Advertisements

ಮೈಸೂರು ದಸರಾಗೆ ಬರೋರು ಈ ರೂಲ್ಸ್ ಫಾಲೋ ಮಾಡ್ಲೇಬೇಕು! ಇಲ್ಲ ಅಂದ್ರೆ ನೋ ಎಂಟ್ರಿ..

Kannada Mahiti

ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಇನ್ನೊಂದು ದಿನ ಅಷ್ಟೇ ಬಾಕಿ. ಈಗಾಗಲೇ ರಾಜ್ಯದಲ್ಲೆಡೆ ಹಬ್ಬದ ಸಂಭ್ರಮ ಮನೆಮಾಡಿದೆ. ಹಬ್ಬದ ಆಚರಣೆಗೆ ಜನರು ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ದಸರಾ ಹಬ್ಬ ಆಚರಣೆಗೆ ರಾಜ್ಯ ಸರ್ಕಾರ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ ನಾಡಹಬ್ಬ ದಸರಾವನ್ನ ಅತ್ಯಂತ ಸರಳವಾಗಿ ಆಚರಿಸಬೇಕು. ಮೈಸೂರು ಹೊರತು ಇತರೆ ಜಿಲ್ಲೆಗಳಲ್ಲಿ ದಸರಾ ಉತ್ಸವ ಆಚರಣೆ ವೇಳೆ ಆಯಾ ಜಿಲ್ಲಾಡಳಿತಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನ ವಹಿಸಬೇಕು. ಆಚರಣೆಯಲ್ಲಿ 400ಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ. ಸಾಮಾಜಿಕ ಅಂತರವನ್ನ ಕಡ್ಡಾಯವಾಗಿ ಪಾಲಿಸಲೇಬೇಕು. ಅಂತರವಿಲ್ಲದೆ ನಡೆಸಲಾಗುವ ಕಾರ್ಯಕ್ರಮಗಳಿಗೆ ನಿಷೇಧ ಹೇರುವಂತೆ ಸೂಚಿಸಲಾಗಿದ್ದು, ಕಾನೂನು, ಸುವ್ಯವಸ್ಥೆಗೆ ಭಂ’ಗ ಬಾರದಂತೆ ನೋಡಿಕೊಳ್ಳಲು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ..

Advertisements

ಮೈಸೂರು ದಸರಾಕ್ಕೆ, ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಬಳಕೆ ಮತ್ತು ಸ್ಯಾನಿಟೈಸರ್ ಬಳಕೆಯನ್ನ ಕಡ್ಡಾಯಗೊಳಸಿಲಾಗಿದೆ. ದಸರಾವನ್ನ ವರ್ಚ್ಯುವಲ್​ನಲ್ಲಿ ವೀಕ್ಷಿಸುವುದಕ್ಕೆ ಅವಕಾಶ ನೀಡಲಾಗಿದ್ದು, ಉತ್ಸವ ಆಚರಣೆಗೆ ಹೆಚ್ಚಿನ ಸಂಖ್ಯೆಯ ಜನರ ಪ್ರವೇಶವನ್ನು ನಿಷೇಧಿಸಲಾಗಿದೆ. ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 100 ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ. 8 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರತಿನಿತ್ಯ, 500 ಜನರಿಗೆ ಮಾತ್ರ ಪ್ರವೇಶಕ್ಕೆ ಅನುಮತಿಸಲಾಗಿದ್ದು, ಜಂಬೂ ಸವಾರಿ, ಪಂಜಿನ ಕವಾಯತಿಗೂ 500 ಜನರ ಪ್ರವೇಶಕ್ಕಷ್ಟೇ ಅನುಮತಿ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವ ಪ್ರತಿಯೊಬ್ಬರಿಗೂ ಅಕ್ಟೋಬರ್ 4ರ ನಂತರದ ಆರ್​ಟಿಪಿಸಿಆರ್ ವರದಿ ಕಡ್ಡಾಯಗೊಳಿಸಲಾಗಿದೆ..

ಇನ್ನು ಮೈಸೂರು ಉಸ್ತುವಾರಿ ಸಚಿವ ಎಸ್​.ಟಿ ಸೋಮಶೇಖರ್ ನೇತೃತ್ವದ ನಿಯೋಗ ಅರಮನೆಗೆ ಭೇಟಿ ನೀಡಿತ್ತು. ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್‌ಗೆ ದಸರಾದಲ್ಲಿ ಪಾಲ್ಗೊಳ್ಳುವಂತೆ ಫಲ ತಾಂಬೂಲ‌ ನೀಡಿ ಸ್ವಾಗತ ಕೋರಿದ್ದು, ದಸರಾದಲ್ಲಿ ಭಾಗಿಯಾಗಲು ಹೆಚ್ಚು ಜನರಿಗೆ ಅವಕಾಶಕ್ಕಾಗಿ ಸಿಎಂಗೆ ಮನವಿ ಮಾಡಿದ್ದಾಗಿ ಸಚಿವರು ಹೇಳಿದ್ದಾರೆ.
ರಾಜ್ಯದಲ್ಲಿ ದಸರಾ ಹಬ್ಬದ ಸಡಗರಕ್ಕೆ ದಿನಗಣನೆ ಆರಂಭವಾಗಿದೆ. ಕೊರೊನಾ 3ನೇ ಅಲೆ ಆತಂಕದ ಮಧ್ಯೆಯೂ ನಾಡಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಅಕ್ಟೋಬರ್ 7ರಂದು ನಾಡಹಬ್ಬ ಅಧಿಕೃತವಾಗಿ ಉದ್ಘಾಟನೆಯಾಗಲಿದ್ದು, ರಾಜ್ಯದ ಮನೆ ಮನೆಗಳಲ್ಲಿ ದಸರಾ ಸಂಭ್ರಮ ಕಳೆಗಟ್ಟಲಿದೆ.