ನಮಸ್ತೆ ಸ್ನೇಹಿತರೆ.. ನಟಿ ಸೌಂದರ್ಯ ಅವರ ಕೊನೆ ಕ್ಷಣದ ಘ’ಟನೆ ನಿಮಗೆಲ್ಲಾ ತಿಳಿದೆ ಇದೆ.. ಇಂದಿಗೂ ಆ ಘ’ಟನೆಯನ್ನು ನೆನಪು ಮಾಡಿಕೊಂಡರೆ ಎಲ್ಲರ ಮನದಲ್ಲಿ ದುಃಖ ಕಾಣುತ್ತದೆ.. ಅತ್ಯುತ್ತಮ ಅಭಿನಯ ಒಳ್ಳೆಯ ಗುಣ, ನಡತೆ ಹೊಂದಿದ್ದ ಸೌಂದರ್ಯ ಅವರು ಕನ್ನಡಿಗರ ಮನದಲ್ಲಿ ಹಚ್ಚ ಹಸಿರಾಗಿದ್ದಾರೆ.. ಮೂಲತಃ ಕೋಲಾರ ಜಿಲ್ಲೆ ಮುಳುಬಾಗಿಲು ತಾಲೂಕಿನಲ್ಲಿ ಜನಸಿದ ಸೌಂದರ್ಯ ಅವರ ಹುಟ್ಟು ಹೆಸರು ಸೌಮ್ಯ.. ಚಿಕ್ಕಂದಿನಿಂದಲೇ ಸೌಂದರ್ಯ ಅವರು ಡಾಕ್ಟರ್ ಆಗಬೆಕೆನ್ನುವ ಕನಸನ್ನು ಹೊತ್ತಿದ್ದರು.. ಇವರ ತಂದೆ ಸತ್ಯನಾರಾಯಣ್ ನಿರ್ಮಾಪಕಾರಗಿದ್ದು ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದರು..

ಇದೇ ಸಮಯದಲ್ಲಿ ಸೌಂದರ್ಯ ಅವರಿಗೆ ಎಂಬಿ.ಬಿ.ಎಸ್ ಮಾಡಲು ಸೀಟ್ ಸಿಕ್ಕಿತು.. ಎಂಬಿ.ಬಿ.ಎಸ್ ಮಾಡಲು ಸೀಟ್ ಸಿಕ್ಕಿತು ಎಂಬ ಖುಷಿಯಲ್ಲಿ ಸೌಂದರ್ಯ ಮತ್ತು ಅವರ ತಂದೆ ನಾದಬ್ರಹ್ಮ ಹಂಸಲೇಖ ಅವರ ಮನೆಗೆ ಹೋಗುತ್ತಾರೆ.. ಇದೇ ಸಮಯಕ್ಕೆ ಸರಿಯಾಗಿ ಗಂಧರ್ವ ಅನ್ನುವ ಸಿನಿಮಾಗೆ ನಟಿಯನ್ನು ಹುಡುಕುತ್ತಿದ್ದ ಹಂಸಲೇಖ ಅವರಿಗೆ ಸೌಂದರ್ಯ ಅವರು ಕಣ್ಣಿಗೆ ಬೀಳುತ್ತಾರೆ.. ಇದಾದ ನಂತರ ಸತ್ಯನಾರಾಯಣ ಅವರಿಗೆ ನಿಮ್ಮ ಮಗಳೇ ಸುಂದರವಾಗಿದ್ದಾರೆ ಗಂಧರ್ವ ಸಿನಿಮಾದಲ್ಲಿ ಸೌಂದರ್ಯ ನಟಿಸಲಿ ಎಂದು ಹಂಸಲೇಖ ಅವರು ಒಪ್ಪಿಸುತ್ತಾರೆ..

ಇದಾದ ನಂತರ ಕನ್ನಡ, ತೆಲುಗು ತಮಿಳು ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ಸಿಗುತ್ತದೆ.. ಮತ್ತೆ ಸೌಂದರ್ಯ ಅವರು ಎಂಬಿ.ಬಿ.ಎಸ್ ಮಾಡಲು ಹಿಂತಿರುಗಲೇ ಇಲ್ಲ.. ಇವರಿಗೆ ತಂದೆ ಅಂದರೆ ತುಂಬಾ ಪ್ರೀತಿ ಹಾಗಾಗಿ ಪ್ರತಿದಿನ ಶೂಟಿಂಗ್ ಗೆ ತಂದೆಯ ಜೊತೆಗೆ ಹೋಗಿ ಬರುತ್ತಿದ್ದರು.. ತಂದೆಯ ಮಾತಿಗೆ ತುಂಬಾ ಬೆಲೆಯನ್ನು ಕೊಡುತ್ತಿದ್ದ ಸೌಂದರ್ಯ ಅವರು.. ತಂದೆಯ ಸಲಹೆಗಳನ್ನು ಚಾಚು ತಪ್ಪದೆ ಪಾಲಿಸುತ್ತಿದ್ದರು.. ಸೌಂದರ್ಯ ಅವರ ತಂದೆ ಸತ್ಯನಾರಾಯಣ ಅವರು ಜ್ಯೋತಿಷ್ಯದ ಮೇಲೆ ತುಂಬಾ ನಂಬಿಕೆ ಇಟ್ಟಿದ್ದರು.. ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ರಾಮನವರ್ ಎಂಬ ಜ್ಯೋತಿಷ್ಯರ ಹತ್ತಿರ ಕೇಳುತ್ತಿದ್ದರು..

ಈಗೆ ಒಂದು ದಿನ ರಾಮನವರ್ ಜ್ಯೋತಿಷ್ಯರ ಬಳಿ ಸೌಂದರ್ಯ ಜೀವನದ ಬಗ್ಗೆ ಜ್ಯೋತಿಷ್ಯವನ್ನು ಕೇಳುತ್ತಾರೆ.. ನಂತರ ರಾಮನವರ್ ನಿಮ್ಮ ಮಗಳಿಗೆ 2004 ರ ವರ್ಷದಲ್ಲಿ ಸಮಯ ಸರಿಯಿಲ್ಲ, ಚಿತ್ರರಂಗವನ್ನು ಬಿಟ್ಟು ಯಾವುದಾದರೂ ಬ್ಯುಸಿನೆಸ್ ಮಾಡುವುದು ಒಳ್ಳೆಯದು, ತುಂಬಾ ಜಾಗೃತರಾಗಿ ಇರಬೇಕು ಇಲ್ಲದಿದ್ದರೆ ಗಂ’ಡಾಂತರಗಳು ಇದೆ ಎಂದು ಹೇಳುತ್ತಾರೆ.. ಇನ್ನು ಜ್ಯೋತಿಷ್ಯರು ಹೇಳಿದ ಮಾತುಗಳನ್ನು ಸತ್ಯನಾರಾಯಣ ಅವರು ಮ’ರಣ ಹೊಂದುವ ಕೆಲವು ದಿನಗಳ ಹಿಂದೆಯೆ ಸೌಂದರ್ಯ ಅವರಿಗೆ ತಿಳಿಸಿ ಜಾಗೃತಿಯಾಗಿರು ಎಂದು ತಿಳಿಸುತ್ತಾರೆ..

ಅಷ್ಟೇ ಅಲ್ಲದೇ ಸೌಂದರ್ಯ ಎಲ್ಲಿಗೆ ಹೋದರೂ ತಂಗಿಯನ್ನು ಜೊತೆಯಲ್ಲಿ ಕಳುಹಿಸು ಎಂದು ಮಗ ಅಮರಾನಾಥ್ ಅವರ ಬಳಿ ಪ್ರಮಾಣ ಮಾಡಿಸಿಕೊಳ್ಳುತ್ತಾರೆ.. ಆದರೆ ವಿಧಿಯಾಟ ನೋಡಿ ಜ್ಯೋತಿಷ್ಯರು ತಿಳಿಸದ ಭವಿಷ್ಯದಂತೆ ನಡೆದು ಹೋಗುತ್ತದೆ.. ಏಪ್ರಿಲ್ 17, 2004 ರಂದು ಹೆಲಿಕಾಪ್ಟರ್ ದು’ರಂತದಲ್ಲಿ ಸೌಂದರ್ಯ ಅವರು ಕಣ್ಮರೆಯಾಗುತ್ತಾರೆ.. ಈ ಘ’ಟನೆ ನಡೆದ ನಂತರ ಸಿನಿಮಾ ರಂಗ ಶೋಕ ಸಾಗರದಲ್ಲಿ ಮುಳುಗುತ್ತದೆ.. ಎಂತಹ ಅದ್ಬುತವಾದ ನಟಿಯನ್ನು ಕಳೆದುಕೊಂಡರಲ್ಲ ಎಂದು ಕಣ್ಣೀರು ಇಡುತ್ತಾರೆ.. ಒಟ್ಟಿನಲ್ಲಿ ಸೌಂದರ್ಯ ಅವರು ಇಂದಿಗೂ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ..