Advertisements

ಮನೆಕೆಲಸ ಮಾಡುವ ಹುಡುಗನ ಮದುವೆಯಲ್ಲಿ ಈ ಖ್ಯಾತ ನಟ ಮಾಡಿದ್ದೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ. ಸಿನಿಮಾ ರಂಗದಲ್ಲಿ ಕೆಲವರಿಗೆ ಸ್ಟಾರ್ ಗಿರಿ ಬಂದ ತಕ್ಷಣ ತಾನು ಬಂದ ದಾರಿಯನ್ನು ಮರೆತು ತನಗಿಂತ ಯಾರು ಇಲ್ಲ ಎಂದು ವರ್ತಿಸುತ್ತಾರೆ. ಇನ್ನು ಕೆಲವು ನಟರು ಎಷ್ಟೇ ಬೆಳೆದರು ಅವರು ನಡೆದುಕೊಳ್ಳುವ ರೀತಿ ಆವ ಭಾವ ಮತ್ತು ಕಷ್ಟ ಎಂದು ಬಂದವರಿಗೆ ಸಹಾಯ ಮಾಡುವುದನ್ನು ಈಗಿನ ಕೆಲವು ನಟರಲ್ಲಿ ನೀವು ಕಂಡಿರಬಹುದು. ಅದರಲ್ಲಿ ಈ ನಟ ಮಾಡಿರುವ ಕೆಲಸ ನೋಡಿದರೆ ನಿಜಕ್ಕೂ ಹೆಮ್ಮೆ ಅನಿಸುತ್ತದೆ. ದಕ್ಷಿಣ ಭಾರತ ಖ್ಯಾತ ನಟರಲ್ಲಿ ಸೂರ್ಯ ಅವರು ಕೂಡ ಒಬ್ಬರು. ನಟ ಸೂರ್ಯ ಅವರು ಈ ಹಿಂದೆ  ಅನಾಥ ಮಕ್ಕಳಿಗೆ 70 ಕೋಟಿ ಬೆಲೆ ಬಾಳುವ ಮನೆಯನ್ನು ಕೊಟ್ಟು ಅವರನ್ನು ನೋಡಿಕೊಳ್ಳುತ್ತಿದ್ದಾರೆ. 

Advertisements

ಇನ್ನು ಈಗ ಮತ್ತೊಂದು ಕೆಲಸವನ್ನು ಮಾಡಿರುವ ನಟ ಸೂರ್ಯ ಅವರು ಹೃ’ದಯಕ್ಕೆ ತುಂಬಾ ಹತ್ತಿರವಾಗಿದ್ದಾರೆ. ಸಾಮಾನ್ಯವಾಗಿ  ಕೆಲವು ಶ್ರೀಮಂತಿಕೆಯ ಮನೆಯಲ್ಲಿ ಕೆಲಸ ಮಾಡುವವರಿಗೆ ಏನಾದರೂ ಹಣದ ಅವಶ್ಯಕತೆ ಇದ್ದಾಗ ಹಣದ ಸಹಾಯವನ್ನು ಮಾಡಿ ಕಳುಹಿಸಿಬಿಡುತ್ತಾರೆ. ಆದರೆ ನಟ ಸೂರ್ಯ ಅವರು ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗನಿಗೆ ಅಣ್ಣನ ಸ್ಥಾನದಲ್ಲಿ ನಿಂತು ಏನು ಮಾಡಿದ್ದಾರೆ ನೋಡಿ. ನಟ ಸೂರ್ಯ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗನಿಗೆ ಮದುವೆ ನಿಶ್ಚಯವಾಗಿತ್ತು. ಈ ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ನಟ ಸೂರ್ಯ ಅವರು ವಹಿಸಿಕೊಂಡು ಮದುವೆ ಕಾರ್ಯವನ್ನು ನೆರವೇರಿಸಿದ್ದಾರೆ.

ನಟ ಸೂರ್ಯ ಅವರು ಸಿನಿಮಾ ಶೂಟಿಂಗ್ ನಲ್ಲಿ ನಿರತರಾಗಿದ್ದರು ಆದರೆ ತಮ್ಮ ಮನೆಯ ಕೆಲಸದ ಹುಡುಗನಿಗೆ ಮದುವೆ ನಿಶ್ಚಯವಾಗಿದ್ದ  ಕಾರಣ ಎರಡು ದಿನ ರಜೆ ಹಾಕಿ ಮದುವೆಯ ಸಂಪೂರ್ಣ  ಸಿದ್ದತೆಗಳನ್ನು ತಾನೇ ಮುಂದೆ ನಿಂತು ಮಾಡಿಸಿದ್ದಾರೆ. ಇನ್ನು ಈ ಹುಡುಗನ ಮದುವೆಗೆ ಸೂರ್ಯ ಕುಟುಂಬದವರೆಲ್ಲ ಬಂದಿದ್ದು ನವ ಜೋಡಿಗಳಿಗೆ ಆಶಿರ್ವದಿಸಿದ್ದಾರೆ. ನಟ ಸೂರ್ಯ ಅವರು ಮದುವೆಯಲ್ಲಿ ಎಲ್ಲರೊಂದಿಗೆ ಲವಲವಿಕೆಯಿಂದ ಮಾತನಾಡುತ್ತಾ ಸಾಮಾನ್ಯ ವ್ಯಕ್ತಿಯಂತೆ ಇರುವುದನ್ನ ಕಂಡ ಅಲ್ಲಿನವರು ಎಷ್ಟು ಸರಳ ಜೀವಿ ಎಂದು ಮಾತಾಡಿಕೊಂಡಿದ್ದಾರೆ. ನಿಜಕ್ಕೂ ಸೂರ್ಯ ಅವರ ಮನೆಯಲ್ಲಿ ಕೆಲಸ ಮಾಡುತ್ತಿರುವ ಹುಡುಗ ಭಾಗ್ಯವಂತ. ಸೂರ್ಯ ಅವರು ರಿಲ್ ಲೈಪ್ ನಲ್ಲಿ ಹೀರೋ ಮಾತ್ರವಲ್ಲದೇ ರಿಯಲ್ ಲೈಪ್ ನಲ್ಲೂ ಕೂಡ ಹೀರೋ ಆಗಿದ್ದಾರೆ. ನಿಜಕ್ಕೂ ಸೂರ್ಯ ಅವರ ಸರಳತನ, ನಡವಳಿಕೆ ಮತ್ತು ಸಹಾಯ ಮಾಡುವಂತಹ ಗುಣವನ್ನು ಎಲ್ಲರೂ ಮೆಚ್ಚಲೇಬೇಕು.