Advertisements

ಕೇವಲ 22ನೇ ವಯಸ್ಸಿಗೆ ಬರೋಬ್ಬರಿ 11 ಮದ್ವೆಯಾದ ಖತರ್ನಾಕ್ ಹುಡುಗ ! ಈ ಭೂಪನ ರಹಸ್ಯ ಗೊತ್ತಾಗಿದ್ದೇಗೆ ಗೊತ್ತಾ ?

Kannada Mahiti

ಸ್ನೇಹಿತರೇ, ಈಗಂತೂ ನಮ್ಮ ಗಂಡು ಮಕ್ಕಳಿಗೆ ಹೆಣ್ಣು ಸಿಗುವುದೇ ದುಸ್ತರವಾಗಿದೆ. ಸ್ವಂತ ಮನೆ, ಕೆಲಸ, ಅಸ್ತಿ ಪಾಸ್ತಿ ಇದ್ದರೂ ಸಹ ಹೆಣ್ಣು ಸಿಗುತ್ತಿಲ್ಲವೆಂದು ಗೋಳಾಡುವ ಗಂಡು ಮಕ್ಕಳೇ ಹೆಚ್ಚಾಗಿದ್ದಾರೆ. ಇನ್ನು ಹೆಣ್ಣು ಸಿಗದ ಕಾರಣ ಪರಲೋಕ ಯಾತ್ರೆ ಮಾಡಿದವರು ಸಹ ಇದ್ದಾರೆ. ಆದರೆ ಇಲ್ಲೊಬ್ಬ ಖತರ್ನಾಕ್ ಹುಡುಗ ಇದ್ದಾನೆ. ಇವನಿಗಿನ್ನು ಕೇವಲ ೨೨ರ ಹರೆಯ. ಆದ್ರೆ ಇಷ್ಟು ಚಿಕ್ಕ ವಯಸ್ಸಿಗೇನೇ ಇವನಾಗಿರುವ ಮದುವೆ ಸಂಖ್ಯೆಗಳನ್ನ ಕೇಳಿದ್ರೆ ನೀವು ಶಾಕ್ ಆಗೋದು ಖಂಡಿತಾ. ಈ ಹುಡುಗನ ಹೆಸರು ಗಣೇಶ್ ಎಂದು. ಪಕ್ಕದ ತಮಿಳುನಾಡಿನ ಚನ್ನೈನವನು. ಬರೋಬ್ಬರಿ ಹನ್ನೊಂದು ಮದ್ವೆಯಾಗಿರುವ ಈ ಹುಡುಗ ಇಲ್ಲಿವರೆಗೂ ಯಾರೊಬ್ಬರಿಗೂ ತಿಳಿಯದಂತೆ ಸಂಸಾರ ಮಾಡುತ್ತಿದ್ದ. ಆದರೆ ಈಗ ಈ ಭೂಪನ ಅಸಲಿ ಸತ್ಯ ಅವನ ಹೆಂಡತಿಯಿಂದಲೇ ಬಹಿರಂಗವಾಗಿದೆ. ಹಾಗಾದ್ರೆ ಈ ಹುಡುಗ ಆಗಿರುವ ಮದುವೆಗಳೆಷ್ಟು, ಇವನ ವಿಷಯ ತಿಳಿಯೋಣ ಬನ್ನಿ..

Advertisements

ಹೌದು, ಚೆನ್ನೈನಲ್ಲಿ ವಾಸ ಮಾಡುತ್ತಿರುವ ೨೩ ವರ್ಷದ ಈ ಗಣೇಶ ಇಲ್ಲಿವರೆಗೂ ಬರೋಬ್ಬರಿ ೧೧ ಮದುವೆಯಾಗಿದ್ದಾನೆ. ಇನ್ನು ಈ ಹುಡುಗ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಯುವತಿಯೊಬ್ಬಳನ್ನ ಪ್ರೀತಿಸಿ, ಇಬ್ಬರು ಓಡಿಹೋಗಿ ಹೋಗಿ ಮದ್ವೆಯಾಗಿದ್ದಾರೆ. ಇನ್ನು ಆ ಯುವತಿಯ ಕುಟುಂಬದವರು ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ದೂರು ದಾಖಲು ಮಾಡಿದ್ದರು. ಆದರೆ 22ನೇ ವಯಸ್ಸಿಗೇನೇ 11ಜನರನ್ನ ಮದ್ವೆಯಾಗಿರುವ ಹುಡುಗ ಸಾಮಾನ್ಯನಾ ನೀವೇ ಹೇಳಿ..ಆ ಖತರ್ನಾಕ್ ಹುಡುಗ ಮೊದಲೇ ಠಾಣೆಗೆ ಹೋಗಿ ತನಗೆ ಮತ್ತು ತನ್ನ ಹೆಂಡತಿಗೆ ತೊಂದರೆಯಾಗುವ ಭ’ಯ ಇದೆ, ನಮಗೆ ರಕ್ಷಣೆ ಕೊಡಬೇಕೆಂದು ಪೊಲೀಸರಿಗೆ ಹೇಳಿರುತ್ತಾನೆ. ಚಾಲಾಕಿ ಹುಡುಗನ ಮಾತನ್ನ ನಂಬಿದ ಪೋ’ಲಿಸರು ಯುವತಿಯ ಪೋಷಕರನ್ನ ಕರೆಯಿಸಿ ವಿಚಾರಣೆ ಮಾಡಿ, ಯುವತಿಯ ತಂದೆ ತಾಯಿಯನ್ನ ಮನೆಗೆ ಕಳುಹಿಸಿ, ಯುವಕನನ್ನ ಗಣೇಶನ ಜೊತೆಯೇ ಕಳುಹಿಸಿದ್ರು.

ಮದ್ವೆಯಾಗಿ ಕೆಲವೇ ದಿನಗಳು ಕಳೆದಿದ್ದವು. ಆದರೆ ಭೂಪ ರಸಿಕ ಹುಡುಗನ ಆಟ ಇನ್ನು ಮುಗಿದಿರಲಿಲ್ಲ. ಮನೆ ಕೆಲಸಕ್ಕೊಬ್ಬಳು ಬೇಕು ಎಂಬ ನೆಪದಲ್ಲಿ ಹದಿನೇಳು ವರ್ಷದ ಹುಡುಗಿಯೊಬ್ಬಳನ್ನ ಮನೆಗೆ ಕರೆತಂದ. ಆಕೆಯನ್ನು ಸಹ ಮರಳು ಮಾಡಿದ ಈ ಭೂಪ, ದಿನ ಕಳೆದಂತೆ ಆಕೆಯೂ ಜೊತೆ ಸಲುಹೆ ಸಂಬಂಧ ಬೆಳೆಸಿಕೊಂಡ. ಇನ್ನು ತನ್ನ ಪತಿ ಪುರುಷೋತ್ತಮನ ಬಗ್ಗೆ ನಿಜ ಅರಿತ ಪತ್ನಿ ಅವನ ಸಂಬಂಧದಿಂದ ದೂರ ಇರಲು ಪ್ರಯತ್ನಿಸಿದಳು. ಇದರಿಂದ ಹೆಂಡತಿ ಅಂತ ನೋಡದೆ ಹಿಂ’ಸೆ ಕೊಡಲು ಶುರು ಹಚ್ಚಿಕೊಂಡ. ಅವನು ಕೊಡುತ್ತಿದ್ದ ಕ’ಷ್ಟಗಳಿಂದ ಕಂಗೆಟ್ಟ ಪತ್ನಿ ತನ್ನ ಪೋಷಕರಿಗೆ ಕರೆ ಮಾಡಿ ತನಗಾಗುತ್ತಿರುವ ನೋ’ವಿನ ಬಗ್ಗೆ ಹೇಳಿಕೊಂಡು ಮನೆಗೆ ಕರೆದೊಯ್ಯುವಂತೆ ಕೇಳಿಕೊಳ್ಳುತ್ತಾಳೆ.

ಬಳಿಕ ಯುವತಿಯ ಪೋಷಕರು ಆ ಹುಡುಗನ ಮೇಲೆ ಪ್ರ’ಕರಣ ದಾಖಲು ಮಾಡಿದ್ದು, ರಸಿಕ ಗಣೇಶನನ್ನ ಠಾಣೆಗೆ ಕರೆದುಕೊಂಡು ಹೋದ ಪೋಲಿಸರು, ಅವನ ನಿಜ ಬಣ್ಣದ ಬಗ್ಗೆ ತಿಳಿದು ಶಾಕ್ ಆಗಿದ್ದಾರೆ. ಅವನು ಅದಾಗಲೇ ಹನ್ನೊಂದು ಮದ್ವೆಗಳಾಗಿದ್ದು, ತನ್ನ ರಹಸ್ಯ ಯಾರಿಗೂ ತಿಳಿಯದಂತೆ ಪ್ರತಿಯೊಬ್ಬರ ಜೊತೆ ಸಂಸಾರ ಮಾಡುತ್ತಿದ್ದ ಭೂಪ. ೧೧ ಹೆಂಡತಿಯರು ಸಾಲದೆಂಬಂತೆ ಬೇರೆಯವರ ಜೊತೆ ಕೂಡ ಸಂಬಂಧ ಇಟ್ಟುಕೊಂಡಿರುವ ವಿಚಾರ ಬೆಳೆಕಿಗೆ ಬಂದಿದೆ. ನೋಡಿ ಕೆಲ ಹೆಣ್ಣು ಮಕ್ಕಳು ಹಿಂದೂ ಮುಂದು ನೋಡದೆ ಇಂತಹ ಕೆಟ್ಟ ಹುಳುಗಳ ಜೊತೆ ಪ್ರೀತಿ ಎಂಬ ಜೇಡರ ಬಲೆಯಲ್ಲಿ ಬಿದ್ದು ಅದರಿಂದ ಹೊರಗೆ ಬರಲಾರದೆ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ.ಈ ಘಟನೆಯನ್ನ ನೋಡಿದ ಮೇಲೆ ಅರ್ಥವಾಗದೇ ಇರೋ ಪ್ರಶ್ನೆ ಒಂದೇ..ಒಬ್ಬ ಪತ್ನಿಯನ್ನ ಕಟ್ಟಿಕೊಂಡು ನಿಭಾಯಿಸಲು ಕಷ್ಟಪಡುವ ಈ ಕಾಲದಲ್ಲಿ, ಚಿಕ್ಕವಯಸ್ಸಿನ ಈ ಭೂಪ ಅದು ಹೇಗೆ 11 ಜನರ ಜೊತೆ ಸಂಸಾರ ಸಾಗಿಸುತ್ತಿದ್ದ ಎಂಬುದೇ ಅಚ್ಚರಿಗೆ ಕರಣವಾಗಿದೆಯಲ್ಲವೇ..