Advertisements

ಮೆಣಸಿನಕಾಯಿ ಬೆಳೆದ ರೈತರಿಗೆ ಗುಡ್ ನ್ಯೂಸ್.. ಒಳ್ಳೆ ಆದಾಯ ಮಾಡುವ ಸುಲಭ ಉಪಾಯ ಒಂದಿದೆ ನೋಡಿ!

Kannada Mahiti

ಪ್ರಿಯ ಓದುಗರೆ ಇಂದು ತರಕಾರಿಗಳ ಬೆಲೆ ಬಂಗಾರದಂತೆ ಹೆಚ್ಚುತ್ತಲೇ ಇದೆ. ಕೆಜಿಗೆ 300 ರಿಂದ 400 ರೂಪಾಯಿ ಆಗಿದೆ. ಯಾವುದೇ ಸೊಪ್ಪು ತರಕಾರಿ ಕೊಳ್ಳದೆ ಬೇರೊಂದು ಸೊಪ್ಪು ಬಳಸಿದರೆ ಅಡುಗೆ ನಡೆಯುತ್ತೆ. ಆದರೆ ಪಲ್ಯಗಳಿಗೆ ಹಾಗೂ ಸಾಂಬಾರ್, ಚಟ್ನಿಗಳಿಗೆ ಹಸಿಮೆಣಸಿನಕಾಯಿ ಬೇಕೇಬೇಕು. ವನ ಕಾರದಪುಡಿ ಹಾಕಿ ಮಾಡಿದರೆ ಅದು ಅಷ್ಟೊಂದು ರುಚಿಕರವಾಗುವುದಿಲ್ಲ. ಆದ್ದರಿಂದ ರುಚಿಕರವಾದ ಹಾಗೂ ಸ್ವಾದಿಷ್ಟಕರವಾದ ಅಡುಗೆಗೆ ನಾಲ್ಕಾದರೂ ಹಸಿಮೆಣಸಿನಕಾಯಿ ಬೇಕೇ ಬೇಕು..

[widget id=”custom_html-3″]

ಇದೇ ಕಾರಣದಿಂದಾಗಿ ಇಂದು ತರಕಾರಿಗಳಲ್ಲಿ ಹಸಿಮೆಣಸಿನಕಾಯಿ ಗೆ ಭಾರಿ ಬೇಡಿಕೆ ಬಂದಿರುವುದು. ಇನ್ನು ಉತ್ತರ ಕರ್ನಾಟಕದ ಕಡೆ ನೋಡಿದರೆ “ಸರ್ವ ರೋಗಕ್ಕೂ ಸಾರಾಯಿ ಮದ್ದು ಎನ್ನುವಂತೆ ಪ್ರತಿ ಆಹಾರಕ್ಕೂ, ಪ್ರತಿ ಊಟಕ್ಕೂ, ಪ್ರತಿ ಕಾದ್ಯಕ್ಕೂ ಸಹ ಹಸಿಮೆಣಸಿನಕಾಯಿಯನ್ನು ಬಳಸುವುದು ರೂಢಿ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಹೀಗೆ ಹಸಿಮೆಣಸಿನಕಾಯಿಯನ್ನು ಮನೆಯ ತಾರಸಿ ಮೇಲೆ ಅಥವಾ ಗದ್ದೆಗಳಲ್ಲಿ ಮೆಣಸಿನ ಕಾಯಿ ಬೆಳೆ ಬೆಳೆಯುತ್ತಿದ್ದರೇ ಹೆಚ್ಚಿನ ಇಳುವರಿಯನ್ನು ಪಡೆಯಬಹುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇವೆ. ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಬೆಳೆಗೆ ಗಾಢ ಬಣ್ಣ ಮತ್ತು ಖಾರ ಹೆಚ್ಚಾದರೆ ಉತ್ತಮ ಬೆಲೆ ಸಿಗುತ್ತದೆ. ಈ ಮೆಣಸಿನಕಾಯಿ ಬೆಳೆಯನ್ನು ಹೇಗೆ ಬಳೆದರೆ ಹೆಚ್ಚು ಫಲ ಸಿಗುತ್ತದೆ? ಯಾವ ಗೊಬ್ಬರ ಉತ್ತಮ ಅಂತ ಹೇಳತೀವಿ ನೋಡಿ. ಮೆಣಸಿನ ಬೆಳೆಯಲ್ಲಿ ಚೆನ್ನಾಗಿ ಇಳುವರಿ ಪಡೆಯಲು ಜೀವಾಮೃತ ಹಾಕಬೇಕು. ಹಾಗೆಯೇ ಆಕಳ ಮೂತ್ರವನ್ನು ಹಾಕಬೇಕು. ತಿಂಗಳಲ್ಲಿ ಮೂರರಿಂದ ನಾಲ್ಕು ಸಹ ಮೆಣಸಿನ ಸಸಿಗೆ ಗೋ ಮೂತ್ರವನ್ನು ಹಾಕಬೇಕು. ಮೆಣಸಿನ ಬೆಳೆ ಬೆಳೆಯುವ ಪೂರ್ವದಲ್ಲಿ ಬದುವಿನಲ್ಲಿ ಮೆಕ್ಕೆ ಜೋಳ ಬೆಳೆಯಬೇಕು.

[widget id=”custom_html-3″]

ಏಕೆಂದರೆ ಹೊರಕಡೆಯಿಂದ ಮೆಣಸಿನ ಗಿಡಕ್ಕೆ ಬರುವ ಕೀಟಗಳನ್ನು ಮೆಕ್ಕೆಜೋಳ ತಡೆಹಿಡಿಯುತ್ತದೆ. ಮೆಣಸಿನಕಾಯಿ ಗಿಡಕ್ಕೆ ಬರಲು ಬಿಡುವುದಿಲ್ಲ. ಬದುವಿನಲ್ಲಿ ಮೆಕ್ಕೆ ಜೋಳ ಬೇಳೆಯುದರಿಂದ ಮೆಣಸಿನ ಗಿಡಕ್ಕೆ ರಕ್ಷಣೆ ಸಿಗುತ್ತದೆ.ರೋಗ ಕಡಿಮೆ ಮಾಡಲು ಬದುವಿನಲ್ಲಿ ಮೆಕ್ಕೆ ಜೋಳ ಬೆಳೆಯುವುದು ಉತ್ತಮ. ಬೀಜ ಹಾಕುವಾಗ ಎರಡು ಮೂರು ಬೀಜವನ್ನು ಹಾಕಿ ಬಿತ್ತುವುದರಿಂದ ಮೆಣಸಿನ ಗಿಡ ಸದೃಢವಾಗಿ ಇರುತ್ತದೆ. ಸಸಿಗಳನ್ನು ಕಿತ್ತು ಬೇರೆ ಕಡೆಯಲ್ಲಿ ನೆಟ್ಟರೆ ಗಿಡಗಳು ಸದೃಢವಾಗಿ ಇರುವುದಿಲ್ಲ. ಹಾಗೆಯೇ ಸಸಿಗಳ ಬೆಳವಣಿಗೆ ಕುಂಠಿತವಾಗುತ್ತದೆ. ಸಸಿಗಳನ್ನು ಕಿತ್ತು ನೆಟ್ಟರೆ ಇಳುವರಿ ಕಡಿಮೆ ಆಗುತ್ತದೆ. ಜೀವಾಮೃತ ವನ್ನು ಜಾಸ್ತಿ ಹಾಕಬೇಕು.ಹಸುವಿದ್ದರೆ ರೈತರಿಗೆ ವರದಾನವಿದ್ದಂತೆ.

[widget id=”custom_html-3″]

ಹಾಗೆ ಈ ಮೆಕ್ಕೆಜೋಳದ ಜೊತೆಗೆ ಮಿಶ್ರ ಬೆಳೆಯಾಗಿ ಪ್ರತಿ ಹತ್ತು ಸಾಲಿಗೆ ಚೆಂಡು ಹೂವನ್ನು ನೆಡಬೇಕು. ಚೆಂಡು ಹೂವಿನ ಗಿಡದಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ.ಹಾಗಾಗಿ ಚೆಂಡು ಹೂವಿನ ಗಿಡವನ್ನು ನೆಡಬೇಕು. ಕೀಟಗಳಿಂದ ಮೆಣಸಿನ ಗಿಡಕ್ಕೆ ರಕ್ಷಣೆ ನೀಡುತ್ತದೆ.ಕೀಟಗಳು ಚೆಂಡು ಹೂವಿನ ಗಿಡಗಳಿಗೆ ಬರುತ್ತದೆ.ಆದರೆ ಮೆಣಸಿನ ಗಿಡಕ್ಕೆ ಬರುವುದಿಲ್ಲ.ಮೆಕ್ಕೆ ಜೋಳದ ಪಕ್ಕದಲ್ಲಿ ಹೂವಿನ ಗಿಡವನ್ನು ಬೆಳೆಯಬಹುದಾಗಿದೆ. ಇದನ್ನು ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ಇದು ಕೂಡಾ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದೆ. ನಾವು ನೀಡಿದ ಚಿಕ್ಕ ಚಿಕ್ಕ ಮಾಹಿತಿಯನ್ನು ಅನುಸರಿಸಿ ಯಾವುದೇ ಬಂಡವಾಳವಿಲ್ಲದೆ ಉತ್ತಮ ಮೆಣಸಿನಕಾಯಿ ಬೆಳೆಯ ಲಾಭವನ್ನು ನಿಮ್ಮದಾಗಿಸಿಕೊಳ್ಳಿ. ಬೇರೆಯವರಿಗೂ ತಿಳಿಸಿ.