ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಕೂಡ ನಾಯಕನಾಗಿ ಹೆಸರು ಮಾಡುತ್ತಿರುವ ಯುವನಾಯಕ.. ಸೋಲು ಗೆಲುವನ್ನ ಬಹಳ ಸಮವಾಗಿ ಸ್ವೀಕರಿಸಿ ಚಿಕ್ಕವಯಸ್ಸಿನಲ್ಲಿ ರಾಜಕೀಯ ಪ್ರಬುದ್ದತೆಯನ್ನ ಮೆರೆದಂತಹ ಕರುನಾಡಿನ ಯುವರಾಜ ನಿಖಿಲ್ ಕುಮಾರಸ್ವಾಮಿ ಅವರು.. ಹೌದು ನಿಖಿಲ್ ಕುಮಾರಸ್ವಾಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಲೈಪ್ ಅನ್ನು ತುಂಬಾ ಎಂಜಾಯ್ ಮಾಡುತ್ತಿದ್ದಾರೆ.. ಇನ್ನೂ ನಿಖಿಲ್ ಅವರು ಪತ್ನಿ ಜೊತೆಗಿನ ಪೋಟೊಗಳನ್ನು ಜಾಲತಾಣದಲ್ಲಿ ಅಗಾಗ ಅಂಚಿಕೊಳ್ಳುತ್ತಾ ಇರುತ್ತಾರೆ.. ಆ ಪೋಟೊಗಳು ಸಹ ಸಖತ್ ವೈರಲ್ ಆಗುತ್ತದೆ..

ಇನ್ನೂ ಮೊನ್ನೆಯಷ್ಟೇ ಅನುಶ್ರಿಯವರ ಸಂದರ್ಶನದಲ್ಲಿ ಯುವರಾಜ ನಿಖಿಲ್ ಬಂದಿದ್ದರು.. ಆ ಸಂದರ್ಶನದಲ್ಲಿ ಹೊಸ ಸಿನಿಮಾಗಳು, ರಾಜಕೀಯ, ವೈಯಕ್ತಿಕ ಜೀವನ ಬಗ್ಗೆ ಮಾತಾನಡಿದ್ದರು.. ಹೌದು ಮದುವೆ ಹಾಗಿ ನಾಲ್ಕು ತಿಂಗಳಾದರೂ ಎಷ್ಟೋ ವರ್ಷಗಳಿಂದ ಜೊತೆಯಲ್ಲಿ ಇದ್ದೇವೆ ಅನಿಸುತ್ತಿದೆ. ಬಹಳ ಮೃದು ಹಾಗೂ ಒಳ್ಳೆಯ ವ್ಯಕ್ತಿತ್ವ ಉಳ್ಳವರು ಎಂದು ಪತ್ನಿಯ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು..
ಕೆಲವೊಂದು ಸಣ್ಣ ಪುಟ್ಟ ವಿಚಾರಗಳಿಗೆ ಕಾವೇರಿ ಅವರ ಕಣ್ಣುಗಳಲ್ಲಿ ಇರುತ್ತದೆ.. ಇನ್ನೂ ಸ್ವಚ್ಚವಾಗಿಡೋದು ಅಂದರೆ ಒಂದು ಕೈ ಮುಂದು.. ನಾನು ವರ್ಷಕ್ಕೊಮ್ಮೆ ರೂಮ್ ಕ್ಲೀನ್ ಮಾಡ್ತಿದ್ದೇ ಈಗ ಪತ್ನಿ ಬಂದಮೆಲೆ ಬದಲಾಗಿದಿನಿ.. ಆದರೂ ಪತ್ನಿಗೆ ಇನ್ನೂ ಬದಲಾಗಬೇಕು ಅಂತ ಹೇಳುತ್ತಾರೆ.. ಇನ್ನೂ ಯಾವಾಗ್ಲೋ ಬಿರಿಯಾನಿ ಮಾಡಿದ್ರಂತೆ ಅದು ನನಗೆ ಗೊತ್ತಿಲ್ಲ ಎಂದಿದ್ದರೂ..

ಇನ್ನೂ ಸಂದರ್ಶನದಲ್ಲಿ ಕಾಲೆಳಿದಿದ್ದ ನೀಖಿಲ್ ಅವರಿಗೆ ರೇವತಿ ಅವರು ಅಡುಗೆ ಮಾಡುವ ಮೂಲಕ ಉತ್ತರವನ್ನು ನೀಡಿದ್ದಾರೆ.. ಹೌದು ಭಾನುವಾರದಂದು ರೇವತಿ ನೀಖಿಲ್ ಅವರಿಗಾಗಿ ಸ್ಪೆಷಲ್ ಅಡುಗೆ ಮಾಡಿ ಬಡಿಸಿದ್ದಾರೆ.. ಇನ್ನೂ ಪತ್ನಿ ಮಾಡುತ್ತಿರುವ ಅಡುಗೆಯ ವೀಡಿಯೋವನ್ನು ಜಾಲತಾಣದಲ್ಲಿ ಅಂಚಿಕೊಂಡಿದ್ದಾರೆ.. ಇನ್ಸ್ಟಾಗ್ರಾಮ್ ಸ್ಟೇಟಸ್ ನಲ್ಲಿ ಹಾಕಿರುವ ಈ ವಿಡಿಯೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ..