Advertisements

ಶೇಷಾವತಾರಿಯಾದ ಲಕ್ಷ್ಮಣ 14 ವರ್ಷ ನಿದ್ದೆ ಮಾಡಲಿಲ್ಲ ಏಕೆ ! ಇದರ ಹಿಂದಿರುವ ಅಸಲಿ ರಹಸ್ಯವೇನು ಗೊತ್ತಾ.?

Adyathma

ನಮಸ್ತೆ ಸ್ನೇಹಿತರೆ.. ಶ್ರೀ ರಾಮ ವಿಷ್ಣುವಿನ ಅವತಾರ ಹಾಗೆ ವಿಷ್ಣುವಿನ ಹಾಸಿಗೆ ಆದಿಶೇಷ ಕೂಡ ಲಕ್ಷ್ಮಣ ಅವತಾರ.. ಇನ್ನೂ ಲಕ್ಷ್ಮಣ ಜನಿಸದ ವೇಳೆ ಜೋರಾಗಿ ಅಳುತ್ತಿದ್ದರಂತೆ ಏನು ಮಾಡಿದರು ಲಕ್ಷ್ಮಣ ಅಳುವನ್ನು ನಿಲ್ಲಿಸುತ್ತಲೇ ಇರಲಿಲ್ಲ.. ನಂತರ ಶ್ರೀರಾಮನ ಪಕ್ಕದಲ್ಲಿ ಮಲಗಿಸದ ತಕ್ಷಣ..ಅಳುವನ್ನು ನಿಲ್ಲಿಸಿಬಿಡುತ್ತಾನೆ.. ಅಂದಿನಿಂದಲೂ ಕೂಡ ಲಕ್ಷ್ಮಣ ರಾಮನ ನೆರಳಿನಿಂತೆ ಬದುಕಿದ್ದವರು.. ಅದೇ ರೀತಿ ಶ್ರೀರಾಮ ವನವಾಸಕ್ಕೆ ತೆರಳುವ ಸಮಯದಲ್ಲಿ ನಾನು ಬರುತ್ತೇನೆ ಎಂದು ರಾಮನ ಜೊತೆಯಲ್ಲಿ ವನವಾಸಕ್ಕೆ ಹೊರಡಲು ಸಿದ್ದವಾಗುತ್ತಾರೆ..

Advertisements

ಈ ಸಮಯದಲ್ಲಿ ಲಕ್ಷ್ಮಣನ ಪತ್ನಿ ಉರ್ಮಿಳಾ ಕೂಡ ಜೊತೆಗೆ ಹೊರಡಲು ಸಿದ್ದವಾಗುತ್ತಾರೆ. ಆದರೆ ಲಕ್ಷ್ಮಣ ಉರ್ಮಿಳಾ ಅವರನ್ನು ತಡೆದು ನಾನು ಹೋಗುತ್ತಿರುವುದು ಶ್ರೀರಾಮ ಮತ್ತು ಸೀತಾ ಮಾತೆಯ ಸೇವೆ ಮಾಡಲು..ಈಗಾಗಿ ನೀನು ಬರುವುದು ಬೇಡ ಬಂದರೆ ನನ್ನ ಸೇವೆಗೆ ವಿಘ್ನವಾಗುತ್ತದೆ ಎಂದು ಹೇಳುತ್ತಾರೆ.. ಈಗಾಗಿ ಉರ್ಮಿಳಾ ತನ್ನ ಪತಿಯ ಮಾತಿಗೆ ಗಟ್ಟಿ ಮನಸ್ಸನಿಂದ ಒಪ್ಪಿಕೊಳ್ಳುತ್ತಾರೆ. ನಂತರ ಶ್ರೀರಾಮ ಸೀತಾ ಮಾತೆ ಲಕ್ಷ್ಮಣ ಮೂವರು ವನವಾಸಕ್ಕೆ ತೆರಳುತ್ತಾರೆ.. ಇನ್ನು ಕಾಡಿಗೆ ಹೋದ ಮೊದಲನೇ ದಿನ ಕಾಡಿನಲ್ಲಿ ಲಕ್ಷ್ಮಣ ತನ್ನ ಕೈಯಾರೆ ಗುಡಿಸಲನ್ನು ನಿರ್ಮಿಸುತ್ತಾನೆ..

ಗುಡಿಸಲಿನ ಹೊಳಗಡೆ ಶ್ರೀರಾಮ ಹಾಗೂ ಸೀತೆ ವಿಶ್ರಮಿಸುತ್ತಿದ್ದರೆ ಲಕ್ಷ್ಮಣ ಗುಡಿಸಿಲಿನ ಬಾಗಿಲಿನಲ್ಲಿ ಕಾವಲು ಕಾಯುತ್ತಿದ್ದರು.. ರಾತ್ರಿ ಸಮಯದಲ್ಲಿ ಕೂಡ ಶ್ರೀರಾಮ ಹಾಗೂ ಸೀತಾ ಮಾತೆಯನ್ನು ಕಾಯುತ್ತಿದ್ದ ಲಕ್ಷ್ಮಣನಿಗೆ ನಿದ್ರಾ ದೇವಿ ಪ್ರತ್ಯಕ್ಷವಾಗುತ್ತಾರೆ.. ನಿದ್ರಾ ದೇವಿಗೆ ನಮಸ್ಕರಿಸಿದ ಲಕ್ಷ್ಮಣ ಒಂದು ವರವನ್ನು ಕೇಳುತ್ತಾರೆ.. ಹೌದು 14 ವರ್ಷಗಳ ಕಾಲ ನನಗೆ ನಿದ್ರೆಯೇ ಬಾರದಂತೆ ಬೇಡಿಕೊಳ್ಳುತ್ತಾರೆ.. ಇದಕ್ಕೆ ನಿದ್ರಾದೇವಿ ನಾನು ನಿನಗೆ ನಿದ್ರೆಯಿಂದ ಮುಕ್ತಿ ಕೊಡುತ್ತೇನೆ ಆದರೆ ನಿನ್ನ ಪಾಲಿನ ನಿದ್ರೆಯನ್ನು ಬೇರೆಯವರು ಯಾರಾದರೂ ಪಡೆಯಲೇ ಬೇಕು ಎಂದು ಹೇಳುತ್ತಾರೆ..

ಆಗ ಲಕ್ಷ್ಮಣ ತನ್ನ ಪಾಲಿನ ನಿದ್ರೆಯನ್ನು ತನ್ನ ಪತ್ನಿ ಉರ್ಮಿಳಾರಿಗೆ ಕೊಡಿ ಎಂದು ಕೇಳಿಕೊಳ್ಳುತ್ತಾರೆ.. ಇದಾದ ನಂತರ ಉರ್ಮಿಳಾರಿಗೆ 14 ವರ್ಷಗಳ ಕಾಲ ನಿದ್ರೆ ಮಾಡುವಂತೆ ವರವನ್ನು ಕೊಟ್ಟು ಇತ್ತ ಲಕ್ಷ್ಮಣನಿಗೆ ನಿದ್ರೆಯೇ ಬಾರದಂತೆ ಮಾಡುತ್ತಾರೆ.. ಈಗಾಗಿ ಲಕ್ಷ್ಮಣ ನಿದ್ರೆಯೇ ಮಾಡದೆ ಶ್ರೀ ರಾಮ, ಸೀತೆಯ ಸೇವೆಯನ್ನು ಮಾಡುತ್ತಾರೆ.. ನಂತರ ಲಕ್ಷ್ಮಣ ನಿದ್ರೆ ಬಿಟ್ಟಿದ್ದರಿಂದ ರಾವಣನ ಪುತ್ರ ಮೇಘನಾದನನ್ನು ಸಂ’ಹಾರ ಮಾಡಲು ಸಹಕಾರಿಯಾಗುತ್ತದೆ.. ಯಾಕೆಂದರೆ 14 ವರ್ಷ ನಿದ್ರೆಯನ್ನು ಬಿಟ್ಟು ಕಟ್ಟು ನಿಟ್ಟಾಗಿ ಬ್ರಹ್ಮಚರ್ಯ ಪಾಲಿಸಿದ ಯೋಧನಾದವನು ಮಾತ್ರನೇ ಮೇಘನಾದನ ವ’ಧೆ ಮಾಡಬಹದು ಎಂಬ ವರ ಸಿಕ್ಕಿತ್ತು..

ಈ ರೀತಿ ಮಾಡಿದ್ದರಿಂದ ಮೇಘನಾದನನ್ನು ವ’ಧೆ ಮಾಡಲು ಲಕ್ಷ್ಮಣನಿಗೆ ಸುಲಭವಾಯಿತು.‌ ಇನ್ನು 14 ವರ್ಷ ವನವಾಸ  ಮುಗಿಸಿಕೊಂಡು ಬಂದು ರಾಮನ ಪಟ್ಟಾಭಿಷೇಕ ಮಾಡುವ ವೇಳೆಯೂ ಸಹ ಲಕ್ಷ್ಮಣ ಪತ್ನಿ ನಿದ್ರಾವಸ್ಥೆಯಲ್ಲಿ ಇದ್ದರು. ಯಕೆಂದರೆ ಉರ್ಮಿಳಾ ನಿದ್ರೆಯಿಂದ ಹೊರಬಂದಿರಲಿಲ್ಲ.. ಇದನ್ನು ನೋಡಿದ ಲಕ್ಷ್ಮಣ ತುಂಬಿದ ಸಭೆಯಲ್ಲಿ ಜೋರಾಗಿ ನಕ್ಕು ಬಿಟ್ಟಿದ್ದರಂತೆ.. ಸ್ನೇಹಿತರೆ ಇದು ಲಕ್ಷ್ಮಣ 14 ವರ್ಷಗಳ ವನವಾಸದ ಸಮಯದಲ್ಲಿ ನಿದ್ರೆ ಬಿಟ್ಟಿರುವ ಹಿಂದಿನ ರಹಸ್ಯವಾಗಿದೆ..