Advertisements

ಮದಗಜ ಸಿನಿಮಾ ಹೇಗಿದೆ ಗೊತ್ತೇ? ದೂಳೆಬ್ಬಿಸೋದು ಪಕ್ಕಾ!

Uncategorized

ರೋರಿಂಗ್ ಸ್ಟಾರ್ ಶ್ರೀಮುರಳಿ ಅವರ ಅಭಿಮಾನಿಗಳು ಕಾತುರತೆಯಿಂದ ಕಾದಿರುವ ಸಿನಿಮಾ ಮದಗಜ.. ಅಯೋಗ್ಯ ಸಿನಿಮಾದ ನಂತರ ಮಹೇಶ್ ಕುಮಾರ್ ಒಂದು ಬಿಗ್ ಬಜೇಟ್ ಮಾಸ್ ಆ್ಯಕ್ಷನ್ ಎಂಟರ್​​ಟೈನ್ಮೆಂಟ್​ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.. ಸ್ಯಾಂಡಲ್​ವುಡ್​​ನಲ್ಲಿ ಸಿನಿಮಾ ಫ್ಯಾಷನ್ ಇರೋ ನಿರ್ಮಾಪಕರಲ್ಲೊಬ್ಬರಾಗಿರುವ ಉಮಾಪತಿ ಶ್ರೀನಿವಾಸ್ ಗೌಡ ಈ ಚಿತ್ರವನ್ನ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.. ಮೊದಲು ಒಂದು ಡ್ಯುಯೆಟ್ ಸಾಂಗ್ , ನಂತರ ಒಂದು ಜಬರ್​​ದಸ್ತ್ ಮಾಸ್ ಸಾಂಗ್ ಅನ್ನ ಬಿಟ್ಟು ಪ್ರೇಕ್ಷಕರ ಎದೆಯೋಳಗೆ ನಿರೀಕ್ಷೆಯ ಕಿಚ್ಚ ಅನ್ನ ಹತ್ತಿಸಿದ ಮದಗಜ ಸಿನಿಮಾ ಬಳಗ ಈಗ ತಾಯಿ ಬಗ್ಗೆ ಹಾಡೊಂದನ್ನ ಹೊರ ಬಿಟ್ಟಿದೆ..

[widget id=”custom_html-3″]

Advertisements

ನಗುತಾ ತಾಯಿ, ಹಡೆದಾ ಕೂಸು , ಬೇರಾಯಿತೆ ಕರುಳ ದಾರಿ.. ಲಾಲಿ ಹಾಡಿ ಜೋಳಿಗೆ ತೂಗೋದು ಪರರಾ ಪಾಲಾಯ್ತೆ ಕೈ ಜಾರಿ ಅನ್ನೋ ಬ್ಯುಟಿಫುಲ್ ಲಿರಿಕ್ಸ್ ಜೊತೆಗೆ ಪ್ರೇಕ್ಷಕರ ಮುಂದೆ ಬಂದಿದೆ, ಮದಗಜ ಸಿನಿಮಾ. ಶ್ರೀ ಮುರುಳಿ ಅಂದ್ರೆ ಒಂದು ಸಾಕಷ್ಟು ನೀರೀಕ್ಷೆಗಳನ್ನು ಹುಟ್ಟಿಸಿರುವ ಮದಗಜ ಸಿನಿಮಾ ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಂಡು ಸದ್ಯ ಬಿಡುಗಡೆಗೆ ಕೌಂಟ್ ಡೌನ್ ಮಾಡುತ್ತಿದೆ. ಸದ್ಯ ಚಿತ್ರತಂಡ 350 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್‌ ಮಾಡಿಕೊಂಡಿದೆ.

[widget id=”custom_html-3″]

ಅಯೋಗ್ಯ ಮಹೇಶ್‌ ನಿರ್ದೇಶನದ ಈ ಚಿತ್ರ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಜಗಪತಿ ಬಾಬು ಕ್ಯಾರೆಕ್ಟರ್‌ ಲುಕ್‌ ಆಚೆ ಬಂದಿದೆ. ಅದೇ ರೀತಿ ರತ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ದೇವಯಾನಿ, ಬಸವನಾಗಿ ನಟಿಸುತ್ತಿರುವ ರಂಗಾಯಣ ರಘು ಹಾಗೂ ತಾಂಡವ ಪಾತ್ರಧಾರಿ ಆಗಿರುವ ಗರುಡ ರಾಮ್‌ ಕೂಡ ‘ಮದಗಜ’ ಚಿತ್ರದ ಮೇಲಿನ ನೀರೀಕ್ಷೆ ಹೆಚ್ಚಿಸಿದ್ದಾರೆ.

[widget id=”custom_html-3″]