Advertisements

1200ಕಿಮೀ ಸೈಕಲ್ ತುಳಿದ 15ವರ್ಷದ ಬಾಲಕಿಗೆ ಹೊಡೆಯಿತು ಬಂಪರ್ ಆಫರ್ !

News

ಕರೋನಾ ಹಿನ್ನಲೆ ದೇಶದಾದ್ಯಂತ ಲಾಕ್ ಡೌನ್ ಆದ ಕಾರಣ ವಲಸೆ ಕಾರ್ಮಿಕರು ಸೇರಿದಂತೆ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದರು. ಇಂತಹ ಸಂಕಷ್ಟದ ಪರಿಷ್ಟಿತಿಯಲ್ಲೂ ದೆಹಲಿಯ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದ ಜ್ಯೋತಿ ಎಂಬ 15 ವರ್ಷದ ಬಾಲಕಿಯೊಬ್ಬಳು, ತನ್ನ ತಂದೆಯನ್ನ ಸೈಕಲ್ ಮೇಲೆ ಕೂರಿಸಿಕೊಂಡು, ಬಿಹಾರದ ದರ್ಭಾಂಗಕ್ಕೆ ಬರೋಬ್ಬರಿ 1200ಕಿಮೀ ಕ್ರಮಿಸಿದ್ದಳು.

Advertisements

15ವರ್ಷದ ಬಾಲಕಿ ಜ್ಯೋತಿ ದೆಹಲಿಯಿಂದ ಬಿಹಾರದ ತನ್ನ ಊರಿಗೆ ತನ್ನ ತಂದೆಯನ್ನ ಸೈಕಲ್ ನಲ್ಲಿ ಕರೆದುಕೊಂಡು ಬಂದಿದ್ದರ ಹಿಂದೆ ಇದೆ ಮನಕಲುಕುವ ಸ್ಟೋರಿ..ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ : ತನ್ನ ತಂದೆಯನ್ನ 1200ಕಿಮೀ ಸೈಕಲ್ ನಲ್ಲೇ ಕರೆದುಕೊಂಡು ಬಂದ 15ವರ್ಷದ ಬಾಲಕಿ !

ಹೀಗೆ ತನ್ನ ದಿಟ್ಟ ತನದಿಂದ ಸೈಕಲ್ ನಲ್ಲಿಯೇ 1200ಕಿಮೀ ಚಲಿಸಿದ್ದ ಬಾಲಕಿ ಜ್ಯೋತಿಗೆ ಸಂಬಂಧಪಟ್ಟ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈಗ ಇದನ್ನೆಲ್ಲಾ ಗಮನಿಸಿರುವ ರಾಷ್ಟ್ರೀಯ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಜ್ಯೋತಿಗೆ ಆಹ್ವಾನ ನೀಡಿದ್ದು, ಬಾಲಕಿಯ ಧೈರ್ಯ, ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇನ್ನು ನ್ಯಾಷನಲ್ ಆಕಾಡೆಮಿ ಬಾಲಕಿ ಜ್ಯೋತಿಗೆ ತರಭೇತಿ ನೀಡಲು ತಯಾರಾಗಿದೆ. ಜ್ಯೋತಿಯನ್ನ ಅಕಾಡೆಮಿಗೆ ದಾಖಲು ಮಾಡಿಕೊಳ್ಳುವ ಸಲುವಾಗಿ ತುದಿಗಾಲಲ್ಲಿ ನಿಂತಿದೆ.

ಬಾಲಕಿಯನ್ನ ಬಿಹಾರದಿಂದ ದೆಹಲಿಯ ಅಕಾಡೆಮಿಗೆ ಕರೆಸಿಕೊಳ್ಳಲು ರೆಡಿಯಾಗಿದ್ದು ಅದಕ್ಕೆ ಬೀಳುವ ಖರ್ಚು ವೆಚ್ಚಗಳನ್ನೆಲ್ಲಾ ತಾನೇ ಭರಿಸುವುದಾಗಿ ಹೇಳಿದೆ. ಇನ್ನು ಜ್ಯೋತಿಗೆ ಮೊದಲನೆಯದಾಗಿ ಟ್ರಯಲ್ಸ್ ನಡಿಸಿ, ಬಳಿಕ ಆಕೆಗೆ ವಸತಿ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಅಕಾಡೆಮಿ ಅಧ್ಯಕ್ಷರು ಹೇಳಿದ್ದಾರೆ. ಒಟ್ಟಿನಲ್ಲಿ ತನ್ನ ಊರು ಸೇರಿಕೊಳ್ಳಲು ಪಟ್ಟ ಶ್ರಮಕ್ಕೆ ಈಗ ಬೇರೆಯದೇ ರೀತಿಯಲ್ಲಿ ಫಲ ಸಿಗುತ್ತಿದೆ. ಬೆಸ್ಟ್ ಆಪ್ ಲಾಕ್ ಜ್ಯೋತಿ.