Advertisements

12 ಮಾವಿನ ಹಣ್ಣನ್ನು 1.2 ಲಕ್ಷಕ್ಕೆ ಮಾರಾಟ ಮಾಡಿದ ಈ ಹುಡುಗಿ.. ಅದು ಹೇಗೆ ಗೊತ್ತಾ?

Kannada Mahiti

ಒಂದು ಮಾವಿನ ಹಣ್ಣನ್ನ ಅಬ್ಬಬ್ಬಾ ಅಂದ್ರೆ ಎಷ್ಟು ರೂಪಾಯಿಗೆ ಮಾರಬಹುದು, ಅಥವಾ ಕೊಂಡುಕೊಳ್ಳಬಹುದು.. 100, 200, ಇಲ್ಲಾ ಸಾವಿರ ಅಲ್ವೇ ಅಲ್ಲಾ.. ಒಂದು ಹಣ್ಣಿಗೆ 10 ಸಾವಿರ ರೂಪಾಯಿಯಂತೆ 12 ಮಾವಿನ ಹಣ್ಣನ್ನ ಒಂದು ಲಕ್ಷದ 20 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾಳೆ ಈ ಹುಡುಗಿ.. ಅರೇ ಇದೇನಿದು ಒಂದು ಮಾವಿನ ಹಣ್ಣನ್ನು ಇಷ್ಟೊಂದು ಹಣಕ್ಕೆ ಮಾರೋದು ಸಾಧ್ಯಾನ ಎಂದು ನಿಮಗೆ ಅನಿಸಿರಬಹುದು. ಹೌದು ನಂಬಲು ಕಷ್ಟ ಆದ್ರು ಇದಂತು ಸತ್ಯ.. ಈ ವಿಷಯ ನಿಮಗೆ ಆಶ್ಚರ್ಯ ಅನಿಸಿರಬಹುದು. ಆದ್ರೆ ಇದು ಕಂಡಿತ ಸಾಧ್ಯ. ಇದನ್ನ ಜಮ್ ಶೆಟ್ ಪುರದ ಬಾಲಕಿ ಸಾಧಿಸಿ ತೋರಿಸಿದ್ದಾಳೆ.. ಐದನೇ ತರಗತಿಯಲ್ಲಿ ಓದುತ್ತಿರುವ ಈ ಹುಡುಗಿಯ ಹೆಸರು ತುಳಿಸಿ ಕುಮಾರಿ.

[widget id=”custom_html-3″]

Advertisements

ಈಕೆಗೆ ಓದೋದು ಅಂದ್ರೆ ಪಂಚ ಪ್ರಾ,’ಣ.. ಅದೇ ರೀತಿ ಓದಿನಲ್ಲೂ ಕೂಡ ಮುಂದೆ ಇದ್ದಾಳೆ. ಆದರೆ ನಿಮಗೆಲ್ಲ ತಿಳಿದಿರುವಾಗೆ ಲಾ’ಕ್ ಡೌನ್ ಕಾರಣದಿಂದ ಶಾಲಾ ಕಾಲೇಜುಗಳು ಬಂದ್ ಆಗಿದೆ. ಮಕ್ಕಳೆಲ್ಲಾ ಆನ್ ಲೈನ್ ಕ್ಲಾಸ್ ಗಳಲ್ಲಿ ಪಾಠ ಕೇಳುವಂತಾಗಿದೆ.. ಇನ್ನೂ ಈ ಸಮಯದಲ್ಲಿ ಆನ್ಲೈನ್ ಕ್ಲಾಸ್ ಗೆ ಅಟೆಂಡ್ ಆಗಲು ಈ ಹುಡುಗಿಯ ಬಳಿ ಸ್ಮಾರ್ಟ್ ಪೋನ್ ಇರಲಿಲ್ಲ.. ಈಗಾಗಿ ಸ್ಥಳೀಯ ಮಾಧ್ಯಮ ಒಂದರ ಮೂಲಕ ಮೋಬೈಲ್ ಕೊಡಿಸುವಂತೆ ಮೊರೆ ಇಟ್ಟಿದ್ದಳು. ಯಾರು ಕೂಡ ಈಕೆಯ ಬೇಡಿಕೆಗೆ ಸ್ಪಂದಿಸಿಲ್ಲ.. ಈಗಾಗಿ ಮಾವಿನ ಹಣ್ಣನ್ನ ಮಾರಿ ದುಡ್ಡು ಸಂಪಾದಿಸಿ ಮೊಬೈಲ್ ತಗೋಳೋಕೆ ಮುಂದಾಗಿದ್ದಾರೆ.

[widget id=”custom_html-3″]

ಇದನ್ನು ತಿಳಿದ ಶಿಕ್ಷಣ ಸಂಸ್ಥೆಯೊಂದರ ಸಂಸ್ಥಾಪಕ, ನಿರ್ದೇಶಕ ಅಮೇಯ ಏಟೆ ಆಕೆಗೆ ಸಹಾಯ ಮಾಡಲು ಮುಂದಾಗಿ ತುಳಸಿ ಕುಮಾರಿ ಮಾವಿನ ಹಣ್ಣು ಮಾರ್ತಿದ್ದ ಜಾಗಕ್ಕೆ ಹೋಗಿ.. ಒಂದು ಹಣ್ಣಿಗೆ 10 ಸಾವಿರ ರೂಪಾಯಿಯಂತೆ ಒಟ್ಟು ಒಂದು ಲಕ್ಷದ 20 ಸಾವಿರ ರೂಪಾಯಿಯಂತೆ 12 ಮಾವಿನ ಹಣ್ಣನ್ನ ಖರೀದಿಸಿದ್ದಾರೆ. ಅಲ್ಲದೇ ಆಕೆಯ ಖಾತೆಗೆ ಹಣವನ್ನು ಕೂಡ ವರ್ಗಾಯಿಸಿದ್ದಾರೆ.. ಬಳಿಕ ಅವರ ತಂದೆ ತುಳಿಸಿ ಕುಮಾರಿಗೆ ಸ್ಮಾರ್ಟ್ ಪೋನ್ ಕೊಡಿಸಿದ್ದಾರೆ. ತುಳಸಿ ಕುಮಾರಿಯ ಉದ್ದೇಶ ಹಾಗು ಅದಕ್ಕಾಗಿ ಆಕೆ ಪಟ್ಟ ಶ್ರಮ ಇದಕ್ಕೆಲ್ಲಾ ಒಳ್ಳೆಯ ಬೆಲೆ ಸಿಕ್ಕಿದೆ ಆಕೆಯ ಶಿಕ್ಷಣಕ್ಕೆ ಇನ್ನಷ್ಟು ನೆರವು ನೀಡುತ್ತೇನೆ ಎಂದು ಅಮೇಯ ಅವರು ಹೇಳಿದ್ದಾರೆ. ಇಂತಹ ಒಳ್ಳೆಯ ಪ್ರಯತ್ನ ಹಾಗು ಅಮೇಯರಂತ ಸಹಾಯದ ಬಗ್ಗೆ ನಿವೇನ್ ಹೇಳ್ತೀರಾ..