Advertisements

ಮಾಲೀಕನ ಸಾವಿನ ಸುದ್ದಿ ಕೇಳಿ ಓಡೋಡಿ ಬಂದ ಕರು ಮಾಡಿದ್ದೇನು ಗೊತ್ತಾ.?ಭಾವುಕರಾಗಿ ಕಣ್ಣೀರಿಟ್ಟ ಜನ.!

Kannada Mahiti

ಈ ಪ್ರೀತಿ ವಿಷಯ ಬಂದರೆ ಹಾಗೆ ಸಂಬಂಧಗಳು ಕೇವಲ ಮನುಷ್ಯ ಮನುಷ್ಯರೊಡನೆ ಇರಬೇಕು ಎಂಬುದಾಗಿ ಯಾವ ಗ್ರಂಥ ಪದ್ದತಿ ಹಾಗೂ ಲೇಖನದಲ್ಲೂ ಇಲ್ಲ. ಪ್ರೀತಿ ವಿಚಾರಕ್ಕೆ ಬಂದರೆ ಪ್ರಾಣಿಗಳು ಮನುಷ್ಯನಿಗಿಂತ ಒಂದು ಕೈ ಮೇಲೆ ಎಂಬುದು ಈಗಾಗಲೇ ಸಾಕಷ್ಟು ಬಾರಿ ನಿರೂಪಿತವಾಗಿದೆ. ಹೌದು ಮನುಷ್ಯನ ಜೊತೆ ಸ್ವಾನದ ಪ್ರೀತಿ ಹೇಗಿರುತ್ತದೆಂದು ನೀವು ಈಗಾಗಲೇ ಗಮನಿಸಿದ್ದೀರಿ. ನಾಯಿ ಪ್ರೀತಿ ಮುಂದೆ ಮನುಷ್ಯನ ಪ್ರೀತಿ ತುಂಬಾ ಕಡಿಮೆ ಎಂದು ಹೇಳಬಹುದು. ಒಂದು ಬಾರಿ ಮನುಷ್ಯನಿಗೆ ಯಾವುದೇ ಪ್ರಾಣಿ, ಮನಸ್ಸು ಕೊಟ್ಟು ಇಷ್ಟಪಟ್ಟರೆ, ಆತನನ್ನ ಎಂದಿಗೂ ಮರೆಯುವುದಿಲ್ಲ. ಅದೇ ರೀತಿ ಇದೀಗ ಇಲ್ಲೊಂದು ಘಟನೆ ನಿಜಕ್ಕೂ ಕಣ್ಣೀರು ತರಿಸುವಂತೆಯೇ ನಡೆದಿದೆ ಸ್ನೇಹಿತರೆ.

ಹೌದು ಈ ಪ್ರಕರಣ ನಿಜಕ್ಕೂ ಎಂತಹವರ ಕಲ್ಲು ಮನಸ್ಸನ್ನು ಒಂದು ಕ್ಷಣ ಹಗುರು ಮಾಡುವಂತೆ ಮೃದು ಮಾಡುವಂತೆ ಕಣ್ಣಲ್ಲೇ ನೀರು ಜಾರುವಂತೆ ಇದು ನಡೆದಿದೆ. ಜಾರ್ಖಂಡ್ ಹಜಾರಿಬಾಗ್ ನಲ್ಲಿಯ ಚೌತಿ ಎಂಬ ಗ್ರಾಮದ ಒಬ್ಬ ರೈತನ ಸಾವಿನ ಬೆನ್ನಲ್ಲೇ ಆತನ ಬಳಿ ಇದ್ದ ಕರು ಮಾಡಿದ ಕೆಲಸಗಳು ನಿಜಕ್ಕೂ ಎಂತಹ ಅವರನ್ನು ಕಣ್ಣೀರು ತರಿಸುವಂತೆ ಮಾಡಿದೆ ಎಂದು ಹೇಳಲಾಗಿದೆ. ಹೌದು, ಆತನ ಹೆಸರು ಮೇವಾಲಾಲ್ ಠಾಕೂರ್. ಇದೆಲ್ಲ ನಡೆದಿರುವುದು ಪಪ್ರೋ ಎಂಬ ಒಂದು ಸಣ್ಣ ಹಳ್ಳಿಯಲ್ಲಿಯಂತೆ. ಯಜಮಾನನ ಸಾ’ವಿನ ಸುದ್ದಿ ಕೇಳಿ ಕರು ಸ್ಮ’ಶಾನಕ್ಕೆ ಓಡೋಡಿ ಬಂದಿದ್ದು ಆರಂಭದಲ್ಲಿ ಊರಿನ ಜನರು ಗ್ರಾಮಸ್ಥರು, ಈ ಕರುವನ್ನು ನೋಡಿ ಇದ್ಯಾಕೆ ಇತ್ತ ಬರುತ್ತಿದೆ ಎಂದು ಹೊ-ಡೆಯಲು ಮುಂದಾಗಿದ್ದಾರೆ. ಎಷ್ಟು ಸಾರಿ ಓಡಿಸಲು ಪ್ರಯತ್ನ ಪಟ್ಟರೂ ಮತ್ತೆ ಮತ್ತೆ ಬರುತ್ತಿದೆ ಎಂದು ಚಿಂತನ ನಡೆಸಿದ್ದಾರೆ.

Advertisements

ಆಗ ಅಕ್ಕ ಪಕ್ಕದವರು ಈ ಕರು ಆ ವ್ಯಕ್ತಿ ಬಳಿ ಇತ್ತು ಎಂದು ಹೇಳಿದ್ದಾರೆ. ಯಜಮಾನನ ಒಡೆಯನ ಸಾ’ವಿನ ಸುದ್ದಿ ಕೇಳುತ್ತಿದ್ದಂತೆ ಓಡಾಡಿ ಬಂದ ಈ ಕರು ಆರಂಭದಲ್ಲಿ ಊರಿನವರ ತಿರಸ್ಕಾರದಂತೆ ದೂರ ಸರಿದಿದೆ. ಗ್ರಾಮಸ್ಥರು ಸುಮ್ಮನೆ ಆದ ಬಳಿಕ ಒಡೆಯನ ಬಳಿ ಹೋಗಿ ಬಟ್ಟೆಯನ್ನು ತೆರೆದು ಹಣೆಗೆ ಮತ್ತು ಕಾಲಿಗೆ ಮುತ್ತಿಟ್ಟಿದೆ. ಆತನನ್ನ ಆ ಸ್ಥಿತಿಯಲ್ಲಿ ನೋಡಿ ನೋಡಿ ಕಣ್ಣೀರು ಹಾಕಿದೆ ಎಂದು ಅಲ್ಲಿ ನೆರೆದ ಸ್ಥಳೀಯರು ಹೇಳಿದ್ದಾರೆ ಎನ್ನಲಾಗಿದೆ. ಕರು ಅಲ್ಲಿಯ ಜನರ ಜೊತೆ ತನ್ನ ಒಡೆಯನ ಶ’ವದ ಸುತ್ತ ಹೆಜ್ಜೆ ಸಹ ಹಾಕಿತು ಎಂದು ಹೇಳಿದ್ದಾರೆ. ತನ್ನ ಯಜಮಾನನ ಆ ಅಂ-ತ್ಯಕ್ರಿಯೆಯಲ್ಲಿ ಪಾಲ್ಗೊಂಡ ಈ ಕರು ನಿಜಕ್ಕೂ ಅಲ್ಲಿಗೆ ಬಂದಿದ್ದ ಎಲ್ಲರಲ್ಲೂ ಸಹ ಕಣ್ಣೀರು ಹಾಕಿಸಿತು. ಒಬ್ಬ ಮನುಷ್ಯನ ಜೊತೆ ಪ್ರಾಣಿ ಎಷ್ಟರಮಟ್ಟಿಗೆ ಪ್ರೀತಿ ವಾತ್ಸಲ್ಯ ಸ್ನೇಹ ಇಟ್ಟುಕೊಳ್ಳಬಹುದು ಎಂಬುದಾಗಿ ಈ ಕರುವೆ ಸಾಕ್ಷಿಯಾಗಿದೆ.

ಆ ವ್ಯಕ್ತಿಯ ಬಳಿ ಒಂದು ಆಕಳು ಇತ್ತು, ಅದರ ಮಗುವಾಗಿ ಹುಟ್ಟಿ ಬಂದ ಈ ಕರು ಮೂರು ತಿಂಗಳ ಹಿಂದೆಯೇ ಬೇರೆ ಗ್ರಾಮದ ಊರಿನ ವ್ಯಕ್ತಿಗೆ ಮೇವಾಲಾಲ್ ಮಾರಿದ್ದರಂತೆ. ಆದರೂ ಕೂಡ ತನ್ನ ಒಡೆಯನ ಸಾ’ವಿನ ಸುದ್ದಿ ಕೇಳಿದಂತೆ ಬೇರೆ ಮನೆಯಲ್ಲಿದ್ದರೂ ತನ್ನ ಯಜಮಾನನ ಅಂ’ತ್ಯಕ್ರಿಯೆಗೆ ಬಂದು ಆತನ ಅಂ-ತ್ಯಕ್ರಿಯೆಯಲ್ಲಿ ಭಾಗಿಯಾಗಿ ಕಣ್ಣೀರು ಸುರಿಸಿದೆ. ಹೌದು ಅಲ್ಲಿಯ ಕೆಲವು ಫೋಟೋಗಳು ನಿಜ ಕಣ್ಣೀರು ತರಿಸುವಂತಿವೆ. ಇಲ್ಲಿವೆ ನೋಡಿ. ಅದೆಂಥಾ ಪ್ರೀತಿ ಮನುಷ್ಯ ಮತ್ತು ಪ್ರಾಣಿಗಳ ನಡುವೆ ಇದೆ ಎಂದು ನಿಮಗೂ ಗೊತ್ತಾಗುತ್ತದೆ. ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..