Advertisements

ಮಹಾವೀರ ಕರ್ಣ ಸಾ’ಯುವ ಮುನ್ನ ಶ್ರೀ ಕೃಷ್ಣ ಆ 3 ವರಗಳನ್ನು ಕೊಟ್ಟಿದ್ದೇಕೆ ಗೊತ್ತಾ ?

Adyathma

ನಮಸ್ತೇ ಸ್ನೇಹಿತರೇ, ಹಿಂದೂಗಳ ಮಹಾಗ್ರಂಥಗಳಲ್ಲಿ ಒಂದಾಗಿರುವ ಮಹಾಭಾರತ ಸಾಗರವಿದ್ದಂತೆ. ಎಷ್ಟು ತಿಳಿದರೂ ಮತ್ತಷ್ಟು ತಿಳಿಯುವ ಕುತೂಹಲ. ಮಹಾಭಾರತದಲ್ಲಿ ಬರುವ ಪ್ರತೀ ಪಾತ್ರಗಳ ಬಗ್ಗೆ ತಿಳಿದಷ್ಟೂ ಹಲವಾರು ಪ್ರಶ್ನೆಗಳನ್ನ ನಮ್ಮ ಮನಸ್ಸಿನಲ್ಲಿ ಹುಟ್ಟುಹಾಕುತ್ತಲೇ ಇರುತ್ತದೆ. ಮಹಾಭಾರತದಲ್ಲಿ ಇಂದಿಗೂ ಯಾರಿಗೂ ಅರ್ಥವಾಗದ ಪಾತ್ರ ಎಂದರೆ ಅದು ಮಹಾವೀರ ದಾನ ಶೂರ ಕರ್ಣ. ಹೌದು, ಕುರುಕ್ಷೇತ್ರದ ಮಹಾಯುದ್ಧದಲ್ಲಿ ಕರ್ಣ ತನ್ನ ಅಂತಿಮ ಸಮಯ ಬಂತು ಎಂದು ತಿಳಿದಾಗ ಭಗವಾನ್ ಶ್ರೀಕೃಷ್ಣನ ಬಳಿ ತನ್ನ ಕಟ್ಟ ಕಡೆಯ ಆಸೆಯೊಂದನ್ನ ಕೇಳುತ್ತಾನಂತೆ. ಅದನ್ನ ಕೇಳಿದ ಸ್ವತಃ ವಾಸುದೇವನೇ ಗಾಬರಿಯಾದನಂತೆ ಎನ್ನುವ ಕತೆಯಿದೆ. ಹಾಗಾದ್ರೆ ದಾನ ಶೂರನಾಗಿದ್ದ ಕರ್ಣನೇ ಕೃಷ್ಣನ ಬಳಿ ಕೇಳಿಕೊಂಡಿದ್ದೇನು ಎನ್ನುವುದನ್ನ ನೋಡೋಣ ಬನ್ನಿ..

Advertisements

ಧರ್ಮದ ಸ್ಥಾಪನೆಗಾಗಿ ಶ್ರೀಕೃಷ್ಣನ ಸಾರಥ್ಯದಲ್ಲಿ ನಡೆದ ಈ ಮಹಾಭಾರತ ಯುದ್ಧದಲ್ಲಿ ಕರ್ಣಾರ್ಜುನರ ಯುದ್ಧವಂತೂ ಭ’ಯಂಕರವಾಗಿತ್ತು.. ಇನ್ನು ಭಾಗವನ್ ಪರುಷರಾಮ ಶಿಷ್ಯನಾಗಿದ್ದ ಕರ್ಣ ಅರ್ಜುನನನಿಗಿಂತಲೂ ಧನುರ್ವಿದ್ಯೆಯಲ್ಲಿ ಶ್ರೇಷ್ಟನಾಗಿದ್ದ. ಕರ್ಣ ಅರ್ಜುನರ ನಡುವಿನ ಯುದ್ಧ ಹೇಗಿತ್ತೆಂದರೆ ಅವರ ಬಾಣಗಳ ಪ್ರಹಾರದಿಂದ ಇಬ್ಬರ ರಥಗಳು ಅಡಿಗಳಷ್ಟು ಹಿಂದೆ ಸರಿಯುತ್ತಿದ್ದವು. ಅರ್ಜುನ ಹೊಡೆದ ಬಾಣಕ್ಕೆ ಕರ್ಣನ ರಥ ನೂರು ಅಡಿಯಷ್ಟು ಹಿಂದೆ ಹೋದರೆ ಕರ್ಣನ ಬಾಣದ ಪ್ರಹಾರಕ್ಕೆ ಮಧ್ಯಮ ಪಾಂಡವನ ರಥ ಕೇವಲ ಒಂದೆರಡು ಅಡಿಯಷ್ಟು ಮಾತ್ರ ಹಿಂದೆ ಸರಿಯುತಿತ್ತು. ಆದರೂ ಕೂಡ ಸ್ವತಃ ಕೃಷ್ಣ ಕರ್ಣ ಬಿಲ್ಲುಗಾರಿಕೆಗೆ ವ್ಹಾವ್..ಭೇಷ್ ಮಹಾವೀರ ಎಂದು ಹೊಗಳುತ್ತಿದ್ದ.

ಇದನ್ನ ಕೇಳಿಸಿಕೊಂಡ ಅರ್ಜುನ ಕೃಷ್ಣನನ್ನ ಕೇಳುತ್ತಾನೆ. ಮಾಧವ ನನ್ನ ಬಾಣದ ಪ್ರ’ಹಾರಕ್ಕೆ ಕರ್ಣನ ರಥ ನೂರು ಅಡಿಯಷ್ಟು ಹಿಂದೆ ಹೋಗುತ್ತಿದೆ. ಅದರೆ ಕರ್ಣನ ಬಾಣದ ಪ್ರ’ಹಾರಕ್ಕೆ ನನ್ನ ರಥ ಕೇವಲ ಒಂದೆರಡು ಅಡಿಯಷ್ಟು ಮಾತ್ರ ಹಿಂದೆ ಸರಿಯುತ್ತಿದೆ. ಆದರೂ ನೀನು ಕರ್ಣನನ್ನ ಮಹಾವೀರ ಎಂದು ಹೊಗಳುತ್ತಿರುವೆ ಎಂದಾಗ ಕೃಷ್ಣ ಹೇಳುತ್ತಾನೆ..ಹೇ ಅರ್ಜುನ, ನಿನ್ನ ರಥದ ಮೇಲೆ ಸ್ವತಃ ನಾನಿದ್ದೇನೆ ಹಾಗೂ ಸಾಕ್ಷಾತ್ ಹನುಮಂತನೇ ನಿನ್ನ ರಥದ ಮೇಲಿದ್ದಾನೆ. ಇನ್ನು ನಿನ್ನ ರಥದ ತೂಕವೇನು ಕಡಿಮೆಯಿಲ್ಲ. ಇಷ್ಟಾಗಿಯೂ ಮಾನವನಾದ ಕರ್ಣ ಹೊಡೆದ ಬಾಣಕ್ಕೆ ನಮ್ಮ ರಥ ಹಿಂದೆ ಸರಿಯುತ್ತಿದೆ. ಅಂದರೆ ನೀನೇ ಯೋಚನೆ ಮಾಡು ಮಹಾವೀರ ಯಾರೆಂದು ಎಂದು ಹೇಳುತ್ತಾನೆ.

ಇನ್ನು ಮಹಾಭಾರತ ಯುದ್ಧ ಅಂತಿಮ ಘಟ್ಟ ತಲುಪಿದಾಗ ಅರ್ಜುನ ಮತ್ತು ಕರ್ಣನ ನಡುವೆ ಮಹಾಯು’ದ್ಧ ನಡೆಯುತ್ತದೆ. ಇದೆ ವೇಳೆ ಕರ್ಣ ರಥವು ಭೂಮಿಯಲ್ಲಿ ಹೂತು ಹೋಗುತ್ತದೆ. ಇದಕ್ಕೆ ಇಂದೇ ಭೂದೇವಿ ನೀಡಿದ್ದ ಶಾಪವು ಕಾರಣವಾಗಿರುತ್ತದೆ. ಇನ್ನು ಇದೆ ಸಮಯದಲ್ಲಿ ಶ್ರೀಕೃಷ್ಣನು ಕರ್ಣನನ್ನ ಪರೀಕ್ಷೆ ಮಾಡುವ ಸಲುವಾಗಿ ಸ್ವತಃ ತಾನೇ ಕರ್ಣನ ಬಳಿ ಬಂದು ನಿನ್ನ ಚಿನ್ನದ ಹಲ್ಲನ್ನ ದಾನವಾಗಿ ಕೊಡು ಎಂದು ಕೇಳುತ್ತಾನೆ. ಆಗ ಹಿಂದೂ ಮುಂದು ನೋಡದ ಕರ್ಣ ತನ್ನ ಚಿನ್ನದ ಹಲ್ಲನ್ನ ಕಲ್ಲಿನಿಂದ ಹೊ’ಡೆದು ಕಿತ್ತು ಕೊಡುತ್ತಾನೆ. ಕರ್ಣನ ದಾನಶೀಲತೆಗೆ ಮೆಚ್ಚಿದ ಕೃಷ್ಣ ಮೂರು ವರಗಳನ್ನ ಕೇಳಿಕೊ ಕೊಡುತ್ತೇನೆ ಎಂದು ಕೇಳುತ್ತಾನೆ.

ಆಗ ಕರ್ಣನು ಕೃಷ್ಣನ ಬಳಿ ಕೇಳುತ್ತಾನೆ..ನಾನು ಸೂತಪುತ್ರ ಎಂಬ ಹೆಸರಿನಿಂದಲೇ ಜೀವನ ಪರ್ಯಂತ ನನಗೆ ಅನ್ಯಾಯವಾಗಿದೆ. ಇದರಿಂದ ನನಗೆ ಎಷ್ಟೋ ಅವಮಾನಗಳಾಗಿವೆ. ಹಾಗಾಗಿ ನನ್ನ ಮುಂದಿನ ಜನ್ಮದಲ್ಲಿ ಅನ್ಯಾಯಕ್ಕೆ ಒಳಗಾಗುವ ಜನರಿಗೆ ನಾನು ಸಹಾಯ ಮಾಡುವಂತಾಗಬೇಕು. ಇನ್ನು ಎರಡನೆಯ ವರವಾಗಿ ನನ್ನ ಮುಂದಿನ ಜನ್ಮದಲ್ಲಿ ವಾಸುದೇವ ನೀನು ನಾನು ಜನಿಸುವ ರಾಜ್ಯದಲ್ಲೇ ಜನ್ಮ ತಾಳಬೇಕು ಎಂದು ಕೇಳುತ್ತಾನೆ. ಮೂರನೆಯ ವರವಾಗಿ.. ಅಂತಿಮ ವಾರವಾಗಿ ನನ್ನ ಅಂತ್ಯದ ಬಳಿಕ ಈ ಭೂಮಿ ಮೇಲೆ ಎಲ್ಲಿ ಪಾಪ, ಅನ್ಯಾಯ ವಿಲ್ಲವೋ ಅಲ್ಲೇ ನನ್ನ ಸಂಸ್ಕಾರ ಮಾಡಬೇಕು ಎಂದು ಕೇಳುತ್ತಾನೆ ಕರ್ಣ.

ಆಗ ಶ್ರೀಕೃಷ್ಣ ಹೇಳುತ್ತಾನೆ..ಕರ್ಣ ನನ್ನನ್ನ ನೀನು ಇಕ್ಕಟ್ಟಿಗೆ ಸಿಲುಕಿಸಿದೆ. ಅನ್ಯಾಯ, ಪಾಪವಿಲ್ಲದ ಅಂತಹ ಯಾವುದೇ ಜಾಗ ಈ ಭೂಮಿಯ ಮೇಲೆ ಇಲ್ಲವೇ ಇಲ್ಲ. ಕೊನೆಗೆ ವಾಸುದೇವ ಕೃಷ್ಣ ಕರ್ಣನ ಅಂತಿಮ ಸಂಸ್ಕಾರವನ್ನ ತನ್ನ ಅಂಗೈನಲ್ಲಿ ಮಾಡುತ್ತಾನೆ ಎನ್ನುವ ಕತೆಯಿದೆ. ಇನ್ನು ಈ ಕಾರ್ಯದಿಂದಲೇ ಕರ್ಣ ವೈಕುಂಠವನ್ನ ಸೇರುತ್ತಾನೆ ಎಂದು ಹೇಳಲಾಗಿದೆ.