ಇತ್ತೀಚಿಗೆ ಉತ್ತರಪ್ರದೇಶದಲ್ಲಿ ದಿನದಿಂದ ದಿನಕ್ಕೆ ಅ’ಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಸರ್ಕಾರ ಬಹು ದೊಡ್ಡ ನಿರ್ಧಾರ ಕೈಗೊಂಡಿದೆ. ಹೌದು, ಉತ್ತರಪ್ರದೇಶದ ಕಾನೂನು ವ್ಯವಸ್ಥೆಗೆ ಮೇಜರ್ ಸರ್ಜರಿ ನಡೆದಿದ್ದು ಸಂಪೂರ್ಣ ಸ್ವಾತಂತ್ರ್ಯವನ್ನ ನೀಡಲಾಗಿರುವ ವಿಶೇಷವಾದ ಪೊಲೀಸ್ ಪಡೆಯನ್ನ ನಿರ್ಮಿಸಲಾಗುತ್ತಿದ್ದು, ಈ ಪೊಲೀಸ್ ಪಡೆ ಯಾರ ಮನೆ ಮೇಲೆ ಬೇಕಾದರೂ ವಾ ರೆಂಟ್ ಇಲ್ಲದೆಯೇ ದಾ ಳಿ ಮಾಡಿ ಸರ್ಚ್ ಮಾಡಬಹುದಾಗಿದೆ. ಹಾಗೂ ಅಂತಹ ಆ’ರೋಪಿಗಳನ್ನ ಯಾವುದೇ ಮುಲಾಜಿಲ್ಲದೆ ಯಾರ ಪರ್ಮಿಷನ್ ಗೂ ಕಾಯದೆ ಬಂ ಧಿಸಬಹುದಾಗಿದೆ ಎಂದು ಹೇಳಲಾಗಿದೆ.

ಇನ್ನು ಈ ಪೊಲೀಸ್ ಪಡೆಗೆ UPSSF ಎಂಬ ಹೆಸರಿಡಲಾಗಿದ್ದು ಯಾರ ಮೇಲೆ ಅನುಮಾನ ಬರುತ್ತದೆಯೋ ಅಂತಹವರ ಮನೆ ಮೇಲೆ ವಾರೆಂಟ್ ಇಲ್ಲದೆಯೇ ದಾಳಿ ಮಾಡುವುದರ ಜೊತೆಗೆ ಅಂತಹವರನ್ನ ವಾರೆಂಟ್ ಇಲ್ಲದೆಯೋ ಬಂಧನ ಮಾಡುವ ಅಧಿಕಾರ ಕೊಡಲಾಗಿದೆ. ಇನ್ನು ಪರಮಾಧಿಕಾರ ನೀಡಿರುವ ಈ ಪೊಲೀಸ್ ಪಡೆ ಆಡಳಿತ ಕಟ್ಟಡ, ಸರ್ಕಾರೀ ಕಚೇರಿಗಳು, ಕೋರ್ಟ್ ಗಳು, ಏರಪೋರ್ಟ್ ಗಳು, ಮಹಾನಗರ ಹಾಗೂ ಬ್ಯಾಂಕ್ ಗಳನ್ನ ರಕ್ಷಣೆ ಮಾಡುವ ಹೊಣೆಗಾರಿಕೆಯನ್ನ ನೀಡಲಾಗಿದೆ.

ಇನ್ನು ಇದು ಸಿಎಂ ಯೋಗಿ ಆದಿತ್ಯನಾಥರ ಕನಸಿನ ಯೋಜನೆ ಎಂದು ಹೇಳಲಾಗಿದ್ದು ಈಗಾಗಲೇ ಆರಂಭದ ಹಂತವಾಗಿ ೮ ಬೆಟಾಲಿಯನ್ ಪಡೆಗಳನ್ನ ನಿರ್ಮಿಸಲಾಗಿದೆ. ಇನ್ನು ಈ ಪಡೆಗಳಿಗೆ ಪ್ರತ್ಯೇಕವಾದ ಕಾನೂನು ನಿಯಮಗಳನ್ನ ರೂಪಿಸಲಾಗಿದ್ದು ಈ ಪಡೆ ಯಾವುದೇ ವಾ’ರೆಂಟ್ ಹಾಗೂ ಮ್ಯಾಜಿಸ್ಟ್ರೇಟ್ ಅನುಮತಿ ಕೂಡ ಪಡೆಯದೇ ಅನುಮಾನ ಬಂದ ಯಾವುದೇ ವ್ಯಕ್ತಿಯನ್ನ ಬಂ’ಧನ ಮಾಡಬಹುದಾಗಿದೆ. ಇನ್ನು ಪೊಲೀಸರಿಗೆ ನೀಡಿರುವ ಈ ಪರಮಾಧಿಕಾರ ದುರ್ಬಳಕೆ ಆಗುವ ಸಾಧ್ಯತೆಗಳಿವೆ ಎಂದು ಹಲವಾರು ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಉತ್ತರ ಪ್ರದೇಶದಲ್ಲಿ ಅ’ಪರಾಧ ಪ್ರ’ಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಿಎಂ ಅವರು ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.