದ್ದ 350 ಕೋಟಿಗೂ ಹೆಚ್ಚು ಜನರೂ ತಲ್ಲಣಗೊಂಡಿದ್ದರು ತಮ್ಮ ರೂಟರ್ಸ್​ನಲ್ಲಿ ತಪ್ಪಾದ ಕಾನ್ಫಿಗರೇಷನ್ ಬದಲಾವಣೆ ಮಾಡಿದ್ದರಿಂದ ಆರು ಗಂಟೆಗಳ ಕಾಲ ವ್ಯತ್ಯಯ ಎದುರಿಸಬೇಕಾಯಿತು ಎನ್ನುತ್ತಿದೆ ಫೇಸ್​ಬುಕ್​ ಸಂಸ್ಥೆ. ಇದರಿಂದಾಗಿ ಫೇಸ್​ಬುಕ್ ಮತ್ತು ಅದರ ಮೆಸೇಜಿಂಗ್ ಸರ್ವೀಸಸ್​ಗಳಾದ ವಾಟ್ಸಾಪ್, ಇನ್​ಸ್ಟಾಗ್ರಾಮ್ ಮತ್ತು ಮೆಸೆಂಜರ್ ಬಳಸುವ 350 ಕೋಟಿ ಬಳಕೆದಾರರಿಗೆ ಸಂಪರ್ಕವೇ ಸಿಕ್ಕಿರಲಿಲ್ಲ.

ರೂಟರ್ಸ್​ನಲ್ಲಿ ಕಾನ್ಫಿಗರೇಷನ್​ ಬದಲಾವಣೆಯೇ ಈ ಸಮಸ್ಯೆಗೆ ಕಾರಣ. ನೆಟ್​ವರ್ಕ್​ನ ದಟ್ಟಣೆ ಹಾಗೂ ಡೇಟಾ ತಡೆಯಿಂದಾಗಿ ಡೇಟಾ ಸೆಂಟರ್ ಮೇಲೆ ಪರಿಣಾಮ ಬೀರುವಂತೆ ಮಾಡಿ, ಫೇಸ್​ಬುಕ್​ ಹಾಗೂ ವಾಟ್ಸಾಪ್​ ಸೇವೆ ನಿಂತುಹೋಗಿತ್ತು ಎಂದು ಫೇಸ್​ಬುಕ್ ಬ್ಲಾಗ್​ ಪೋಸ್ಟ್​ನಲ್ಲಿ ಹೇಳಲಾಗಿದೆ. ಫೇಸ್​ಬುಕ್​ನಲ್ಲಿ ಯಾವಾಗಲೂ ಇದ್ದಿದ್ದೇ ಸಮಸ್ಯೆ.. ನಾವೆಲ್ಲರೂ ಟ್ವಿಟರ್​ ಮೊರೆ ಹೋಗೋದು ಒಳ್ಳೆದು ಎನ್ನುವ ಮೀಮ್ಸ್​ ಹರಿಬಿಟ್ಟು ವ್ಯಂಗ್ಯವಾಡಿದ್ದರು. ಜೊತೆಗೆ ಬಹಳಷ್ಟು ಜನ ಬಳಕೆದಾರರು ಈ ಸೋಷಿಯಲ್​ ಸೈಟ್ಸ್​ ಬಿಟ್ಟು, ಟ್ವಿಟರ್​ ಕಡೆ ಮುಖ ಮಾಡಿರುವುದೂ ಸಹ ವರದಿಯಾಗಿದೆ..