Advertisements

ಭಾರತದ 10 ವರ್ಷದ ಬಾಲಕಿಗೆ ಸನ್ಮಾನ ಮಾಡಿದ ಜಗತ್ತಿನ ದೊಡ್ಡಣ್ಣ ! ಈ ಬಾಲಕಿ ಯಾರು?ಮಾಡಿದ್ದೇನು ಗೊತ್ತಾ?

News

ಕರೋನಾ ಸೋಂಕಿನಿಂದಾಗಿ ಜಗತ್ತಿನ ದೊಡ್ಡಣ್ಣ ಅಮೆರಿಕಾ ಅಕ್ಷರಶಃ ನಲುಗಿಹೋಗಿದೆ. ಅತೀ ಹೆಚ್ಚು ಕರೋನಾ ಸೋಂಕಿತರು ದಾಖಲಾಗಿರುವ ಅಮೇರಿಕಾದಲ್ಲಿ ವೈದ್ಯರು, ನರ್ಸ್ ಗಳು ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಹಗಲು ರಾತ್ರಿ ಎನ್ನದೆ ತಮ್ಮ ಜೀವದ ಹಂಗು ತೊರೆದು, ಸೋಂಕಿತರಿಗೆ ಚಿಕಿತ್ಸೆ ಮಾಡುತ್ತಿದ್ದಾರೆ.

Advertisements

ಹಾಗಾಗಿ ಕರೋನ ವಾರಿಯರ್ಸ್ ಗಳನ್ನ ಹುರಿದುಂಬಿಸುವ ಸಲುವಾಗಿ ಅಮೆರಿಕಾ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ರವರು ವೈದ್ಯರು, ನರ್ಸ್ ಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಸೇರಿದಂತೆ ಅಲ್ಲಿನ ಪೊಲೀಸರಿಗೂ ಸನ್ಮಾನ ಮಾಡಿ ಅವರನ್ನ ಹುರಿದುಂಬಿಸಿದ್ದಾರೆ. ಇನ್ನು ವಿಶೇಷ ಎನೆಂದರೆ ಇದರ ನಡುವೆಯೇ ಭಾರತದ ಮೂಲದ ಹತ್ತು ವರ್ಷದ ವಿಧ್ಯಾರ್ಥಿನಿಗೂ ಟ್ರಂಪ್ ಸನ್ಮಾನ ಮಾಡಿದ್ದಾರೆ. ಹೌದು, 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 10 ವರ್ಷದ ಶ್ರಾವ್ಯ ಅಣ್ಣಪ್ಪ ಎಂಬ ಬಾಲಕಿಯ ಕಾರ್ಯಕ್ಕೆ ಮನಸೋತಿರುವ ಟ್ರಂಪ್ ಕರೋನಾ ವಾರಿಯರ್ಸ್ ಜೊತೆಯಲ್ಲೇ ಈ ಬಾಲಕಿಗೂ ಸನ್ಮಾನ ಮಾಡಿದ್ದಾರೆ.

ಕರೋನಾ ವಾರಿಯರ್ಸ್ ನ್ನ ಹುರಿದುಂಬಿಸುವ ಸಲುವಾಗಿ ಸ್ಕೌಟ್ ನಲ್ಲಿ ಸಕ್ರಿಯವಾಗಿರುವ ಶ್ರಾವ್ಯ ತನ್ನ ಸ್ನೇಹಿತರೊಂದಿಗೆ ಸೇರಿ ವೈದ್ಯರು, ನರ್ಸ್ ಗಳು  ಹಾಗೂ ಆಸ್ಪತೆಯ ಸಿಬ್ಬಂದಿಗಳಿಗೆ ಬಿಸ್ಕೆಟ್ ನೀಡುವುದು, ಗ್ರೀಟಿಂಗ್ ಕೊಡುವುದರ ಮೂಲಕ ವೈದ್ಯರ ತಂಡಕ್ಕೆ ಅಭಿನಂದನೆ ಸ್ಲಲಿಸುವುದು ಹೀಗೆ ನಿರಂತರವಾಗಿ ಕರೋನಾ ವಾರಿಯರ್ಸ್ ಗಳನ್ನ ಹುರಿದುಂಬಿಸುವ ಕೆಲಸ ಮಾಡದಿದ್ದಳು ಶ್ರಾವ್ಯ. ಹಾಗಾಗಿಯೇ ಕರೋನಾ ವಾರಿಯರ್ಸ್ ಗಾಗಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಶ್ರಾವ್ಯ ಕೆಲಸಗಳನ್ನ ಮೆಚ್ಚಿದ್ದ ಟ್ರಂಪ್ ಆಕೆಗೂ ಸನ್ಮಾನ ಮಾಡಿದ್ದಾರೆ.