Advertisements

ಶಾಕಿಂಗ್ ! 17 ಅಡಿ ಉದ್ದದ ಅನಕೊಂಡ ಹಾವಿನ ಬಾಲ ಹಿಡಿದು ನೀರಿನಿಂದ ಎಳೆಯಲು ಪ್ರಯತ್ನಸಿದ ಭೂಪ !ವೈರಲ್ ವಿಡಿಯೋ..

Kannada Mahiti News

ಅನಕೊಂಡ ಎಂದ ತಕ್ಷಣ ಎಲ್ಲರಿಗೂ ಮೊದಲಿಗೆ ನೆನಪು ಬರುವುದು ಹಾಲಿವುಡ್ ಸಿನಿಮಾ. ಬ್ರಹತ್ ಆಕಾರದ ಹಾವೊಂದು ಮನುಷ್ಯರನ್ನ ಹೇಗೆ ಬೇಟೆಯಾಡುತ್ತದೆ ಎಂಬುದನ್ನ ನೀವು ಸಿನಿಮಾದಲ್ಲಿ ನೋಡಿರುತ್ತೀರಿ. ಈಗ ಅಂತದ್ದೇ ರಿಯಲ್ ವಿಡಿಯೋದ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ವ್ಯಕ್ತಿಯೊಬ್ಬರು ಬರೋಬ್ಬರಿ 17 ಅಡಿ ಉದ್ದವಿರುವ ಹಾವೊಂದನ್ನ ನೀರಿನಿಂದ ಎಳೆಯಲು ಪ್ರಯತ್ನಿಸುತ್ತಿರುವುದನ್ನ ನೀವು ವಿಡಿಯೋದಲ್ಲಿ ನೋಡಬಹುದಾಗಿದೆ.

Advertisements

ಈ ಭಯಾನಕ ವಿಡಿಯೋವನ್ನ ನೋಡಿದಾಗ ಒಂದು ಕ್ಷಣ ಎಂತಹವರಲ್ಲೂ ಎದೆ ಝಲ್ಲೆನಿಸುತ್ತದೆ. ಇನ್ನು ವಿಡಿಯೋದಲ್ಲಿರುವಂತೆ ನದಿಯ ಮೇಲೆ ಬೋಟ್ ನಲ್ಲಿ ಹೋಗುತ್ತಿರುವ ವ್ಯಕ್ತಿಯೊಬ್ಬರು ದೈತ್ಯಾಕಾರದ ಹಾವೊಂದರ ಬಾಲವನ್ನ ಮೇಲಕ್ಕೆ ಎತ್ತಿ ಎಳೆಯಲು ಪ್ರಯತ್ನ ಮಾಡುತ್ತಾರೆ. ಆದರೆ ಅದು ಸಾಧ್ಯವಾಗುವುದಿಲ್ಲ. ಮೂರು ಜನರಿದ್ದ ಬೋಟ್ ನದಿ ಮೇಲೆ ಸಾಗುತ್ತಿದ್ದಾಗ ಇದ್ದಕಿದ್ದಂತೆ ಬೃಹತ್ ಗಾತ್ರದ ಅನಕೊಂಡ ಹಾವು ಕಾಣಿಸಿಕೊಳ್ಳುತ್ತದೆ. ತಕ್ಷಣವೆ ವ್ಯಕ್ತಿಯೊಬ್ಬರು ಆ ಹಾವಿನ ಬಾಲ ಹಿಡಿದು ಮೇಲೆಕ್ಕೆ ಎಳೆಯಲು ಪ್ರಯತ್ನ ಪಡುತ್ತಾರೆ. ಆದರೆ ಅದು ಸಾಧ್ಯವಾಗುವುದಿಲ್ಲ. ಆ ಹಾವು ತುಂಬಾ ಪ್ರಯಾಸ ಪಟ್ಟು ನೀರಿನ ಒಳಗಡೆ ಹೋಗಿಬಿಡುತ್ತದೆ. ಇದನ್ನ ಆ ಬೋಟ್ ನಲ್ಲಿದ್ದವರು ವಿಡಿಯೋ ಮಾಡಿದ್ದಾರೆ.

17 ಅಡಿ ಅನಕೊಂಡ ಹಾವಿನ ಬಾಲ ಹಿಡಿದು ಎಳೆಯಲು ಪ್ರಯತ್ನಪಟ್ಟ ವ್ಯಕ್ತಿಯ ವಿಡಿಯೋ ನೋಡಿ..

ಇನ್ನು ಇದು ಬ್ರೆಜಿಲ್ ದೇಶದಲ್ಲಿ ನಡೆದಿದೆ ಎಂದು ಹೇಳಲಾಗಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನು ಬ್ರೆಜಿಲ್ ನ ಸಂತಾ ಮರಿಯಾ ನದಿಯಲ್ಲಿ 17 ಅಡಿ ಉದ್ದದ ಅನಕೊಂಡ ಹಾವಿನ ವಿಡಿಯೋ ಇದಾಗಿದೆ ಎಂದು ಹೇಳಲಾಗಿದ್ದು, ಇದು ೨೦೧೪ರಲ್ಲಿ ಮಾಡಿದ್ದ ವಿಡಿಯೋ ಎಂದು ಹೇಳಲಾಗಿದೆ.