ಸ್ನೇಹಿತರೇ, ದೇಶದ ಬೆನ್ನೆಲುಬು ಅನ್ನದಾತ ರೈತನ ಕಷ್ಟ ರೈತನಿಗೆ ಗೊತ್ತು. ನೀರಿಲ್ಲದೆ ರೈತ ವ್ಯವಸಾಯ ಮಾಡಲು ಸಾಧ್ಯವಿಲ್ಲ. ಇನ್ನು ಮಳೆಯನ್ನ ನಂಬಿ ಕುಳಿತರೆ ಏನೂ ಪ್ರಯೋಜನವಿಲ್ಲ. ಹಾಗಂತ ಬೋರ್ವೆಲ್ ಕೊರೆಸಿದ್ರೆ ನೀರು ಸಿಗುತ್ತೋ ಅನ್ನೋ ಗ್ಯಾರಂಟಿ ಇಲ್ಲ. ಆದರೂ ದೇವರ ಮೇಲೆ ಬಾರ ಹಾಕಿ ಪಾಯಿಂಟ್ ಮಾಡಿಸಿ ಲಕ್ಷ ಲಕ್ಷ ಖರ್ಚು ಮಾಡಿ ರೈತರು ಬೋರ್ ವೆಲ್ ಕೊರೆಸುತ್ತಾರೆ. ಆದರೆ ಗಂಗೆ ಒಲಿದರೆ ಅದು ಅವರ ಅದೃಷ್ಟ. ಇಲ್ಲದಿದ್ದರೆ ಮತ್ತೊಮ್ಮೆ, ಮೊಗದೊಮ್ಮೆ ಬೋರ್ ವೆಲ್ ಕೊರೆಸುವ ಪ್ರಯತ್ನ ಮಾಡುತ್ತಾರೆ. ಒಂದು ಬಾರಿ ಬೋರ್ವೆಲ್ ಕೊರೆಸಿ ಸುಧಾರಿಸಿಕೊಳ್ಳುವುದೇ ಕಷ್ಟ ಆದರೆ ಇಲ್ಲೊಬ್ಬರೈತ ನೀರಿಗಾಗಿ ಒಂದಲ್ಲ ಎರಡಲ್ಲ ಬರೋಬ್ಬರಿ 150 ಬೋರ್ ವೆಲ್ ಕೊರೆಸಿದ್ದು ಒಂದು ಹನಿ ನೀರನ್ನು ಸಹ ಆತ ನೋಡಲಾರದೆ ಹತಾಶನಾಗಿ ಹೋಗಿದ್ದ.

ಇನ್ನು ಈ ರೀತಿಯ ಭಗೀರಥ ಪ್ರಯತ್ನವನ್ನ ಮಾಡಿದ್ದು ಕೊಪ್ಪಳದ ಅಶೋಕ್ ಮೇಠಿ ಎಂಬ ರೈತ. ೨೪ ಎಕರೆ ಜಮೀನು ಹೊಂದಿರುವ ಈ ರೈತನ ಕುಟುಂಬ ಕಳೆದ ೧೫ ವರ್ಷಗಳಿಂದ ಸತತವಾಗಿ ಬೋರ್ ವೆಲ್ ಕೊರೆಸುತ್ತಲೇ ಬಂದಿದ್ದರು. ಆದರೆ ಹನಿ ನೀರು ಕೂಡ ಸಿಕ್ಕಿರಲಿಲ್ಲ. ಇನ್ನು ಈಗಾಗಲೇ ಬೇರೆ ಬೇರೆ ಮೂಲಗಳಿಂದ ಹನಿನೀರಾವರಿ ಪದ್ಧತಿ ಮೂಲಕ ಕೃಷಿ ಮಾಡುತ್ತಿದ್ದ ಅಶೋಕ್ ಮೇಠಿ ರೈತ ಕುಟುಂಬ ಕೆಲ ದಿನಗಳ ಹಿಂದಷ್ಟೇ 151ನೇ ಬೋರ್ವೆಲ್ ಕೊರೆಸಿದ್ರು. ಕೊನೆಗೂ ಆ ರೈತನ ಭಗೀರಥ ಪ್ರಯತ್ನಕ್ಕೆ ಗಂಗೆ ಒಲಿದಿದ್ದಾಳೆ. ಸುಮಾರು 150 ಅಡಿ ಆಳ ಕೊರೆಯುವಷ್ಟರಲ್ಲೇ ೪ ಇಂಚು ನೀರು ಸಿಕ್ಕಿದ್ದು ಕುಟುಂಬವೆಲ್ಲಾ ತುಂಬಾ ಸಂತೋಷ ಪಟ್ಟಿದ್ದಾರೆ.

ರೈತ ಅಶೋಕ್ ಮೇಠಿ ಅವರು ಹೇಳಿರುವ ಪ್ರಕಾರ ನೀರು ಸಿಗುವುದೋಕೋಸ್ಕರ ಎಲ್ಲಾ ರೀತಿಯ ಪ್ರಯತ್ನಗಳನ್ನ ಮಾಡಿದ್ದೇನೆ. ಪೂಜೆಗಳನ್ನು ಕೂಡ ಮಾಡಿದ್ದೇವೆ. ಆದರೆ ಇದ್ಯಾವುದರಿಂದಲೂ ಯಾವುದೇ ಪ್ರಯೋಜನವಾಗಿರಲಿಲ್ಲ. ೧೫೦ ಬೋರ್ ವೆಲ್ ಕೊರೆಸಿದ್ರು ಒಂದು ತೊಟ್ಟು ನೀರು ಸಹ ನನ್ನ ಜಮೀನಿನಲ್ಲಿ ನೋಡಲು ಸಾಧ್ಯವಾಗಿರಲಿಲ್ಲ. ಇಷ್ಟು ವರ್ಷ ಮಳೆ ಆಧಾರಿತ ಬೆಳೆಗಳನ್ನ ಬೆಳೆಯುತ್ತಿದ್ದ ನಾವು ಇನ್ನು ಮುಂದೆ ಬೇರೆ ಬೇರೆ ರೀತಿಯ ಬೆಳೆಗಳನ್ನ ಬೆಳೆಯಬಹುದು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ೧೫ ವರ್ಷಗಳ ನಮ್ಮ ಪ್ರತಿಶ್ರಮಕ್ಕೆ ಈಗ ನಮ್ಮ ಜಮೀನಿನಲ್ಲಿ ಗಂಗೆ ಉಕ್ಕಿದ್ದು ತುಂಬಾ ಸಂತಸವಾಗುತ್ತಿದೆ ಎಂದು ರೈತ ಹೇಳಿದ್ದಾರೆ.