ನಮಸ್ತೇ ಸ್ನೇಹಿತರೇ, ಇತ್ತೀಚೆಗಷ್ಟೇ ಕೊರೋನಾ ಸೋಂಕಿನ ಬಗ್ಗೆ ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಈಗ ರಾಜ್ಯದಲ್ಲಿ ಹಾಗೂ ದೇಶದಲ್ಲಾಗುವ ರಾಜಕೀಯದಲ್ಲಿ ಬದಲಾವಣೆ ಆಗಲಿದೆ ಎಂದು ಭವಿಷ್ಯ ವಾಣಿ ನುಡಿದಿದ್ದಾರೆ. ಇನ್ನು ಈ ಬದಲಾವಣೆಗೆ ಜನವರಿ ಮಾಸದವರೆಗೆ ಸಮಯವಿದೆ ಎಂದು ಹೇಳಿರುವ ಕೊಡಿ ಮಠದ ಶ್ರೀಗಳು ಅಮೆರಿಕದಲ್ಲಿಯೂ ಈಗಾಗಲೇ ರಾಜಕೀಯ ಬದಲಾವಣೆ ಆಗಿದ್ದು ಅದೇ ರೀತಿ ನಮ್ಮಲ್ಲಿ ಕೂಡ ಆಗಲಿದೆ ಎಂದು ಭವಿಷ್ಯ ನುಡಿದಿದ್ದು ರಾಜ್ಯ ರಾಜಕಾರಣದಲ್ಲಿಯೂ ಸಹ ಬದಲಾವಣೆಯ ಗಾಳಿ ಬಿಸಲಿದೆ ಎಂದು ಪರೋಕ್ಷವಾಗಿ ಸೂಚನೆ ಕೊಟ್ಟಿದ್ದಾರೆ.
ದಾವಣೆಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಕೊಡಿ ಮಠದ ಶ್ರೀಗಳು ನಾನು ಮೊದಲೇ ಭವಿಷ್ಯ ನುಡಿದಂತೆ ಜಗತ್ತಿನಲ್ಲಿ ರಾಜಕೀಯ ಬದಲಾವಣೆ ಆಗುತ್ತಿದೆ. ನಾನು ಇದಕ್ಕೂ ಮೊದಲು ಅಮೇರಿಕಾದ ಅಧ್ಯಕ್ಷರಾಗಿದ್ದ ಟ್ರಂಪ್ ಚುನಾವಣೆಯಲ್ಲಿ ಸೋಲುತ್ತಾರೆ ಎಂಬುದರ ಭವಿಷ್ಯ ನುಡಿದಿದ್ದೆ ಈಗ ಅದು ನಿಜವಾಗಿದೆ. ಇನ್ನು ಕೆಲ ದಿನಗಳ ಹಿಂದಷ್ಟೇ ಸಂಭವಿಸಿದ ಗ್ರಹಣದ ಲೆಕ್ಕಾಚಾರಗಳ ಪ್ರಕಾರ ಜನವರಿ ಅಂತ್ಯದವರಿಗೆ ಕಾಡು ನೋಡಬೇಕಾಗಿದೆ.

ಇನ್ನು ಮುಖ್ಯಮಂತ್ರಿ ಯಡಿಯೂರಪ್ಪನವರ ಕುರಿತಂತೆ ಕೇಳಿದ ಪ್ರಶ್ನೆಗೆ ಕೇವಲ ಒಬ್ಬ ವ್ಯಕ್ತಿಯ ಬಗ್ಗೆ ಏನನ್ನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನು ಕೆಲ ದಿನಗಳಿಂದಷ್ಟೇ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಬಗೆಗಿನ ಚರ್ಚೆ ನಡೆದಿತ್ತು. ಇದರ ನಡುವೆಯೇ ಹಾಸನದ ಕೊಡಿ ಮಠದ ಶ್ರೀಗಳು ನುಡಿದಿರುವ ಭವಿಷ್ಯ ಮತ್ತಷ್ಟು ಕುತೂಹಲ ಹೆಚ್ಚಲು ಕಾರಣವಾಗಿದೆ. ಇನ್ನು ಶ್ರೀಗಳು ಹೇಳಿರುವ ಈ ಭವಿಷ್ಯ ವಾಣಿ, ರಾಜ್ಯದ ರಾಜಕಾರಣದ ಬಗ್ಗೆ ಮತ್ತಷ್ಟು ಪ್ರಶ್ನೆಗಳನ್ನ ಹುಟ್ಟುಹಾಕುವಂತೆ ಮಾಡಿದೆ.