Advertisements

ನಟಿ ಜಯಂತಿ ಅವರ ಪತಿ ಯಾರು ಗೊತ್ತಾ? ಇವರ ಮೊಮ್ಮಗ ಕೂಡ ದೊಡ್ಡ ಸ್ಟಾರ್ ನಟ ನೋಡಿ..

Cinema

ನಮಸ್ತೆ ಸ್ನೇಹಿತರೆ, ನಟಿ ಜಯಂತಿ ಅವರು ಆಗಿನ ಕಾಲಕ್ಕೆ ಬಹಳ ಪೇಮಸ್ ನಟಿ ಯಾಗಿದ್ದರು. ಕನ್ನಡ ಸಿನಿಮಾಗಳಲ್ಲಿ ನಟಿಸಿದ ಟಾಪ್ ನಟಿಯರಲ್ಲಿ ಇವರೂ ಕೂಡ ಒಬ್ಬರಾಗಿದ್ದಾರೆ. ತನ್ನ ಅಮೋಘ ನಟನೆ ಮೂಲಕ ಮನೆ ಮಾತಾಗಿದ್ದವರು. ನಟಿ ಜಯಂತಿ ಅವರನ್ನು ನೋಡಿದರೆ ಈಗಲೂ ಕೂಡ ಆಗಿನ ಸಿನಿಮಾ ಲೋಕಕ್ಕೆ ಕರೆದೊಯ್ಯುವಂತ ಅನುಭವವಾಗುತ್ತದೆ ಅಷ್ಟರ ಮಟ್ಟಿಗೆ ಸಿನಿಮಾ ರಂಗದಲ್ಲಿ ನಟಿ ಜಯಂತಿ ಅವರು ಹೆಸರು ಮಾಡಿದ್ದರು. ಇವರನ್ನು ಅಭಿನಯ ಶಾರದೆ ಎಂತಲೂ ಕರೆಯುತ್ತಿದ್ದರು ಇವರಿಗೆ ನಟನೆ ಮೇಲಿದ್ದ ಪ್ರೀತಿ, ಒಲವು, ಕಾಳಜಿ, ಶಿಸ್ತು ಅಷ್ಟಿಷ್ಟಲ್ಲ ಎವರ್ ಗ್ರೀನ್ ನಟಿ ಎನ್ನಬಹುದು.

Advertisements

ಅದರಲ್ಲಿಯೂ ನಾಗರಹಾವು ಸಿನಿಮಾದಲ್ಲಿ ಒನಕೆ ಓಬವ್ವನ ಪಾತ್ರವಂತು ಮೈ ರೋಮಾಂಚನಗೊಳಿಸುತ್ತದೆ ಅಷ್ಟರ ಮಟ್ಟಿಗೆ ಆ ಪಾತ್ರಕ್ಕೆ ನಟಿ ಜಯಂತಿಯವರು ಜೀವ ತುಂಬಿದ್ದರು. ಇನ್ನು ಹೆಚ್ಚಿನ ಜನಕ್ಕೆ ನಟಿ ಜಯಂತಿ ಅಂದರೆ ಎಲ್ಲರಿಗೂ ಗೊತ್ತು ಆದರೆ ಅವರ ಪತಿ ಯಾರು ಎಂಬುದು ತಿಳಿದಿಲ್ಲ. ಅವರು ಕೂಡ ನಟ ಹಾಗು ನಿರ್ದೇಶಕರಾಗಿದ್ದರು. ನಟ ಜಯಂತಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರಾಗಿದ್ದು ಬಾಲ್ಯದಲ್ಲೇ ಕಷ್ಟದ ದಿನಗಳನ್ನು ನೋಡಿದ್ದಾರೆ. ನಟಿ ಜಯಂತಿ ಚಿಕ್ಕವರಿದ್ದಾಗಲೇ ತಂದೆ ತಾಯಿ ಬೇರೆಯಾಗುತ್ತಾರೆ. ಇದಾದ ನಂತರ ಜಯಂತಿ ಅವರ ತಾಯಿ ಇವರನ್ನು ಕರೆದುಕೊಂಡು ಮದ್ರಾಸ್ ಗೆ ಹೋಗಿ ಕ್ಲಾಸಿಕಲ್ ಡ್ಯಾನ್ಸ್ ಸ್ಕೂಲಿಗೆ ಸೇರಿಸುತ್ತಾರೆ‌‌.

ನಂತರ ನಟಿ ಜಯಂತಿಯ ಅವರ ಮಾತಿನ ಸ್ಟೈಲ್, ಅಭಿನಯ ಗಮನಿಸಿದ ಸಿನಿಮಾಲೋಕ ಇವರನ್ನು ತನ್ನ ಕಡೆಗೆ ಕರೆದುಕೊಂಡಿತು. ನಟಿ ಜಯಂತಿ ಅವರ ಪತಿ ಯಾರು ಎಂದರೆ ಪಿ.ಕೆ.ಟಿ ಶಿವರಾಮ್.. ನಟ ಹಾಗೂ ನಿರ್ದೇಶಕರಾಗಿರುವ ಇವರು ಕನ್ನಡದಲ್ಲಿ ಏಳು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಇನ್ನೊಂದು ವಿಷಯ ಏನೆಂದರೆ ನಟಿ ಜಯಂತಿ ಅವರನ್ನು ಮದುವೆಯಾಗುವ ಮುಂಚೆ ಪಿ.ಕೆ.ಟಿ ಶಿವರಾಮ್ ಅವರಿಗೆ ಮದುವೆಯಾಗಿ 8 ಜನ ಮಕ್ಕಳಿದ್ದರು.. ಇನ್ನು ಇವರ ಮೊದಲನೆಯ ಹೆಂಡತಿಯ ಹೆಸರು ಪ್ರಭಾವತಿ ಇವರಿಬ್ಬರಿಗೆ ನಾಲ್ಕು ಜನ ಗಂಡು ಹಾಗೂ ನಾಲ್ಕು ಜನ ಹೆಣ್ಣುಮಕ್ಕಳಿದ್ದರು.

ಅವರಲ್ಲಿ ಒಬ್ಬರಾದ ಶಾಂತಿ ಅನ್ನುವವರನ್ನು ದಕ್ಷಿಣ ಭಾರತದ ದೊಡ್ಡ ನಿರ್ದೇಶಕ ತ್ಯಾಗರಾಜ್ ಅವರಿಗೆ ಕೊಟ್ಟು ಮದುವೆ ಮಾಡುತ್ತಾರೆ. ತ್ಯಾಗರಾಜ್ ಅವರಿಗೆ ಹುಟ್ಟಿದ ಮಗ ನಟ ಪ್ರಶಾಂತ್ ಅವರು.. ನಟ ಪ್ರಶಾಂತ್ ಅವರು ಮೊದಲಿಗೆ ಜೀನ್ಸ್ ಅನ್ನುವ ಸಿನಿಮಾದಲ್ಲಿ ನಟಿಸಿದ್ದು, ನಂತರ ಸತತವಾಗಿ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು. ಸಂಬಂಧದಲ್ಲಿ ನಟಿ ಜಯಂತಿಯವರಿಗೆ ಮೊಮ್ಮಗನಾಗುತ್ತಾನೆ. ಸ್ಯಾಂಡಲ್ವುಡ್ ನಲ್ಲಿ ದೊಡ್ಡ ನಟಿಯಾಗಿ ಬಿಂಬಿಸಿಕೊಂಡ ನಟಿ ಜಯಂತಿಯವರು‌ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ಅಭಿನಯಿಸಿದ್ದು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಹಿಂದೆ ನಟಿ ಜಯಂತಿಯವರಿಗೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ವತ್ರೆಗೆ ತೆರಳಿದ್ದರು, ಈಗ ಚೇತರಿಸಿಕೊಂಡಿದ್ದಾರೆ ಎನ್ನಲಾಗಿದೆ.‌ ದೇವರು ಇನ್ನಷ್ಟು ಇವರಿಗೆ ಆರೋಗ್ಯ, ಆಯುಷ್ಯ ಕೊಡಲಿ ಎಂದು ಎಲ್ಲರೂ ಪ್ರಾರ್ಥಿಸೋಣ..