Advertisements

ದುಬಾರಿ ಬೆಲೆಯ ಐಷಾರಾಮಿ ಕಾರನ್ನ ಮಣ್ಣಿನಲ್ಲಿ ಸಮಾಧಿ ಮಾಡಿದ ಭೂಪ ! ಕಾರಣ ಕೇಳಿದ್ರೆ ಅಚ್ಚರಿಪಡುತ್ತೀರಾ ?

Kannada Mahiti

ನಮಸ್ತೇ ಸ್ನೇಹಿತರೇ, ಮನುಷ್ಯರು ಇಹಲೋಕ ತ್ಯಜಿಸಿದಾಗ ಮಣ್ಣಲ್ಲಿ ಹೂಳುವುದು ಸಾಮಾನ್ಯ. ಆದರೆ ಕೋಟ್ಯಂತರ ಬೆಲೆ ಬಾಳುವ ಐಷಾರಾಮಿ ಕಾರನ್ನ ಮಣ್ಣಲ್ಲಿ ಹೂತುಹಾಕಿರುವ ಬಗ್ಗೆ ಕೇಳಿದ್ದೀರಾ..ಅಚ್ಚರಿ ಆದ್ರೂ ಇದು ನಿಜ. ಸ್ನೇಹಿತರೇ ಒಂದು ಬೈಕ್ ನ್ನ ತರಲು ಅನೇಕ ಬಾರಿ ಯೋಚನೆ ಮಾಡುತ್ತೇವೆ. ಆದರೆ ದುಬಾರಿ ಬೆಲೆ ಬಾಳುವ ಕಾರನ್ನ ಮಣ್ಣಲ್ಲಿ ಹೂತು ಹಾಕುತ್ತಾರೆ ಎಂದರೆ ನಂಬೋದಕ್ಕೂ ಕಷ್ಟ ಅಲ್ಲವೇ..ಆದರೆ ನೀವು ನಂಬಲೇಬೇಕು. ಹಾಗಾದ್ರೆ ತನ್ನ ಐಷಾರಾಮಿ ಕಾರನ್ನ ಭೂಮಿಯಲ್ಲಿ ಹೂತುಹಾಕಿದ ಆ ಭೂಪ ಯಾರು? ಹೀಗೇಕೆ ಮಾಡಿದ ಎಂಬುದನ್ನ ಬನ್ನಿ.. ಬ್ರೆಜಿಲ್ ನ ತಾನೇ ಸ್ಕಾರ್ಪಾ ದೇಶದ ಖ್ಯಾತ ಉದ್ಯಮಿಗಳಲ್ಲಿ ಒಬ್ಬ. ಈತನ ಬಳಿ ಬರೋಬರಿ ಮೂರು ಕೋಟಿ ಬೆಲೆಬಾಳುವ ಐಷರಾಮಿ ಕಾರಿತ್ತು. ಆದರೆ ಈತ ವಿಚಿತ್ರ ರೀತಿಯ ಸಂದೇಶವೊಂದನ್ನ ಎಲ್ಲರಿಗೂ ಕಳುಹಿಸುತ್ತಾನೆ.

Advertisements

ಆ ಸಂದೇಶದಲ್ಲಿ ಹೀಗಿತ್ತು..ನಾನು ನನ್ನ ಐಷರಾಮಿ ಕಾರನ್ನ ನಾಳೆ ಹತ್ತು ಗಂಟೆಗೆ ಮಣ್ಣಿನಲ್ಲಿ ಸಮಾಧಿ ಮಾಡುತ್ತಿದ್ದೇನೆ. ನೋಡಲಿಚ್ಚಿಸುವವರು ನನ್ನ ಕಾರಿನ ಅಂತ್ಯ ಸಂಸ್ಕಾರಕ್ಕೆ ಬನ್ನಿ ಎಂಬುದಾಗಿ ಇತ್ತು. ಇನ್ನು ಅಲ್ಲಿನ ಜನರಿಗೆ ಇವನ ಹುಚ್ಚಾಟ ನೋಡಿ, ಅವನಿಗೇನು ಹುಚ್ಚು ಇಡಿದೆದೆಯಾ ಅಂತ ಮಾತಾಡಿಕೊಳ್ಳುತ್ತಾರೆ. ಅಷ್ಟೊಂದು ದುಬಾರಿ ಬೆಳೆಯ ಕಾರನ್ನ ಮಣ್ಣಲ್ಲಿ ಹೂಳುವ ಬದಲು ಯಾವುದಾದರೂ ಅನಾಥಾಶ್ರಮಕ್ಕೆ ದಾನವಾಗಿ ಕೊಟ್ಟಿದ್ದರೆ ಅವರು ಅದನ್ನ ಮಾರಿ ಬಂದ ಹಣದಿಂದ ಒಳ್ಳೆಯ ಕೆಲಸಗಳಿಗೆ ಉಪಯೋಗ ಮಾಡುತ್ತಿದ್ದರು ಎಂದು ಮಾತನಾಡಿಕೊಳ್ಳುತ್ತಾರೆ. ಇನ್ನು ಆ ಉದ್ಯಮಿ ಹೇಳಿದ ಮಾತಿನಂತಯೇ ಕಾರನ್ನ ಹೂಳುವ ದೊಡ್ಡದಾದ ಗುಂಡಿಯೊಂದನ್ನ ತೆಗೆಸುತ್ತಾನೆ. ಅದನ್ನ ನೋಡುವ ಸಲುವಾಗಿ ಜನರು ಸೇರಿದಂತೆ ಮಾಧ್ಯಮದವರು ಅಲ್ಲಿಗೆ ಬರುತ್ತಾರೆ.

ಇನ್ನು ಆ ಉದ್ಯಮಿ ತನ್ನ ದುಬಾರಿ ಬೆಲೆಯ ಕಾರನ್ನ ತಾನು ತೋಡಿಸಿದ ಗುಂಡಿಯಲ್ಲಿ ಬಿಡುತ್ತಾನೆ. ಆದರೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಮಣ್ಣು ಮುಚ್ಚಬೇಕು ಎನ್ನುವಷ್ಟರಲ್ಲಿ ಮನಸ್ಸು ಬದಲಾಯಿಸಿಕೊಂಡ ಉದ್ಯಮಿ ಕಾರನ್ನ ಯೂ ಟರ್ನ್ ಮಾಡಿ ನಾನು ನನ್ನ ಮನಸನ್ನ ಬದಲಾಯಿಸಿಕೊಂಡಿದ್ದೇನೆ ಎಂದು ಕಾರನ್ನ ಗುಂಡಿಯಿಂದ ಹೊರತೆಗೆಯುತ್ತಾನೆ. ಆಗ ಆ ಉದ್ಯಮಿ ತಾನೇ ಸ್ಕಾರ್ಪಾ ಹೇಳುತ್ತಾನೆ. ನಾನು ನನ್ನ ಐಷರಾಮಿ ಕಾರನ್ನ ಮಣ್ಣಿನಲ್ಲಿ ಹೂತು ಹಾಕುತ್ತೇನೆ ಎಂದಾಗ ಎಲ್ಲರೂ ನನ್ನನ್ನ ಹುಚ್ಚನಂತೆ ಬೈದರು. ಆದರೆ ನಾನು ಅವರಿಗೆಲ್ಲಾ ಕೇಳುವ ಪ್ರಶ್ನೆ ಏನು ಗೊತ್ತಾ ? ಈ ಕಾರಿಗಿಂತ ಅತ್ಯಮೂಲ್ಯವಾದದ್ದು ಮಾನವನ ಕಣ್ಣು, ಕಿಡ್ನಿ, ಹೃದಯ. ಆದರೆ ಮನುಷ್ಯ ತೀರಿಕೊಂಡ ಮೇಲೆ ನೀವು ಈ ಅಂಗಗಳನ್ನ ಮಣ್ಣಲ್ಲಿ ಹೂತುಹಾಕುತ್ತೀರಾ..ಇಲ್ಲವೇ ಸು’ಟ್ಟುಹಾಕುತ್ತೀರಾ..

ಆದರೆ ಮತ್ತೊಬ್ಬರ ಜೀವನವನ್ನ ಬದುಕಿಸಬೇಕಾದ ಈ ಅಂಗಗಳನ್ನ ದಾನ ಏಕೆ ಮಾಡುವುದಿಲ್ಲ ನೀವು. ಹೀಗೆ ಅಲ್ಲಿ ನೆರೆದಿದ್ದ ಜನರಿಗೆ ಆ ಉದ್ಯಮಿ ಪ್ರಶ್ನೆಯನ್ನ ಕೇಳುತ್ತಾನೆ. ಜೊತೆಗೆ ಅದೇ ಕ್ಷಣವೇ ತನ್ನ ದೇಹದ ಅಂಗಾಂಗಗಳನ್ನ ದಾನ ಮಾಡುವ ಪತ್ರಕ್ಕೆ ಸಹಿ ಹಾಕಿ ಅಲ್ಲಿ ಸೇರಿದ್ದವರಿಗೆಲ್ಲಾ ಅಚ್ಚರಿ ಮೂಡಿಸುತ್ತಾನೆ. ಇನ್ನು ಆ ಉದ್ಯಮಿ ಮಾಡಿದ ಕೆಲಸದಿಂದ ಪ್ರೇರೇಪಣೆಗೊಂಡ ಅನೇಕ ಜನರು ತಮ್ಮ ಅಂಗಾಂಗಗಳನ್ನ ದಾನ ಮಾಡುವ ನಿರ್ಧಾರಕ್ಕೆ ಬಂದು ತಾವು ಕೂಡ ಪತ್ರಕ್ಕೆ ಸಹಿ ಮಾಡುತ್ತಾರೆ. ಹೀಗೆ ತನ್ನ ದುಬಾರಿ ಕಾರನ್ನ ಸಮಾಧಿ ಮಾಡುತ್ತೇನೆ ಎಂದು ಹೇಳಿ ಅಲ್ಲಿ ಸಾವಿರಾರು ಜನ ಸೇರಿದಾಗ ಉದ್ಯಮಿ ತಾನೇ ಸ್ಕಾರ್ಪಾ ಮಾನವನ ದೇಹದ ಅಂಗಾಂಗಗಳ ಮಹತ್ವ ತಿಳಿಸಿಕೊಡುತ್ತಾನೆ. ಎಷ್ಟು ಗ್ರೇಟ್ ಆಲ್ವಾ ಆ ಉದ್ಯಮಿ.