Advertisements

ಈ ಸಿನಿಮಾ ನೋಡಿ 200 ಕ್ಕೂ ಹೆಚ್ಚು ಕುಟುಂಭದ ಮಕ್ಕಳು ತಂದೆ ತಾಯಿಯನ್ನು ವೃದ್ದಾಶ್ರಮದಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ.. ಈ ಸಿನಿಮಾ ಯಾವುದು ಗೊತ್ತಾ?

Cinema Motivation

ನಮಸ್ತೇ ಸ್ನೇಹಿತರೆ ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಟ.. ಅವರೇ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್..  ಪುನಿತ್ ರಾಜಕುಮಾರ್ ಅವರ ಬಗ್ಗೆ ಯಾರಿಗೂ ಹೇಳಬೇಕಾಗಿಲ್ಲ.. ಅವರ ಸರಳತೆ, ಅವರ ಗುಣ, ಮಾತು ಅಭಿಮಾನಿಗಳಿಗೆ ಅತೀ ಅಚ್ಚು ಮೆಚ್ಚು.. ಇನ್ನೂ ಈಗಾಗಲೇ ಪುನಿತ್ ರಾಜ್ ಕುಮಾರ್ ಅವರ  ಹೊಸ ಸಿನಿಮಾ ಶೂಟಿಂಗ್ ಎಲ್ಲಾ ಮುಗಿದಿದ್ದು ತೆರೆ ಮೇಲೆ ಬರಲು ಸಜ್ಜಾಗಿದೆ.. ಆದರೆ ಸಿನಿಮಾ ಇನ್ನೂ ರಿಲಿಸ್ ಆಗುವ ರೀತಿಯಲ್ಲಿ ಕಾಣಿಸುತ್ತಿಲ್ಲ..

Advertisements

ಏಕೆಂದರೆ ಕೋವಿಡ್ ಇರುವ ಕಾರಣ ಸಿನಿಮಾ ಥಿಯೇಟರ್ ಗಳಿಗೆ ಇನ್ನೂ ಪ್ರವೇಶ ಅನುಮತಿ ಸರಿಯಾಗಿ ನೀಡಿಲ್ಲ.. ಹಾಗಾಗಿ ಯುವರತ್ನ ಸಿನಿಮಾ ರಿಲಿಸ್ ಆಗಲೂ ಇನ್ನೂ ಸಮಯವನ್ನು ತೆಗೆದುಕೊಳ್ಳುತ್ತದೆ.. ಇನ್ನೂ ಪುನಿತ್ ರಾಜ್ ಕುಮಾರ್.. ಅವರ ಈ ಒಂದು ಸಿನಿಮಾದಿಂದ ಅದೆಷ್ಟೋ ಮನೆಯಲ್ಲಿ ದೀಪ ಬೆಳಗುವಂತಾಗಿದೆ.. ಹೌದು ಸ್ನೇಹಿತರೆ ಈ ಸಿನಿಮಾವನ್ನು ನೋಡಿ ಪ್ರೇರಣೆ ಪಡೆದು ಅದೆಷ್ಟೋ ಕುಟುಂಭದ ಮಕ್ಕಳು ವೃದ್ಧ ಆಶ್ರಮದಲ್ಲಿ ಇಟ್ಟಿದ್ದ ತಮ್ಮ ತಂದೆ ತಾಯಿಯರನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ..

ತಂದೆ ತಾಯಿ ಮಕ್ಕಳನ್ನು ಸಾಕಿ ಸಲುಹಿ ದೊಡ್ಡವರನ್ನಾಗಿ ಮಾಡುತ್ತಾರೆ ಆದರೆ ಪಕ್ಕದಲ್ಲಿ ಹೆಂಡತಿ ಬಂದ ತಕ್ಷಣ ಕೆಲವರು ತಂದೆ ತಾಯಿಯನ್ನು ಮರೆತು ಬಿಡುತ್ತಾರೆ.. ಅವರಿಗೆ ಸಮಯ ಕೊಡುವಷ್ಟು ಬಿಡುವಿಲ್ಲದೆ ನೆಗ್ಲೆಟ್ ಮಾಡುತ್ತಾರೆ.. ಕೊನೆಗೆ ನೋಡಿಕೊಳ್ಳಲಾಗದೆ ವೃದ್ಧ ಆಶ್ರಮಕ್ಕೆ ಸೇರಿಸಿ ಬಿಡುತ್ತಾರೆ.. ಆದರೆ ಈ ಸಿನಿಮಾದಿಂದ ವೃದ್ದಾಶ್ರಮಲ್ಲಿ ಇಟ್ಟಿದ್ದ ತಂದೆ ತಾಯಿಯನ್ನು ಮನೆಗೆ ಕರೆದುಕೊಂಡು ಬರುವಂತೆ ಮಾಡಿದೆ.. ಆ ಸಿನಿಮಾ ಬೇರೆ ಯಾವುದು ಅಲ್ಲ ನೆಚ್ಚಿನ ನಟ ಪುನಿತ್ ರಾಜ್‍ಕುಮಾರ್ ಅಭಿನಯಿಸಿರುವ ರಾಜಕುಮಾರ ಸಿನಿಮಾ..

ಹೌದು ಈ ಸಿನಿಮಾದಲ್ಲಿ ಪುನಿತ್ ರಾಜ್ ಕುಮಾರ್.. ತಂದೆ ತಾಯಿಯನ್ನು ಕಳೆದುಕೊಂಡ ನಂತರ.. ವೃದ್ಧಾಶ್ರಮದಲ್ಲಿ  ಮಕ್ಕಳಿಂದ ತಬ್ಬಲಿ ಆಗಿರುವ ತಂದೆ ತಾಯಿಯರನ್ನು ನೋಡಿಕೊಳ್ಳುತ್ತಾರೆ‌.. ನಂತರ ಮಕ್ಕಳಿಗೆ ಬುದ್ದಿ ಹೇಳಿ ತಂದೆ ತಾಯಿಯರನ್ನು ಮಕ್ಕಳ ಮನೆಗೆ ಕಳುಹಿಸುವ ಜವಾಬ್ದಾರಿಯನ್ನು ಹೊರುತ್ತಾರೆ.. ಈ ರಾಜಕುಮಾರ ಸಿನಿಮಾವನ್ನು ನೋಡಿ ಅದೆಷ್ಟೋ ವೃದ್ದರು, ಪೋಷಕರು ಕಣ್ಣೀರು ಇಟ್ಟಿದ್ದಾರೆ.. ಇದು ನಿಜ ಜೀವನದಲ್ಲಿ ಆಗಬರದಿತ್ತಾ ಎಂದು ಮನನೊಂದಿದ್ದಾರೆ.. ಇನ್ನೂ ಈಗ ಈ ಸಿನಿಮಾ ಆಲ್ ಟೈಮ್ ಸೂಪರ್ ಹಿಟ್ ಎಂದು ಹೆಗ್ಗಳಿಗೆ ಪಡೆದಿದ್ದು.. ಈ ರಾಜಕುಮಾರ ಸಿನಿಮಾವನ್ನ ನೋಡಿ ಬರೋಬ್ಬರಿ 200 ಕ್ಕೂ ಹೆಚ್ಚು ಕುಟುಂಭಗಳು ತಮ್ಮ ತಂದೆ ತಾಯಂದಿರನ್ನು ವೃದ್ದಾಶ್ರಮದಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ‌..