Advertisements

ಮಹಾಭಾರತ ಕಾಲದ ಅಚ್ಚರಿಯ ರಥ ಪತ್ತೆ!

Adyathma

ಪ್ರಿಯ ಓದುಗರೆ ಭಾರತದಲ್ಲಿ ಎರಡು ಮಹಾಕಾವ್ಯಗಳು ಅಥವಾ ಗ್ರಂಥಗಳ ಹುಟ್ಟಿಕೊಂಡಿವೆ. ಅದುವೇ ರಾಮಾಯಣ ಮತ್ತು ಮಹಾಭಾರತ. ಕೆಲವರು ಇವು ನಡೆದಿರುವುದು ಸುಳ್ಳು ಎನ್ನುತ್ತಿದ್ದಾರೆ. ಅಂತವರಿಗೆ ಕೆಲಸಗಳು ಯು ನಡೆದಿದೆ ಎಂದು ಸಾಕ್ಷಿ ಸಮೇತ ಪ್ರೊ ಮಾಡಿವೆ. ಹೌದು ರಾಮಾಯಣ ನಡೆದಿದೆ ಎನ್ನಲು ರಾಮ ನಿರ್ಮಿಸಿದ ಲಂಕಾ ಸೇತುವೆ, ರಾಮ ಕಾಡಿಗೆ ಹೋದಾಗ ಇರುವ ಕುರುಹುಗಳು ಪತ್ತೆಯಾಗಿವೆ. ಅದರಂತೆ ಮಹಾಭಾರತದ ನಡೆದಿದೆ ಎನ್ನುವುದಕ್ಕೆ ಭೀಮನ ಹೆಜ್ಜೆಗುರುತುಗಳು, ಅವರು ಇದ್ದು ಹೋದ ಗುಹೆಗಳು, ಬಳಸಿದ ರಥಗಳ ಕುರುಹುಗಳು ಪತ್ತೆಯಾಗಿವೆ. ಹಾಗಾದರೆ ಪತ್ತೆಯಾಗಿದ್ದು ಎಲ್ಲಿ ಎಂದು ನೋಡೋಣ ಬನ್ನಿ. ಮಹಾಭಾರತ ಕುರುಗಳು ಪತ್ತೆಯಾಗಿದ್ದು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರ ಎಂಬಲ್ಲಿ. ಈ ಕೈವಾರದ ಬೆಟ್ಟದಲ್ಲಿ ಭೀಮಾ ನಡೆದು ಹೋದ ಹೆಜ್ಜೆ ಗುರುತಿದೆ. ಹಾಗೆ ಬೆಟ್ಟದಲ್ಲಿ ಬಕಾಸುರ ವಾಸವಾಗಿದ್ದ ಗುಹೆ ಕೂಡ ಇದೇ. ಈ ಕಾರಣಕ್ಕೆ ಕೈವಾರ ಗ್ರಾಮವನ್ನು ಮೊದಲು ಏಕಚಕ್ರನಗರ ಎನ್ನುತ್ತಿದ್ದರು.

Advertisements

ಹಾಗೆ ಕರ್ನಾಟಕದ ಇನ್ನೊಂದು ಜಿಲ್ಲೆ ಹಾವೇರಿ ಯ ಹಾನಗಲ್ ನ್ನು ಹಿಂದೆ ‘ವಿರಾಟನಗರ’ ಎಂದು ಕರೆಯುತ್ತಿದ್ದರು. ಏಕೆಂದರೆ ಪಾಂಡವರು ಇಲ್ಲಿ ಅಜ್ಞಾತವಾಸ ಕಳೆದುಹೋಗಿದ್ದರ ಗುರುತುಗಳು ಪತ್ತೆಯಾಗಿವೆ. ಮಹಾಭಾರತದ ಇನ್ನೂ ಕೆಲ ಕುರುಹುಗಳು ಇಂದಿನ ಅಪಘಾನಿಸ್ತಾನದಲ್ಲಿ ಇವೆ. ಹೌದು… ಇದು ಈಗ ಗಾಂಧಾರ ದೇಶವಾಗಿದೆ. ಈ ಪ್ರದೇಶವನ್ನು ಗಾಂಧಾರ ಪ್ರದೇಶ ಎಂದು ಈಗಲೂ ಕರೆಯುತ್ತಾರೆ. ಮಹಾಭಾರತದ ಧೃತರಾಷ್ಟ್ರನ ಪತ್ನಿ ಗಾಂಧಾರಿ, ಹಾಗೂ ಈಕೆಯ ಸಹೋದರ ಶಕುನಿ ಈ ಸ್ಥಳದಿಂದ ಬಂದವರು. ಇದೀಗ ಮಹಾಭಾರತ ನಡೆದಿದೆ ಎನ್ನುವುದಕ್ಕೆ ಮತ್ತೊಂದು ಪುರಾವೆ ದೊರೆತಿದೆ. ಹೌದು ಉತ್ತರಪ್ರದೇಶದ ಭಗವತ್ ಜಿಲ್ಲೆಯಲ್ಲಿ ರಥದ ಗುರುತುಗಳು ಪತ್ತೆಯಾಗಿವೆ. ಯು ಮಹಾಭಾರತ ಯುಗದಲ್ಲಿ ಬರುವ ರಥಗಳು ಎಂದು ಗುರುತಿಸಲಾಗಿದೆ. ಇದಕ್ಕೆ 5000 ವರ್ಷಗಳ ಇತಿಹಾಸವಿದೆ ಎಂದು ಪುರಾತತ್ವ ಇಲಾಖೆ ತಿಳಿಸಿದೆ.

ಭಗಭತ್ ಜಿಲ್ಲೆಯ ಸೋನೋಲಿ ಗ್ರಾಮ ಇದೀಗ ಪುರಾತತ್ವ ಇಲಾಖೆಯ ಬೀಡಾಗಿದೆ. ಹೌದು ಮಹಾಭಾರತ ನಡೆದಿದೆ ಎನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ಲಭಿಸುತ್ತಿವೆ. ಇನ್ನೂ ಉತ್ಖನನ ಮತ್ತು ಅವಶೇಷಗಳಾಗಿ ದೇಶವಿದೇಶಗಳಿಂದ ಬಂದ ವಿಜ್ಞಾನಿಗಳು ಇಲ್ಲಿ ಬೀಡು ಬಿಟ್ಟಿದ್ದಾರೆ. ಮಹಾಭಾರತದ ಕುರುಗಳ ಸಂಶೋಧನೆಗಾಗಿ ಇಲ್ಲಿ ಸಂಶೋಧಕರು ವರ್ಷಗಳಿಂದ ಸಂಶೋಧನೆ ಮುಂದುವರಿಸಿದ್ದಾರೆ. ಆಗ ಕುರುಕ್ಷೇತ್ರ ಮಹಾಭಾರತದ ಯುದ್ಧ ತಾಣವಾಗಿತ್ತು.ಇದು ಈಗ ಹರಿಯಾಣದ ಅಂಬಾಲದಿಂದ 40 ಕಿಲೋಮೀಟರ್ ದೂರದಲ್ಲಿದೆ. ಇದನ್ನು ಕುರುಕ್ಷೇತ್ರ ಎಂದೇ ಕರೆಯುತ್ತಾರೆ. ಶ್ರೀಕೃಷ್ಣ ಭಗವದ್ಗೀತೆ ಬೋಧಿಸಿದ್ದು ಈ ಸ್ಥಳದಲ್ಲಿಯೇ. ಇಲ್ಲಿ ಬ್ರಹ್ಮ ಸರೋವರವಿದೆ. ಈಗಲೂ ಗ್ರಹಣದ ನಂತರ ಋಷಿಮುನಿಗಳು ಇಲ್ಲಿ ಮಿಂದು ಪಾಪಗಳನ್ನು ತೊಳೆದುಕೊಳ್ಳುತ್ತಾರೆ ಎಂದು ನಂಬಿಕೆ ಇದೆ. ಅಂಬಾಲದ ಕುರುಕ್ಷೇತ್ರ ಈಗಲೂ ಕೆಂಪು ಮಣ್ಣಿನಿಂದ ಕೂಡಿದೆ. ಯಾಕೆಂದರೆ ಇಲ್ಲಿ ಕೌರವರು ಮತ್ತು ಪಾಂಡವರು ಸತತವಾಗಿ 18 ದಿನಗಳವರೆಗೆ ಯುದ್ಧಮಾಡಿದ್ದರು. ಇಲ್ಲಿ ಸಾವಿರಾರು ಸೈನಿಕರ ರಕ್ತ ಚೆಲ್ಲಾಡಿದೆ. ರಾಜರುಗಳ, ಋಷಿಮುನಿಗಳ ರ’ಕ್ತ’ದ ಕೊಡಿ ಹರಿದಿದೆ. ಇದೆ ಕಾರಣದಿಂದ ಇಲ್ಲಿಯ ಮಣ್ಣು ಈಗಲೂ ಕೆಂಪಗಾಗಿದೆ ಎಂದು ಪುರಾಣ ಹೇಳುತ್ತದೆ.