Advertisements

ಮಕ್ಕಳನ್ನ ದೇವರಿಗೆ ಹೋಲಿಸ್ತೇವೆ.. ಆದರೆ ಇಲ್ಲಿ ಒಂದು ಮಗು ದೇವಸ್ಥಾನಕ್ಕೆ ಕಾಲಿಟ್ಟಿದ್ದಕ್ಕೆ ಅಪವಿತ್ರವಾಯ್ತು ಅಂಥ ಅಲ್ಲಿನವರು ಏನ್ ಮಾಡಿದ್ದಾರೆ ಗೊತ್ತಾ?

Kannada Mahiti

ನಮಸ್ಕಾರ ಬಂಧುಗಳೇ.. ದೊಡ್ಡವರು ಒಂದು ಮಾತು ಹೇಳ್ತಾರೆ.‌‌ ಮಕ್ಕಳ ತೊದಲುತ್ತ ಹೇಳುವದ ನಕ್ಕು ನಿರ್ಲಕ್ಷಿಸಬೇಡ.. ಅಲ್ಲಿ ಮುಪ್ಪಿನ ಜ್ಞಾನಕ್ಕಿಂತ ಕಟು ಸತ್ಯವಿರುತ್ತೆ ಅಂತ.. ಹೌದು ಮಕ್ಕಳು ದೇವರಿಗೆ ಹೋಲಿಸುವ ನಾವು ಕೆಲ ಒಮ್ಮೆ ಹೋಲಸು ಯೋಚನೆಗೆ ಜಾರುತ್ತೆವೆ… ಒಮ್ಮೊಮ್ಮೆ ಅನಿಸುತ್ತೆ ಯಾಕೆ ಈ ಸಮಾಜ ಹೀಗೆ? ಜನರ ಯೋಚನೆ ಯಾಕೆ ಹೀಗೆದೆ ಅಂತ ಪ್ರಶ್ನೆ ಮೂಡುತ್ತದೆ.. ಯಾಕಿಷ್ಟು ಮಕ್ಕಳು ದೇವರು ನಂಬಿಕೆ ಅಂತ ಹೇಳ್ತಿನ್ನೆ ಅಂತ ಯೋಚಿಸ್ತಿದ್ದಿರ… ನಾ ಹೇಳುವ ಸ್ಟೋರಿ ಕೇಳಿದ್ರೆ ಛೇ… ಎನ್ ಜನ ಅಂತೀರ.. ಹೌದು ಕೊಪ್ಪಳದಲ್ಲಿ ದ’ಲಿ’ತರ ಮಗು ಒಂದು ದೇವಸ್ಥಾನ ಪ್ರವೇಶಿಸಿ ಅಪವಿತ್ರ ಆಗಿದೆ ಎಂದು, ದೇವಸ್ಥಾನ ಶುದ್ಧೀಕರಿಸಿದ್ದಲ್ಲದೇ ಮಗುವಿನ ಪೋಷಕರಿಗೆ ದೇವಸ್ಥಾನದ ಶುದ್ಧೀಕರಣ ಹೆಸರಲ್ಲಿ 10 ಸಾವಿರ ರೂಪಾಯಿ ದಂಡ ಹಾಕಲಾಗಿದೆ. ಕಾಲ ಬದಲಾದ್ರು ಜನರ ಮನಸ್ಥಿತಿ ಬದಲಾಗ್ತಿಲ್ಲ ನೋಡಿ‌..

Advertisements

ಈ ಘ’ಟ’ನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೀಯಾಪೂರ ಗ್ರಾಮದಲ್ಲಿ ನಡೆದಿದೆ. ಈ ಅಮಾನವೀಯ ಕೃತ್ಯಕ್ಕೆ ಈಗಾಗ್ಲೇ ಸೋಶಿಯಲ್ ಮಿಡಿಯಾದಲ್ಲಿ ನೆಟ್ಟಿಗರು ಗ’ರಂ ಆಗಿದ್ದಾರೆ . ಚನ್ನದಾಸರ ಸಮುದಾಯದ ಮಗು ಗ್ರಾಮದ ಆಂಜನೇಯ ದೇವಸ್ಥಾನ ಪ್ರವೇಶಿಸಿದೆ. ದ’ಲಿ’ತರು ದೇವಸ್ಥಾನ ಪ್ರವೇಶಿಸಿದ್ದಕ್ಕೆ ಅಪವಿತ್ರವಾಗಿದೆ ಎಂದು ಸವರ್ಣಿಯರು ದೇವಸ್ಥಾನ ಶುದ್ದಿಕರಿಸಿದ್ದರು, ಅವರ ಜಾ’ತಿ ಪ’ದ್ಧ’ತಿ ಅಲ್ಲಿಗೆ ನಿಲ್ಲಲಿಲ್ಲ ನೋಡಿ 11 ಸಾವಿರ ರೂ ದಂಡವನ್ನು ಮಗುವಿನ ಕುಟುಂಬದಿಂದ ವಸೂಲಿ ಮಾಡಿದೆ.. ಒಮ್ಮೊಮ್ಮೆ ನಾವು ಇಂತವರ ಮಧ್ಯ ಬದುಕ್ತಿದ್ದಿವಾ ಅನಿಸುತ್ತೆ. ಮಕ್ಕಳು ದೇವರು ಅನ್ನೋವರು..‌ ಮಗು ದೇವಸ್ಥಾನಕ್ಕೆ ಹೋಗಿದ್ಕೆ ದಂ’ಡ ಹಾಕಿ ನಮ್ಮ ನೀಚ ಮನಸ್ಥಿಯನ್ನು ತೋರಿಸ್ತಿವಿ ನೋಡಿ..

ಅದೇ ವಿಚಾರವಾಗಿ ಮಗು ದೇವಸ್ಥಾನ ಪ್ರವೇಶ ಮಾಡಿದ ಕುರಿತು ಗ್ರಾಮದ ಸವರ್ಣಿಯರು ಸಭೆ ನಡೆಸಿ ಕೊನೆಗೆ ಆ ಮಗುವಿನ ಕುಟುಂಬಕ್ಕೆ ದಂ’ಡ ವಿ’ಧಿ’ಸಿದ್ದರು. ಇದನ್ನು ವಿ’ರೋ’ಧಿಸಿ ಚನ್ನದಾಸರ ಸಮುದಾಯ ಪ್ರತಿಭಟನೆ ಮಾಡಿತ್ತು, ಪ್ರತಿಭಟಿಸಿದ್ರೇನು ಪ್ರಯೋಜನ ಹೇಳಿ? ಆದ ಅಚಾತುರ್ಯ ತಿದ್ಕೊಳ್ಳುವುದೆ ದೊಡ್ಡದಲ್ವ.. ದೇವಸ್ಥಾನ ಪ್ರವೇಶ ಮಾಡಿರೋ ದಲಿತ ಮಗುವಿನ ಕುಟುಂಬಕ್ಕೆ ದಂ.ಡ ವಿಧಿಸುವ ಮೂಲಕ ಅ.ಸ್ಪೃ.ಶ್ಯತೆ ಆಚರಣೆ ಜೀವಂತ ಇರಿಸಿದ್ದು ತಡವಾಗಿ ಬೆಳಕಿಗೆ ಬಂದು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಸಭೆ ಮಾಡಿದ್ದಾರೆ. ಗ್ರಾಮಕ್ಕೆ ಕುಷ್ಟಗಿ ತಹಶೀಲ್ದಾರ ಸಿದ್ದೇಶ, ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಭೇಟಿ ನೀಡಿ ಸಭೆ ನಡೆಸಿದ್ದಾರೆ. ಜೀವನದಲ್ಲಿ ಏನು ಇಲ್ಲ ಈ ನಮ್ಮ ನಡೆ ನುಡಿ ಶುದ್ಧವಾಗದ್ರೆ ಸಾಕು ಬದುಕು ಸಾಕ್ಷರವಾಗೊದ್ರಲ್ಲಿ ನೋ ಡೌಟ್..‌