Advertisements

ಬೇಳೆಕಾಳಗಳು, ಸಕ್ಕರೆ ಡಬ್ಬಿಗಳಿಗೆ ಹುಳ ಬೀಳದಂತೆ ತಡೆಯಲು ಹೀಗೆ ಮಾಡಿ..

Kannada Mahiti

ಸಾಮಾನ್ಯವಾಗಿ ಮನೆಗಳಲ್ಲಿ ಒಂದು ತಿಂಗಳಿಗೆ ಆಗುವಷ್ಟು ಕಾಳು ಕಡಿ ದಿನಸಿಗಳನ್ನ ಅಂಗಡಿಯಿಂದ ತಂದು ಡಬ್ಬಿಗಳಲ್ಲಿ ಇಡುವುದು ವಾಡಿಕೆ. ಆದರೆ ಯಾವುದೇ ರೀತಿಯ ಡಬ್ಬಗಳಲ್ಲಿ ಸಕ್ಕರೆ, ಬೇಳೆಕಾಳುಗಳನ್ನ ಶೇಖರಿಸಿ ಇಟ್ಟರೂ, ಈ ಹಾಳು ಹುಳುಗಳು ಬಿದ್ದು ದಿನಸಿಗಳನ್ನೆಲ್ಲಾ ಹಾಳು ಮಾಡಿ ಬಿಡುತ್ತವೆ. ಹಾಗಾದ್ರೆ ಬೇಳೆ ಕಾಳುಗಳಲ್ಲಿ, ಸಕ್ಕರೆಯಲ್ಲಿ ಹುಳ ಬೀಳದಂತೆ ತಡೆಯುವುದು ಹೇಗೆ ಎಂಬುದರ ತಿಳಿಯೋಣ ಬನ್ನಿ..

Advertisements

ಸಕ್ಕರೆ, ಬೆಲ್ಲ ಇದ್ದಲಿ ಇರುವೆಗಳು ಜಾಡು ಹಿಡಿದು ಬರುವುದು ಸಾಮಾನ್ಯ. ಆದರೆ ಯೋಚನೆ ಬೇಡ, ಸಕ್ಕರೆ ಡಬ್ಬಿಗೆ 3 ರಿಂದ 4 ಲವಂಗಗಳನ್ನ ಹಾಕುವುದರಿಂದ ಇರುವೆಗಳು ಸಕ್ಕರೆಗೆ ಬೀಳುವುದಿಲ್ಲ. ಇನ್ನು ಅಂಗಡಿಯಿಂದ ಬೇಳೆಕಾಳು, ಕಡಿಗಳನ್ನ ಮನೆಗೆ ತಂದಾಗ ಬಿಸಿಲಿನಲ್ಲಿ ಸುಮಾರು 5 ರಿಂದ 6 ಗಂಟೆಯವರೆಗೆ ಒಣಗಿಸಿ, ಬಳಿಕ ಡಬ್ಬಿಯನ್ನ ಚೆನ್ನಾಗಿ ಸ್ವಚ್ಛ ಮಾಡಿ ನೀರಿನ ಹನಿ ಒಂಚೂರು ಇಲ್ಲದಂತೆ ಒರೆಸಿ ಅದರಲ್ಲಿ ಬೇಳೆಕಾಳುಗಳನ್ನ ಹಾಕಿ ಇಡಿ. ಇದರಿಂದ ಹುಳುಗಳು ಬೀಳುವುದಿಲ್ಲ.

ಇನ್ನು ಈ ಹುಳುಗಳು ಸಾಂಬಾರ್ ಪುಡಿ, ಧನಿಯಾ ಪುಡಿ, ಖಾರದ ಪುಡಿಯನ್ನು ಬಿಡುವುದಿಲ್ಲ. ಹಾಗಾಗಿ ಈ ಮಸಾಲೆ ಪದಾರ್ಥಗಳಿಗೆ ಸ್ವಲ್ಪ ಉಪ್ಪನ್ನ ಹಾಕಿ ಡಬ್ಬಿಯಲ್ಲಿ ಹಾಕಿಡಿ. ಇದರಿಂದ ಹುಳಗಳು ಬೀಳುವುದಿಲ್ಲ. ಆದರೆ ನೆನಪಿರಲಿ, ಅಡುಗೆ ಮಾಡುವಾಗ ಉಪ್ಪನ್ನ ಕಡಿಮೆ ಹಾಕಿ. ಇನ್ನು ಅಕ್ಕಿ, ಗೋಧಿ ಹಿಟ್ಟು ಡಬ್ಬಗಳಿಗೂ ಹುಳ ಬೀಳುತ್ತವೆ. ಬೇವಿನ ಎಲೆಗಳನ್ನ ತೊಳೆದು, ನೀರು ಚೆನ್ನಾಗಿ ಆರಿದ ಮೇಲೆ ಡಬ್ಬಿಗಳಿಗೆ ಹಾಕಿ ಹುಳಗಳ ಭಾದೆ ತಪ್ಪುತ್ತದೆ.