ನಮಸ್ತೇ ಸ್ನೇಹಿತರೇ, ಪುರುಷರು ಮನೆಗಳಲ್ಲೋ ಕಚೇರಿಗಳಲ್ಲೋ ಬಂದು ಸಿಕ್ಕಿಹಾಕಿಕೊಳ್ಳುವ ಸರ್ಪಗಳನ್ನ ಹಿಡಿದು ಕಾಡಿಗೆ ಬಿಡುವುದನ್ನ ನಾವು ನೋಡಿರುತ್ತೇವೆ. ಆದರೆ ಸೀರೆಯುಟ್ಟ ನಾರಿ ಹಾವು ಹಿಡಿದಿರುವುದನ್ನ ನೀವು ನೋಡಿದ್ದೀರಾ..ಹೌದು, ಸೀರೆಯುಟ್ಟ ಕನ್ನಡತಿ ಮಹಿಳೆ ಮನೆಯೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದ ಹಾವನ್ನ ಹಿಡಿದಿರುವ ವಿಡಿಯೋ ಅಂತೂ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದ್ದು ಆ ನಾರಿಯ ಧೈರ್ಯ ಕಂಡು ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ.

ಹೌದು, ನಮ್ಮ ಕನ್ನಡದ ಮೂಲದವರೇ ಆಗಿರುವ ನಿರ್ಜರಾ ಚಿಟ್ಟಿ ಎಂಬ ಮಹಿಳೆ ಮದುವೆಯೊಂದಕ್ಕೆ ಹೋಗುವ ತಯಾರಿಯಲ್ಲಿದ್ದರು. ಇನ್ನು ಇದೆ ಸಮಯದಲ್ಲಿ ಮನೆಯೊಂದರಲ್ಲಿ ಹಾವು ಬಂದಿರುವ ಬಗ್ಗೆ ಜನರು ಮಾಹಿತಿ ನೀಡಿದ್ದು ಆಗ ಸೀರೆ ಉಟ್ಟಿದ್ದ ನಿರ್ಜರಾ ಹಾಗೆಯೇ ಹಾವು ಹಿಡಿಯಲು ಹೋಗಿದ್ದಾರೆ. ಅದರಲ್ಲೂ ಯಾವುದೇ ಉಪಕರಣಗಳನ್ನ ತೆಗೆದುಕೊಳ್ಳದೆ ಮನೆಯೊಂದರಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಸರ್ಪವನ್ನ ಹಿಡಿಯಲು ಹೋಗಿದ್ದ ನಿರ್ಜರಾ ಅವರ ಧೈರ್ಯವನ್ನ ಮೆಚ್ಚಲೇಬೇಕಾದ್ದೆ.

ಇನ್ನು ವಿಡಿಯೋದಲ್ಲಿರುವಂತೆ ಮನೆಯಲ್ಲಿ ಸೇರಿಕೊಂಡು ಬುಸುಗುಡುತ್ತಿದ್ದ ನಾಗರಹಾವನ್ನ ಹುಡುಕಿ ಹಿಡಿದು ರಕ್ಷಣೆ ಮಾಡಿದ್ದಾರೆ. ಇನ್ನು ಸೀರೆ ಉಟ್ಟಾಗ ಹಾವು ಹಿಡಿಯುವುದು ಕಷ್ಟ ಎಂದು ಹೇಳಲಾಗಿದ್ದು , ಆದರೆ ನಿರ್ಜರಾ ಅವರು ಬಹಳ ಸಲೀಸಾಗಿಯೇ ಹಾವನ್ನ ಹಿಡಿದು ಅದೇ ಸಮಯದಲ್ಲಿ ಮಾತನಾಡಿದ್ದಾರೆ ಕೂಡ. ಹಾವು ಹಿಡಿದ ಈ ವಿಡಿಯೋ ನೋಡಿ..
Virat Bhagini, a snake catcher, was dressed to attend a wedding when she was called to catch a snake in a home. She did it without any special equipment with perfect poise in a saree. pic.twitter.com/uSQEhtqIbA
— Dr. Ajayita (@DoctorAjayita) September 12, 2020
ಇನ್ನು ನಿರ್ಜರಾ ಅವರು ಹೇಳಿರುವ ಹಾಗೆ ಸೀರೆ ಉಟ್ಟು ಹಾವು ಹಿಡಿಯುವುದು ಕಷ್ಟ..ಆದರೆ ಬಟ್ಟೆ ಬದಲಿಸಿ ಅಲ್ಲಿಗೆ ಹೋಗುವಷ್ಟರಲ್ಲಿ ಹಾವೇನಾದರೂ ಅಪಾಯ ಮಾಡಿದ್ರೆ..ಎಂದು ಹಾಗೆಯೆ ಬಂದೆ ಎಂದು ಆ ಮಹಿಳೆ ಹೇಳಿದ್ದಾರೆ. ಆದರೆ ಯಾವುದೇ ಉಪಕರಣಗಳ ಸಹಾಯವಿಲ್ಲದೆ ಹಾವನ್ನ ಹಿಡಿದು ಆ ಮನೆಯವರ ಆತಂಕವನ್ನ ದೂರ ಮಾಡಿರುವ ನಿರ್ಜರಾ ಅವರ ಸಾಹಸಕ್ಕೆ ನೆಟ್ಟಿಗರು ಬಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.