Advertisements

ಪುರುಷರು ಮಾಡುವ ಈ 2 ತಪ್ಪಿನಿಂದ ಏಳಿಗೆ ಆಗೋಲ್ಲ ಪಡಬಾರದ ಕ’ಷ್ಟಗಳು ತಪ್ಪಲ್ಲ ! ನೀವೂ ಕೂಡ ಇದೆ ತಪ್ಪನ್ನ ಮಾಡುತ್ತಿರಬಹುದು..

Astrology

ನಮಸ್ತೇ ಸ್ನೇಹಿತರೇ, ನಾವು ನಮಗೆ ಗೊತ್ತಿಲ್ಲದೆಯೇ ಜೀವನದಲ್ಲಿ ಮಾಡುವ ಕೆಲವೊಂದು ತಪ್ಪುಗಳು ನಮ್ಮ ಬಡತನಕ್ಕೆ ಕಾರಣವಾಗುತ್ತವೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಕುಟುಂಬದ ಆಧಾರವಾಗಿರುವ ಪುರುಷರು ಮಾಡುವ ಕೆಲವು ತಪ್ಪುಗಳಿಂದ ಏಳಿಗೆ ಆಗದೆ ಜೀವನವಿಡೀ ಕಷ್ಟಗಳನ್ನ ಅನುಭವಿಸಬೇಕಾಗುತ್ತೆ. ನೆಮ್ಮದಿಯೇ ಇಲ್ಲವಂತವಾಗಿಬಿಡುತ್ತದೆ. ಈ ಎರಡು ತಪ್ಪುಗಳಂತೂ ಪುರುಷರು ಯಾವುದೇ ಕಾರಣಕ್ಕೆ ಮಾಡಬಾರದು. ಹಾಗಾದ್ರೆ ಆ ಎರಡು ತಪ್ಪುಗಳೇನು ? ಯಾವ ಕಾರಣಕ್ಕೋಸ್ಕರ ಪುರುಷರು ಆ ತಪ್ಪುಗಳನ್ನ ಮಾಡಲೇಬಾರದು ಎಂಬುದನ್ನ ತಿಳಿಯೋಣ ಬನ್ನಿ..

Advertisements

ಯಾವ ಪುರುಷನೇ ಆಗಿರಲಿ ಮನೆಯಲ್ಲಾಗಲಿ ಹೊರಗಡೆಯಲ್ಲಾಗಲಿ ಈ ತಪ್ಪುಗಳನ್ನ ಮಾಡಬೇಡಿ. ಮೊದಲನೆಯದಾಗಿ ಪುರುಷರ ಸ್ನಾನದ ವಿಚಾರಕ್ಕೆ ಸಂಬಂಧಪಟ್ಟಿದ್ದಾಗಿದೆ. ಹೌದು, ಪುರುಷರು ಯಾವಾಗೆಲ್ಲಾ ಸ್ನಾನ ಮಾಡುತ್ತಾರೋ ಆಗೆಲ್ಲ ತಲೆ ಸ್ನಾನ ಮಾಡಬೇಕು. ಮೊದಲು ತಲೆಯ ಭಾಗದಿಂದಲೇ ಪುರುಷರು ಸ್ನಾನ ಮಾಡಬೇಕು. ಇನ್ನು ಯಾವುದೇ ಕಾರಣಕ್ಕೂ ನ’ಗ್ನವಾಗಿ ಸ್ನಾನ ಮಾಡಬಾರದು. ಒಂದು ತುಂಡು ವಸ್ತ್ರವನ್ನಾದರೂ ಧರಿಸಿರಬೇಕು. ಒಂದು ವೇಳೆ ನ’ಗ್ನವಾಗಿ ಸ್ನಾನ ಮಾಡಿದ್ದೇ ಆದಲ್ಲಿ ಅವರಿಗೆ ಕಷ್ಟಗಳು ಶುರುವಾಗುವುದರ ಜೊತೆಗೆ ದಾರಿದ್ರ್ಯ ಹೆಚ್ಚಾಗುತ್ತದೆ. ಇದಕ್ಕೆ ಕಾರಣವೂ ಇದೆ. ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಿರುವಂತೆ ನೀರಿನಲ್ಲಿ ಅಗ್ನಿದೇವನ ವಾಸವಿರುವ ಕಾರಣ ಸಂಪಾದನೆ ಆಗದೆ ಆರ್ಥಿಕವಾಗಿ ಏಳಿಗೆಯಾಗುವುದಿಲ್ಲ ಹಾಗೂ ದಟ್ಟ ದಾರಿದ್ರ್ಯದಿಂದ ಜೀವನವೇ ಕಷ್ಟವಾಗಲಿದೆ ಎಂದು ಹೇಳಲಾಗಿದೆ.

ಇನ್ನು ಸ್ನಾನ ಮಾಡಿದ ಬಳಿಕ ಮೈ ಒರೆಸಿದ ಟವೆಲ್ ನ್ನೇ ಸೊಂಟಕ್ಕೆ ಸುತ್ತಿಕೊಂಡು ಮನೆಯಲ್ಲೆಲ್ಲಾ ಓಡಾಡುವುದಾಗಲಿ, ದೇವರ ಕೋಣೆಗೆ ಹೋಗಿ ಪೂಜೆ ಮಾಡುವುದಾಗಲಿ ಮಾಡಲೇಬೇಡಿ. ಮೈ ಒರೆಸಿದ ಟವೆಲ್ ನ್ನ ಸೊಂಟಕ್ಕೆ ಸುತ್ತಿಕೊಳ್ಳಬೇಡಿ. ಅದರ ಬದಲಾಗಿ ಆ ಟವೆಲ್ ನ್ನ ಶುದ್ಧ ನೀರಿನಲ್ಲಿ ಅದ್ದಿ ಚೆನ್ನಾಗಿ ನೀರನ್ನೆಲ್ಲಾ ಹಿಂಡಿದ ಬಳಿಕ ಸೊಂಟಕ್ಕೆ ಸುತ್ತಿಕೊಳ್ಳಬಹುದಾಗಿದೆ. ಸ್ನಾನದ ಬಳಿಕ ಪೂಜೆ ಮಾಡಬೇಕು ಎಂದಾದಲ್ಲಿ ಶುಚಿಯಾಗಿರುವ ಟವೆಲ್ ನ್ನ ಸೊಂಟಕ್ಕೆ ಸುತ್ತಿಕೊಂಡು ಪೂಜೆ ಮಾಡಬಹುದಾಗಿದೆ. ಇನ್ನು ತಲೆ ಒದ್ದೆಯಾಗಿರುವಾಗ ಪೂಜೆ ಮಾಡುವುದು ಒಳ್ಳೆಯದಲ್ಲ. ಸಂಪೂರ್ಣವಾಗಿ ತಲೆ ಚೆನ್ನಾಗಿ ಒಣಗಿದ ಬಳಿಕ ಪೂಜೆ ಮಾಡಬಹುದು.

ಇನ್ನು ಸ್ನಾನದ ಬಳಿಕ ಮೈ ಒರೆಸಿದ ಟವೆಲ್ ನ್ನ ಸೊಂಟಕ್ಕೆ ಕಟ್ಟಿಕೊಂಡು, ದೇವರ ಕೋಣೆ ಸೇರಿದಂತೆ ಮನೆಯೆಲ್ಲೆಲ್ಲಾ ಓಡಾಡಿದಲ್ಲಿ ಕಷ್ಟಗಳನ್ನ ಎದುರಿಸಬೇಕಾಗುತ್ತೆ. ಇನ್ನು ಆ ದಿನ ನೀವು ಮಾಡುವ ಯಾವುದೇ ಕೆಲಸದಲ್ಲಿ ಯಶಸ್ಸು ಸಿಗುವುದಿಲ್ಲ. ಇನ್ನು ವ್ಯಾಪಾರ ವ್ಯವಹಾರ ಚೆನ್ನಾಗಿ ನಡೆದರೂ ಕೂಡ ಯಾವುದಾದರೂ ಕಿರಿಕಿರಿಯಿಂದ ಮನಸ್ಸಿಗೆ ನೆಮ್ಮದಿ ಇರೋದಿಲ್ಲ. ಕುಟುಂಬದಲ್ಲಾಗಲಿ ಮನೆಯಿಂದ ಹೊರಗಡೆಯಲ್ಲಾಗಲಿ ಕಷ್ಟಗಳು ಹುಟ್ಟಿಕೊಳ್ಳುತ್ತವೆ. ನೀವು ಮಾಡುವ ಖರ್ಚು ನಿಮ್ಮ ನಿಯಂತ್ರಣಕ್ಕೆ ಸಿಗದೇ ಆರ್ಥಿಕವಾಗಿ ನಷ್ಟ ಅನುಭವಿಸುತ್ತೀರಾ..ಒಂದು ವೇಳೆ ಈ ರೀತಿ ತಪ್ಪುಗಳು ನಿಮ್ಮ ಜೀವನದಲ್ಲಿ ಆಗುತ್ತಿದ್ದರೆ, ನಾಳೆಯಿಂದಲೇ ಬದಲಾವಣೆ ತನ್ನಿ..ಅದು ನಿಮಗೆ ನಂಬಿಕೆ ಇದ್ದಲ್ಲಿ ಮಾತ್ರ.