Advertisements

ಯಾವ ಸಿನಿಮಾಗೂ ಕಡಿಮೆ ಇಲ್ಲ ಪೊಲೀಸ್ ಅಧಿಕಾರಿಯ ಈ ಬೈಕ್ ಚೇಸಿಂಗ್ ! ವಿಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ..

News

ಸ್ನೇಹಿತರೇ, ಪೊಲೀಸರು ಕಳ್ಳ ಕಾಕರನ್ನ ಹೇಗೆ ಚೇಸ್ ಮಾಡಿ ಹಿಡಿಯುತ್ತಾರೆ ಎಂಬುದನ್ನ ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ ರಿಯಲ್ ಲೈಫ್ ನಲ್ಲಿ ಪೊಲೀಸರು ಕಳ್ಳರನ್ನ ಚೇಸ್ ಮಾಡಿ ಹಿಡಿಯುವುದನ್ನ ನೋಡಿರುವುದು ತೀರಾ ಕಡಿಮೆ. ಆದರೆ ಈಗ IPS ಪೊಲೀಸ್ ಅಧಿಕಾರಿಯೊಬ್ಬರು ಹಿಡಿದುಕೊಂಡಿರುವ ಶೇರ್ ಮಾಡಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯೊಬ್ಬರು ಕಳ್ಳರನ್ನ ಚೇಸ್ ಮಾಡಿ ಹಿಡಿದ ಆ ಅಧಿಕಾರಿಯ ಸಾಹಸ ನೋಡಿ ಫಿದಾ ಆಗಿದ್ದಾರೆ.

ಹೌದು, ಪೊಲೀಸ್ ಅಧಿಕಾರಿಯೊಬ್ಬರು ಸಿನಿಮಾಶೈಲಿಯಲ್ಲಿ ಕಳ್ಳರನ್ನ ಬೈಕ್ ಮೂಲಕ ಚೇಸ್ ಮಾಡಿ ಹಿಡಿದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಚೆನ್ನೈನಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡುತ್ತಿರುವ ಅಂತ್ಲಿನ್ ರಮೇಶ್ ಮೊಬೈಲ್ ಕಳ್ಳತನ ಮಾಡುವವರನ್ನ ಚೆಸ್ ಮಾಡಿ ಹಿಡಿದಿದ್ದು ಇದರ ವಿಡಿಯೋವೊಂದರ ತುಣುಕು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಬೈಕ್ ಮೇಲೆ ಹೋಗುತ್ತಿದ್ದ ಇಬ್ಬರು ಮೊಬೈಲ್ ಕಳ್ಳರನ್ನ ತನ್ನ ಬೈಕ್ ಮೂಲಕ ಚೇಸ್ ಮಾಡಿ ಸಬ್ ಇನ್ಸ್ಪೆಕ್ಟರ್ ಅಂತ್ಲಿನ್ ರಮೇಶ್ ಅವರು ಆ ಕಳ್ಳರನ್ನ ಹಿಡಿದಿದ್ದಾರೆ. ಆದರೆ ವೀಡಿಯೋದಲ್ಲಿರುವಂತೆ ಒಬ್ಬ ಕಳ್ಳ ಬೈಕ್ ನಿಂದ ಇಳಿದು ತಪ್ಪಿಸಿಕೊಂಡು ಓಡಿಹೋಗುವುತ್ತಿರುವುದನ್ನ ನೋಡಬಹುದಾಗಿದೆ. ಇನ್ನು ಬೈಕ್ ಚಲಾಯಿಸುತ್ತಿದ್ದ ಕಳ್ಳ ಎಸ್ಕೇಪ್ ಆಗಲು ಪ್ರಯತ್ನ ಮಾಡಿದ್ರೂ ಕೂಡ ಅವನ ಶರ್ಟ್ ಹಿಡಿದ ಪೊಲೀಸ್ ಅಧಿಕಾರಿ ಸ್ವಲ್ಪ ದೂರ ಬೈಕ್ ಚಲಿಸಿದರೂ ಕೂಡ ಅವನ ಶರ್ಟ್ ನ್ನ ಬಿಡದೆ ಆ ಕಳ್ಳನನ್ನ ತಡೆದು ನಿಲ್ಲಿಸಿದ್ದಾರೆ.

Advertisements

ಇನ್ನು ಈ ಬೈಕ್ ಚೇಸಿಂಗ್ ವಿಡಿಯೋ ಅಲ್ಲಿಯೇ ಹತ್ತಿರದಲ್ಲಿದ್ದ ಮನೆಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನು ಆ ಅಧಿಕಾರಿಯ ಸಾಹಸಕ್ಕೆ ಮೆಚ್ಚಿರುವ ಐಪಿಎಸ್ ಅಧಿಕಾರಿ ಮಹೇಶ್ ಅಗರವಾಲ್ ಎಸ್‍ಐ ಅಂತ್ಲಿನ್ ರಮೇಶ್ ಅವರನ್ನ ತಮ್ಮ ಕಚೇರಿಗೆ ಕರೆಯಿಸಿಕೊಂಡು ಅವರಿಗೆ ಒಂದು ಕಿರು ಕಾಣಿಕೆಯನ್ನ ಕೊಟ್ಟು ಸನ್ಮಾನ ಮಾಡಿದಲ್ಲದೆ ಅವರ ಜೊತೆ ಟೀ ಪಾರ್ಟಿ ಮಾಡುವ ಮೂಲಕ ಅಧಿಕಾರಿಯ ಸಾಹಸಕ್ಕೆ ಅಭಿನಂದನೆಗಳನ್ನ ತಿಳಿಸಿದ್ದಾರೆ.