Advertisements

ಪಾಂಡವರ ಒಂಬತ್ತು ಪತ್ನಿ 13 ಮಕ್ಕಳ ರಹಸ್ಯ ನೋಡಿ! ದ್ರೌಪದಿ ಬಿಟ್ಟು ಇನ್ನೂ ಯಾರ್ ಯಾರು ಇದ್ದರು ಗೊತ್ತಾ?

Adyathma

ನಮಸ್ತೆ ಸ್ನೇಹಿತರೆ, ಪಾಂಡವರ ಪತ್ನಿ ಪಾಂಚಾಲಿ ಅಂದರೆ ದ್ರೌಪದಿ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಪಾಂಡವರ ಉಳಿದ ಪತ್ನಿಯರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದೇ ಇಲ್ಲ. ಪಾಂಡವರಿಗೆ ಒಂಬತ್ತು ಪತ್ನಿಯರು ಇದ್ದರು. ಅವರಿಂದ ಒಟ್ಟಾರೆ 13 ಮಂದಿ ಮಕ್ಕಳಿದ್ದರು. ಅವರು ಯಾರ್ಯಾರು ಎನ್ನುವುದನ್ನ ತಿಳಿಯೋಣ. ಅಗ್ನಿ ಕನ್ಯೆ ದ್ರೌಪದಿಯನ್ನ ಐವರು ಪಾಂಡವರು ಮದುವೆಯಾಗಿದ್ದರು. ಅದರಂತೆಯೇ ಪ್ರತಿಯೊಬ್ಬರಿಂದಲೂ ದ್ರೌಪದಿಗೆ ಒಬ್ಬಬ್ಬ ಮಕ್ಕಳಾಗಿದ್ದರು.

Advertisements

ಯುದಿಷ್ಠಿರರಿಂದ ದ್ರೌಪದಿಗೆ ಪ್ರತಿವಿಂದ್ಯ ಅನ್ನುವ ಪುತ್ರನ ಜನನವಾಗಿತ್ತು. ಅದೇ ರೀತಿ ಭೀಮನಿಂದ ಶ್ರುತಸೋಮ ಮತ್ತು ಅರ್ಜುನನಿಂದ ಶ್ರುತಕೀರ್ತಿ ಅನ್ನುವ ಪುತ್ರನ ಜನನವಾಗಿತ್ತು. ಇನ್ನು ನಕುಲನಿಂದ ಶತಾನೀಕ ಮತ್ತು ಸಹದೇವರಿಂದ ಶ್ರುತಸೇನ ಅನ್ನುವ ಮಕ್ಕಳು ಹುಟ್ಟಿದ್ದರು. ಈಗೆ ಪಂಚಪಾಂಡವರಿಂದ ದ್ರೌಪದಿಗೆ ಐದು ಮಕ್ಕಳ ಜನನವಾಗಿತ್ತು. ದ್ರೌಪದಿಯನ್ನ ಹೊರತುಪಡಿಸಿ ಯುದಿಷ್ಠಿರನಿಗೆ ದೇವಿಕ ಅನ್ನುವ ಪತ್ನಿಯಿದ್ದಳು. ಇವರಿಗೆ ಯೋಧ್ಯ ಅನ್ನುವ ಮಗನಿದ್ದ.

ಇನ್ನೂ ಭೀಮ ಕೂಡ ದ್ರೌಪದಿ ಮಾತ್ರವಲ್ಲದೇ ಇನ್ನೂ ಎರಡು ಮದುವೆಯಾಗಿದ್ದ. ಮೊದಲಿಗೆ ಹಿಡಿಂಬೆಯನ್ನ ಮದುವೆಯಾಗಿದ್ದ ಭೀಮನಿಗೆ ಘಟೋದ್ಗಜ ಎನ್ನುವ ಪುತ್ರನ ಪ್ರಾಪ್ತಿಯಾಗುತ್ತದೆ. ನಂತರ ಭೀಮ ಕಾಶಿ ರಾಜನ ಮಗಳು ಬಲಂದರ ಏಂಬಾಕೆಯನ್ನು ಮದುವೆಯಾಗಿದ್ದ. ಬಲದಂರ ಭೀಮನಿಗೆ ಸ್ವರ್ಗ ಎನ್ನುವ ಹೆಸರಿನ ಮಗನನ್ನು ಕೊಟ್ಟಿದ್ದಳು. ಅರ್ಜುನ ದ್ರೌಪದಿ ಪ್ರೀತಿ ತುಂಬಾ ಗಾಡವಾಗಿತ್ತು. ಅರ್ಜುನನೇ ದ್ರೌಪದಿಯನ್ನ ಸ್ವಯಂವರದಲ್ಲಿ ಗೆದ್ದಿದ್ದ. ಆದರೆ ಅರ್ಜುನನಿಗೆ ದ್ರೌಪದಿಯ ಹೊರತಾಗಿ ಇನ್ನು ಮೂವರು ಪತ್ನಿಯರು ಇದ್ದಾರೆ. ಅರ್ಜುನನ ಎರಡನೇ ಮದುವೆ ಉಲೂಪಿ ಅನ್ನುವ ಹೆಸರಿನ ನಾಗ ಕನ್ಯೆಯೊಂದಿಗೆ ಆಗಿತ್ತು. ಇವರಿಬ್ಬರಿಗೆ ಇರಾವನ್ ಎನ್ನುವ ಹೆಸರಿ‌ನ ಪುತ್ರನ ಜನ್ಮವಾಗುತ್ತದೆ.

ನಂತರ ಮಣಿಪುರದ ರಾಜ ಚಿತ್ರವಾಹನನ ಮಗಳು ಚಿತ್ರಾಂಗದಾಳನ್ನು ಕಂಡು ಮೋಹಿತರಾದ ಅರ್ಜುನ ಚಿತ್ರಾಂಗದಾಳನ್ನು ಮದುವೆಯಾಗುತ್ತಾನೆ. ನಂತರ ಚಿತ್ರಾಂಗದಾ ಬಬ್ರುವಾಹನ ಅನ್ನುವ ವೀರ ಪುತ್ರನಿಗೆ ಜನ್ಮನೀಡುತ್ತಾಳೆ‌. ನಂತರ ಚಿತ್ರವಾಹನನಿಗೆ ತನ್ನ ವಂಶವನ್ನು ಮುಂದುವರೆಸಲು ಈ ಮಗುವನ್ನ ನೀಡುತ್ತಾನೆ ಅರ್ಜುನ.‌ ಇನ್ನು ಮಣಿಪುರದಿಂದ ತನ್ನ ತೀರ್ಥಯಾತ್ರೆ ಮುಂದುವರೆಸುವ ಅರ್ಜುನ ದ್ವಾರಕಾಗೆ ಬಂದಾಗ ಕೃಷ್ಣನ ತಂಗಿ ಸುಭದ್ರೆ ಮೇಲೆ ಮೋಹಿತನಾಗಿ ಆಕೆಯನ್ನ ಮದುವೆಯಾಗುತ್ತಾನೆ. ಇವರಿಬ್ಬರ ಪ್ರೀತಿಯ ಸಂಕೇತವಾಗಿಯೇ ವೀರ ಯೋದ ಅಭಿಮನ್ಯುವಿನ ಜನ್ಮವಾಯಿತು.

ಪಂಚಪಾಂಡವರ ಪೈಕಿ ನಾಲ್ಕನೆಯವನಾದ ನಕುಲ ಕೂಡ ದ್ರೌಪದಿಯ ಹೊರತಾಗಿ ಇನ್ನೊಂದು ಮದುವೆಯಾಗಿದ್ದ. ನಕುಲ ಶಿಶುಪಾಲನ ಪುತ್ರಿ ರೇಣುಮತಿಯೊಂದಿಗೆ ವಿವಾಹವಾಗಿದ್ದ. ರೇಣುಮತಿಯಿಂದ ನಕುಲನಿಗೆ ನಿರ್ಮಿತ್ ಎನ್ನುವ ಹೆಸರಿನ ಮಗನ ಜನನವಾಗಿತ್ತು. ಇನ್ನು ಪಾಂಡವರ ಕೊನೆಯ ತಮ್ಮ ಸಹದೇವ ಈತ ಕೂಡ ದ್ರೌಪದಿ ಹೊರತುಪಡಿಸಿ ವಿಜಯ ಎಂಬಾಕೆಯನ್ನ ಮದುವೆಯಾಗಿದ್ದ. ಸಹದೆವನಿಗೆ ಪತ್ನಿ ವಿಜಯ ಸುಹೋತ್ರ ಎನ್ನುವ ಮಗುವನ್ನ ಕೊಟ್ಟಿದ್ದಳು. ಸ್ನೇಹಿತರೆ ಈಗೆ ಪಾಂಡವರಿಗೆ ಒಟ್ಟು ಒಂಬತ್ತು ಪತ್ನಿಯರು ಮತ್ತು ಹದಿಮೂರು ಮಂದಿಯರು ಪುತ್ರರು ಇದ್ದಾರೆ..