Advertisements

25 ಕೋಟಿಗೆ ಖರೀದಿ ಮಾಡಿದ ಕಾರಿಗೆ 50 ಕೋಟಿ ಕೊಟ್ಟು ರಿಜಿಸ್ಟ್ರೆಷನ್ ಮಾಡಿಸಿದ ಭೂಪ.. ಯಾಕೆ ಗೊತ್ತಾ?

Kannada Mahiti

ಜನ ಮರುಳೋ ಜಾತ್ರೆ ಮರುಳೋ ಅಂತಾರೇ, ಹಾಗೇ ಝಣ ಝಣ ಕಾಂಚಾಣ ಏನು ಬೇಕಾದ್ರೆ ಮಾಡಿಸುತ್ತೆ ಎಂಬ ಮಾತುಯಿದೆ. ಈ ಮಾತುಗಳು ನಾವು ಈಗ ಹೇಳ್ತಾಯಿರುವ ಸ್ಟೋರಿಗೆ ಸಿಂಕ್ ಆಗುತ್ತೆ ನೋಡಿ.. ಅಷ್ಟಕ್ಕೂ ಸ್ಟೋರಿ ಏನಂದ್ರೇ.. ಇದು 25 ಕೋಟಿ ಕೊಟ್ಟು ಅತ್ಯಂತ ವೇಗದ ಕಾರು ಖರೀದಿಸಿ 50 ಕೋಟಿ ಕೊಟ್ಟು ರಿಜಿಸ್ಟರ್ ಮಾಡಿಸಿದ ಭೂಪನ ಸ್ಟೋರಿ. ಅರೇ ಇದೇನಿದು 25 ಕೋಟಿ ಕಾರ್‌ಗೆ ಕೊಟ್ಟು ಖಾಲಿ ರಿಜಿಸ್ಟ್ರೆಷನ್ 25 ಕೋಟಿನಾ ಅಂತ ಹುಬ್ಬೇರಿಸಬೇಡಿ ಮ್ಯಾಟರ್‌ನ ಸಿಂಪಲ್ ಆಗಿ ಹೇಳ್ತೀವಿ.. ಈ ಘ’ಟ’ನೆ ನಡೆದಿದ್ದು ದುಬೈನಲ್ಲಿ. ಓರ್ವ ಉದ್ಯಮಿ ತುಂಬಾ ಆಸೆಪಟ್ಟು ಬುಗಾಟಿ ಚಿರೋನ್ ಎನ್ನುವ ಅತೀ ವೇಗದ ಕಾರ್ ಒಂದನ್ನು ಖರೀದಿಸುತ್ತಾರೆ.

[widget id=”custom_html-3″]

Advertisements

ಈ ಕಾರು ತುಂಬಾ ಸ್ಪೀಡ್ ಆಗಿ ಓಡುತ್ತೆ, ಕಾಸ್ಟ್ಲಿ ಸಹ ಹೌದು.. ಜೊತೆಗೆ ಗಂಟೆಗೆ 490 ಕಿಲೋಮೀಟರ್ ಓಡುತ್ತೆ. ಇಂತಹ ಒಂದು ಸೂಪರ್ ಲಕ್ಸೂರಿ ಕಂಫರ್ಟ್ ಆದ ಕಾರನ್ನು ಖರೀದಿಸಿ ನಂತರ ಕಾರಿನ ರಿಜಿಸ್ಟ್ರೆಷನ್ ಮಾಡಿಸಲಿಕ್ಕೆ ಬರುತ್ತಾನೆ, ಆ ವೇಳೆ ಈತನಿಗೆ ಬೇಕಾದಂತಹ 9 ಎನ್ನುವ ನಂಬರ್ ಸಿಗುವುದಿಲ್ಲ, ಅದೇ ರೀತಿ ನಂಬರ್‌ಗಾಗಿ ಹಲವಾರು ಮಂದಿ ಪಟ್ಟು ಹಿಡಿದು ಕುಳಿತಿದ್ರು, ನನಗೆ ಬೇಕು ನನಗೆ ಬೇಕು ಅಂತ. ಈ ಹಿನ್ನಲೆ ಆ ನಂಬರ್‌ನ್ನು ಬಿಡ್ ಮಾಡುವ ನಿರ್ಣಯಕ್ಕೆ ಬರಲಾಗುತ್ತೆ. ಹೀಗೆ ಬಿಡ್ ಆರಂಭವಾದಗ ಒಂದೆರೆಡು ಕೋಟಿಯಿಂದ ಕ್ಷಣ ಮಾತ್ರದಲ್ಲಿಯೇ 50 ಕೋಟಿಯ ಹತ್ತಿರಕ್ಕೆ ಬಂದು ಬಿಡುತ್ತೆ ಆ ಬಿಡ್..

[widget id=”custom_html-3″]

ನಂತರ ಅದು 50 ಕೋಟಿಯಾದಾಗಲೂ ಸಹ ಈ ಪುಣ್ಯಾತ್ಮ ಬಿಡ್ ಗೆದ್ದು ತನಗೆ ಬೇಕಾದ ನಂಬರ್‌ನ್ನು ಬುಗಾಟಿ ಚಿರೋನ್ ಕಾರಿಗೆ ಹಾಕಿಸಿದ್ದಾನೆ.. ಹಾ’ಸ್ಯಸ್ಪದವೋ ದು’ರಂತವೋ ಗೊತ್ತಿಲ್ಲ, ಕಾರು ಖರೀದಿಸಿದ ಹಣಕ್ಕಿಂತ ಡಬಲ್ ಹಣ ಕೊಟ್ಟು ಕಾರು ರಿಜಿಸ್ಟ್ರೆಷನ್ ಮಾಡಿಕೊಂಡಿರುವುದು ಮಾತ್ರ ಸಖತ್ ಚರ್ಚೆಗೆ ಕಾರಣವಾಯ್ತು. ಒಂದು ನಿರ್ಜೀವ ಕಾರಿನ ಮೂಲಕ ಶೋಕಿ ತೋರಿಸುವ ಸಲುವಾಗಿ ಈ ರೀತಿ ಕೋಟಿ ಕೋಟಿ ಹಣ ಹಾಕುವ ಬದಲು ಬಡವರಿಗೋ ನಿರ್ಗತಿಕರಿಗೋ ಕೊಟ್ಟಿದ್ರೆ ಅದನ್ನು ಅವರು ಬದುಕಿಗಾಗಿಯಾದ್ರೂ ಬಳಸಿಕೊಳ್ತಿದ್ರು ಎಂಬ ಸಾವಿರ ಟೀಕೆ ಟಿಪ್ಪಣಿಗಳ ಈ ಸುರಿಮಳೆ ಈ ಭೂಪನ ಮೇಲೆ ಬಂದಿದ್ದು ನಿಜ..