Advertisements

ರಾಜಕಾರಣಿಗಳಿಗೂ ಕ್ಯಾರೇ ಅನ್ನದ ಮಹಿಳಾ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರ ವೈಯುಕ್ತಿಕ ಜೀವನ ಹೇಗಿದೆ ನೋಡಿ !

Inspire

ನಮಸ್ತೇ ಸ್ನೇಹಿತರೇ, ಕರ್ನಾಟಕದಲ್ಲಿ ಮನೆಮಾತಾಗಿರುವ ಖಡಕ್ ಜಿಲಾಧಿಕಾರಿಗಳಲ್ಲಿ ನಿಷ್ಠಾವಂತ ಮಹಿಳಾ ಡಿಸಿ ಆಗಿರುವ ರೋಹಿಣಿ ಸಿಂಧೂರಿ ಕೂಡ ಒಬ್ಬರು. ಇವರು ಮೇ ೩೦ ೧೯೮೪ರಂದು ಈಗಿನ ತೆಲಂಗಾಣ ರಾಜ್ಯದಲ್ಲಿ ಹುಟ್ಟಿದವರು. ಕೆಮಿಕಲ್ ಎಂಜಿನಿಯರಿಂಗ್ ನಲ್ಲಿ ಬಿಟೆಕ್ ಮಾಡಿರುವ ರೋಹಿಣಿಯವರು 2009ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿ ಆಯ್ಕೆಗೊಂಡವರು. ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಸುಧೀರ್ ರೆಡ್ಡಿ ಎಂಬುವವರನ್ನ ಮದುವೆಯಾಗಿರುವ ಇವರಿಗೆ ಒಬ್ಬ ಮಗ ಹಾಗೂ ಮಗಳಿದ್ದಾಳೆ. ಮಾತೃಭಾಷೆ ತೆಲುಗು ಆದರೂ ಸಹ ರೋಹಿಣಿಯವರು ಕನ್ನಡವನ್ನ ಬಹಳ ಸೊಗಸಾಗಿ ಮಾತನಾಡುತ್ತಾರೆ.

Advertisements

ಇನ್ನು ರೋಹಿಣಿಯವರಿಗೆ ಒಬ್ಬ ಸಹೋದರಿ ಕೂಡ ಇದ್ದಾರೆ. ಆಕೆಯ ಹೆಸರು ಪ್ರಿಯಾಂಕ ರೆಡ್ಡಿ ಎಂದು. ಬೆಂಗಳೂರಿನಲ್ಲಿ ವೈದ್ಯಯಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ೨೦೦೯ ರಲ್ಲಿ ಐಎಎಸ್ ಅಧಿಕಾರಿಯಾಗಿ ಸೆಲೆಕ್ಟ್ ರೋಹಿಣಿಯವರು ಯುಪಿಎಸ್ಸಿ ಯಲಿ ೪೩ನೇ ರ್ಯಾಂಕ್ ಪಡೆದುಕೊಂಡಿದ್ದರು. ಇನ್ನು ಇವರು ಮೊದಲ ಬಾರಿಗೆ ಅಸಿಸ್ಟೆಂಟ್ ಕಮಿಷನರ್ ಆಗಿ ತುಮಕೂರಿಗೆ ಪೋಸ್ಟ್ ಆಗುತ್ತಾರೆ. ಅಲ್ಲಿ ೨೦೧೧ ರಿಂದ ೨೦೧೨ರವರೆಗೆ ಕಾರ್ಯನಿರ್ವಹಿಸುತ್ತಾರೆ. ಇನ್ನು ತುಮಕೂರಿನಲ್ಲಿ ಎಂಜಿ ರಸ್ತೆಯ ಅತಿಕ್ರಮವನ್ನ ತೆರವುಗೊಳಿಸುವ ಕಾರ್ಯ ಮಾಡುವ ಮೂಲಕ ಅಲ್ಲಿನ ಜನರಿಗೆ ಹತ್ತಿರವಾಗುತ್ತಾರೆ.

ಮೇ ೩೧ ೨೦೧೪ ರಲ್ಲಿ ಮಂಡ್ಯ ಜಿಲ್ಲೆಯ CEO ಆಗಿ ಅಧಿಕಾರ ಸ್ವೀಕರಿಸುತ್ತಾರೆ. ಇನ್ನು ಇದೆ ಸಮಯದಲ್ಲಿ ಅವರು ತಂದ ಯೋಜನೆಗಳು ತುಂಬಾ ಜನಪ್ರಿಯವಾಗುತ್ತವೆ. ರೋಹಿಣಿ ಸಿಂಧೂರಿಯವರ ಹೆಸರು ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡುತ್ತವೆ. ಅದರಲ್ಲಿ ಒಂದು ತುಂಬಾ ಜನಪ್ರಿಯವಾದ ಯೋಜನೆ ಎಂದರೆ ಮಂಡ್ಯ ಜಿಲ್ಲೆಯ ಪ್ರತಿಯೊಂದು ಹಳ್ಳಿಗಳಲ್ಲೂ ಬಯಲು ಮುಕ್ತ ಶೌಚಾಲಯಕ್ಕೆ ತೆಗೆದುಕೊಂಡ ಕ್ರಮಗಳು. ಬಳಿಕ ಜುಲೈ ೨೦೧೭ಕ್ಕೆ ಹಾಸನದ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ರೋಹಿಣಿ ಸಿಂಧೂರಿಯವರು ಅಲ್ಲಿ ನಡೆಯುತ್ತಿದ್ದ ಮರಳು ಮಾಫಿಯಾ ವಿರುದ್ಧ ಸಮರ ಸಾರಿ ಅದರಲ್ಲೂ ಕೂಡ ಯಶಸ್ವಿಯಾಗುತ್ತಾರೆ.

ಮಂಡ್ಯ ಹಾಗೂ ಹಾಸನ ಜಿಲೆಗಳಲ್ಲಿ ಜಿಲ್ಲಾಧಿಕಾರಿಯೆಂದರೆ ಹೀಗೆಯೇ ಇರಬೇಕು ಎಂಬಷ್ಟರ ಮಟ್ಟಿಗೆ ಕೆಲಸ ಮಾಡಿದವರು ರೋಹಿಣಿ ಸಿಂಧೂರಿ. ಇನ್ನು ಕೆಲ ದಿನಗಳ ಹಿಂದಷ್ಟೇ ಅಂದರೆ ಸೆಪ್ಟೆಂಬರ್ ೨೯ ರಂದು ರೋಹಿಣಿ ಸಿಂಧೂರಿಯವರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ. ಇನ್ನು ರೋಹಿಣಿಯವರು ಮೈಸೂರಿನ ಡಿಸಿಯಾಗಿ ಕೆಲಸ ಶುರು ಮಾಡುವ ಮುಂಚೆ ಮೊದಲು ನಾಡದೇವತೆ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದ ಬಳಿಕ ಜಿಲ್ಲಾಧಿಕಾರಿಯ ಕಚೇರಿಗೆ ತೆರಳಿದ್ದಾರೆ. ಒಟ್ಟಿನಲ್ಲಿ ಮಹಿಳಾ ಜಿಲ್ಲಾಧಿಕಾರಿಯಾಗಿ ಯಾವ ರಾಜಕಾರಣಿಗೂ ಕೇರ್ ಮಾಡದೆ ಹಲವಾರು ಯೋಜನೆಗಳ ಮೂಲಕ ಜನರಿಗೆ ಹತ್ತಿರವಾಗಿರುವ ರೋಹಿಣಿ ಸಿಂಧೂರಿಯವರಿಗೆ ಆ ಚಾಮುಂಡೇಶ್ವರಿಯ ಆಶೀರ್ವಾದ ಸದಾ ಇರಲಿ. ಮತ್ತಷ್ಟು ಉತ್ತಮ ಯೋಜನೆಗಳಿಂದ ಬಡವರಿಗೆ ಅನುಕೂಲವಾಗುವಂತಹ ಕೆಲಸಗಳನ್ನ ಮಾಡುವಂತಾಗಲಿ..