Advertisements

ಹಲ್ಲಿ ದೇಹದ ಯಾವ ಭಾಗಕ್ಕೆ ಬಿದ್ದರೆ ಏನು ಫಲ ಶುಭ ಅಶುಭ.?

Astrology

ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಸಂಬಂಧಕ್ಕೂ ಜ್ಯೋತಿಷ್ಯ ಶಾಸ್ತ್ರಕ್ಕೂ ಸಂಬಂಧ ಇದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಹಲ್ಲಿಗಳಿಗೆ ಸಂಬಂಧಪಟ್ಟಂತೆ ಶುಭ ಹಾಗೂ ಅಶುಭ ಘಟನೆಗಳ ಬಗ್ಗೆಯೂ ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಹೌದು, ಗೋಡೆಯ ಮೇಲೆ ಓಡಾಡುವ ಹಲ್ಲಿ ಮನುಷ್ಯನ ದೇಹದ ಯಾವ ಭಾಗದ ಮೇಲೆ ಬಿದ್ದರೆ ಶುಭ, ಅಶುಭ ಎಂಬುದನ್ನು ಕೂಡ ಹೇಳಲಾಗಿದೆ. ಹಾಗಾದ್ರೆ ಏನೆಲ್ಲಾ ಅಶುಭ ಘಟನೆಗಳು ನಡೆಯಲಿವೆ ನೋಡೋಣ ಬನ್ನಿ..

Advertisements

ಹಲ್ಲಿ ಎಡ ಕಿವಿಯ ಮೇಲೆ ಬಿದ್ದರೆ ಆಯಸ್ಸು ಹೆಚ್ಚಾಗುತ್ತದೆ ಹಾಗೂ ಮನುಷ್ಯನ ಬಲಕಿವಿಯ ಮೇಲೆ ಬಿದ್ದರೆ ಆಭರಣಗಳು ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇನ್ನು ಹಲ್ಲಿ ಮೂಗಿನ ಬಿದ್ದರೆ ಆ ವ್ಯಕ್ತಿಯ ಅದೃಷ್ಟವೇ ಬದಲಾಗುವುದರ ಜೊತೆಗೆ ಸಿಹಿ ಸುದ್ದಿ ಸಿಗಲಿದೆ ಎಂಬ ಸೂಚನೆಯಂತೆ. ಇನ್ನು ಹಲ್ಲಿ ಯಾವುದೇ ವ್ಯಕ್ತಿಯ ಎಡಕೆನ್ನೆಯ ಮೇಲೆ ಬಿದ್ದರೆ ಹಳೆಯ ಸ್ನೇಹಿತರು ಭೇಟಿಯಾಗುತ್ತಾರೆ ಎಂದು ಹೇಳಲಾಗಿದೆ.

ಇನ್ನು ಹಲ್ಲಿ ಕುತ್ತಿಗೆ ಮೇಲೆ ಬಿದ್ದರೆ ಆ ವ್ಯಕ್ತಿಯ ಖ್ಯಾತಿ ಹೆಚ್ಚಾಗುವುದರ ಜೊತೆಗೆ, ಮೀಸೆಯ ಮೇಲೆ ಬಿದ್ದರೆ ಗೌರವ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ. ಇನ್ನು ಗಡ್ಡದ ಮೇಲೆ ಬಿದ್ದರೆ ಭಯಾನಕ ಘಟನೆ ಎದುರಾಗಲಿದೆ ಎಂಬುದರ ಸೂಚನೆಯಂತೆ. ಇನ್ನು ಹಲ್ಲಿಯ ಜ್ಯೋತಿಷ್ಯ ಶಾಸ್ತ್ರದ ಶುಭ ಅಶುಭ ಫಲಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೊ ನೋಡಿ..